Advertisement

ಭರ್ಜರಿ ಬ್ಯಾಟಿಂಗ್; ಸಚಿನ್- ಪಾಂಟಿಂಗ್ ದಾಖಲೆ ಸರಿಗಟ್ಟಿದ ಕೇನ್ ವಿಲಿಯಮ್ಸನ್

04:18 PM Mar 18, 2023 | Team Udayavani |

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ಟೆಸ್ಟ್ ತಂಡದ ಮಾಜಿ ನಾಯಕ ಕೇನ್ ವಿಲಿಮಯ್ಸನ್ ಅವರು ಸದ್ಯ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ತಂಡಕ್ಕೆ ಅದ್ಭುತ ಜಯ ತಂದುಕೊಟ್ಟಿದ್ದ ವಿಲಿಯಮ್ಸನ್ ಇದೀಗ ಮತ್ತೊಂದು ಡಬಲ್ ಸೆಂಚುರಿ ಬಾರಿಸಿದ್ದಾರೆ.

Advertisement

ಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಅವರು 215 ರನ್ ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದಾರೆ. ಈ ಪಂದ್ಯದ ವೇಳೆ ಕೇನ್ ಕೆಲವು ದಾಖಲೆಗಳನ್ನು ಮುರಿದಿದ್ದಾರೆ.

ಈ ಇನ್ನಿಂಗ್ಸ್‌ ವೇಳೆ ಬಲಗೈ ಬ್ಯಾಟರ್ ಟೆಸ್ಟ್ ಕ್ರಿಕೆಟ್‌ನಲ್ಲಿ 8000 ರನ್ ಗಳಿಸಿದ ಮೊದಲ ನ್ಯೂಜಿಲೆಂಡ್ ಬ್ಯಾಟರ್ ಎಂಬ ಇತಿಹಾಸವನ್ನು ಸೃಷ್ಟಿಸಿದರು.

ಇದನ್ನೂ ಓದಿ:ಎಕ್ಸ್ ಪ್ರೆಸ್ ಹೆದ್ದಾರಿಯ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ : ಅನಿತಾ ಕುಮಾರಸ್ವಾಮಿ

ಅವರು ಈಗ 94 ಟೆಸ್ಟ್‌ ಗಳ 164 ಇನ್ನಿಂಗ್ಸ್‌ ಗಳಿಂದ 8124 ರನ್ ಗಳಿಸಿದ್ದಾರೆ. ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ 54.89 ಆಗಿದೆ, ಇದು ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಿಗಿಂತ ಉತ್ತಮವಾಗಿದೆ.

Advertisement

ಶನಿವಾರದಂದು ಕೇನ್ ಗಳಿಸಿದ 215 ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಆರನೇ ದ್ವಿಶತಕವಾಗಿದೆ. ಟೆಸ್ಟ್ ಸ್ವರೂಪದಲ್ಲಿ ಆರು 200 ಪ್ಲಸ್ ಸ್ಕೋರ್‌ ಗಳನ್ನು ಗಳಿಸಿದ ಸಚಿನ್ ಮತ್ತು ಮಾಜಿ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next