ಮ್ಯಾಂಚೆಸ್ಟರ್: ಭಾರತ-ನ್ಯೂಜಿಲ್ಯಾಂಡ್ ಸೆಮಿಫೈನಲ್ ಪಂದ್ಯದ ವೇಳೆ 2008ರ ಅಂಡರ್-19 ವಿಶ್ವಕಪ್ ಸೆಮಿಫೈನಲ್ ನೆನಪಾಗಿ ಕಾಡಿತ್ತು. ಇಲ್ಲಿ ಈ ಎರಡು ತಂಡಗಳೇ ಮುಖಾಮುಖೀಯಾಗಿದ್ದವು. ಕೊಹ್ಲಿ-ವಿಲಿಯಮ್ಸನ್ ಅವರೇ ನಾಯಕರಾಗಿದ್ದರು. ಇದಕ್ಕಿಂತ ಮಿಗಿಲಾದ ಸ್ವಾರಸ್ಯವೆಂದರೆ, ಆ ಪಂದ್ಯದಲ್ಲಿ ವಿಲಿಯಮ್ಸನ್ ವಿಕೆಟನ್ನು ಕೊಹ್ಲಿ ಉರುಳಿಸಿದ್ದರು!
ಸೋಮವಾರದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿಗೆ ಇದೇ ಪ್ರಶ್ನೆ ಎದುರಾಯಿತು. “ನಾಳೆಯೂ ನೀವು ವಿಲಿಯಮ್ಸನ್ ವಿಕೆಟ್ ಹಾರಿಸುವಿರಾ?’ ಎಂದು ತಮಾಷೆಯಾಗಿ ಕೇಳಲಾಯಿತು.
ಇದಕ್ಕೆ ಅಷ್ಟೇ ತಮಾಷೆಯಾಗಿ ಪ್ರತಿಕ್ರಿಯಿಸಿದ ಕೊಹ್ಲಿ, “ಏನು? ನಾನು ಕೇನ್ ವಿಕೆಟ್ ಉರುಳಿಸಿದೆನಾ? ನಿಜಕ್ಕೂ? ಇದು ಮತ್ತೆ ಸಂಭವಿಸುತ್ತದೆಂದು ನನಗನಿ ಸದು. ಇದೆಲ್ಲ ಕನಸಿನ ಮಾತು…’ ಎಂದು ನಕ್ಕರು.
ಇದಕ್ಕೆ ವಿಲಿಯಮ್ಸನ್ ಪ್ರತಿಕ್ರಿಯೆಯೂ ತಮಾಷೆ
ಯಾಗಿತ್ತು. “ಓಹ್ ಡಿಯರ್, ಟೆಲ್ ಮಿ ಹೌ (ನಗು). ಕೊಹ್ಲಿ ಉತ್ತಮ ಆಲ್‌ರೌಂಡರ್ ಆಗಬಲ್ಲರು ಎಂದು ನಾನು ಅಂದು ಎಣಿಸಿದ್ದೆ. ಆದರೆ ಅವರೀಗ ಬೌಲಿಂಗ್ ನಡೆಸುವುದೇ ಅಪರೂಪವಾಗಿದೆ’ ಎಂದರು.
“11 ವರ್ಷಗಳ ಬಳಿಕ ನಾವಿಬ್ಬರೂ ಸೀನಿಯರ್ ವಿಶ್ವಕಪ್‌ನಲ್ಲಿ ನಾಯಕರಾಗಿ ಪರಸ್ಪರ ಎದುರಾಗು ತ್ತಿರುವುದೊಂದು ಖುಷಿಯ ಸಂಗತಿ’ ಎಂದು ಕೊಹ್ಲಿ ಹೇಳಿದರು.