Advertisement

ಮಳೆ ನಡುವೆ ವಿಲಿಯಮ್ಸನ್‌ ದಾಖಲೆ

06:00 AM Mar 24, 2018 | Team Udayavani |

ಆಕ್ಲೆಂಡ್‌: ಸತತ ಮಳೆಯ ನಡುವೆಯೂ ನ್ಯೂಜಿಲ್ಯಾಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. 102 ರನ್‌ ಬಾರಿಸಿ ನ್ಯೂಜಿಲ್ಯಾಂಡ್‌ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು 18 ಶತಕ ಹೊಡೆದ ಸಾಧನೆಗೈದಿದ್ದಾರೆ. 

Advertisement

ಪ್ರವಾಸಿ ಇಂಗ್ಲೆಂಡ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದ 2ನೇ ದಿನದಾಟದಲ್ಲಿ ನಡೆದದ್ದು ಕೇವಲ 23.1 ಓವರ್‌ಗಳ ಆಟ ಮಾತ್ರ. 3ಕ್ಕೆ 175 ರನ್‌ ಮಾಡಿದ್ದ ನ್ಯೂಜಿಲ್ಯಾಂಡ್‌ 4ಕ್ಕೆ 229 ರನ್‌ ತನಕ ಸಾಗಿತು. ಈ ನಡುವೆ 91 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ವಿಲಿಯಮ್ಸನ್‌ 102 ರನ್‌ ಬಾರಿಸಿ ಇತಿಹಾಸ ನಿರ್ಮಿಸಿದರು. ಮಾರ್ಟಿನ್‌ ಕ್ರೋವ್‌ ಮತ್ತು ರಾಸ್‌ ಟಯ್ಲರ್‌ ತಲಾ 17 ಶತಕ ಹೊಡೆದದ್ದು ನ್ಯೂಜಿಲ್ಯಾಂಡಿನ ದಾಖಲೆಯಾಗಿತ್ತು. ಟಯ್ಲರ್‌ ಕೂಡ ಉತ್ತಮ ಫಾರ್ಮ್ನಲ್ಲಿರುವುದರಿಂದ ಅವರು ಕಪ್ತಾನನೊಂದಿಗೆ ಶತಕದ ರೇಸ್‌ ನಡೆಸುವ ಸಾಧ್ಯತೆ ಇದ್ದೇ ಇದೆ. 

ವಿಲಿಯಮ್ಸನ್‌ ಅವರ ಶತಕ 196 ಎಸೆತಗಳಲ್ಲಿ ಬಂತು. ಒಟ್ಟು 220 ಎಸೆತ ಎದುರಿಸಿದ ಅವರು 11 ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದರು. ಟೀ ವಿರಾಮದ ಬಳಿಕ ಜೇಮ್ಸ್‌ ಆ್ಯಂಡರ್ಸನ್‌ ಲೆಗ್‌ ಬಿಫೋರ್‌ ಮೂಲಕ ಕಿವೀಸ್‌ ಕಪ್ತಾನನ ವಿಕೆಟ್‌ ಕಿತ್ತರು. ಹೆನ್ರಿ ನಿಕೋಲ್ಸ್‌ 49 ಮತ್ತು ಬ್ರಾಡ್ಲಿ ವಾಟಿಗ್‌ 17 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 58 ರನ್ನಿಗೆ ಆಲೌಟ್‌ ಆಗಿತ್ತು. ನ್ಯೂಜಿಲ್ಯಾಂಡ್‌ ಇನ್ನೂ 6 ವಿಕೆಟ್‌ಗಳನ್ನು ಹೊಂದಿದ್ದು, 171 ರನ್ನುಗಳ ಮುನ್ನಡೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್‌ 
ಇಂಗ್ಲೆಂಡ್‌-58. ನ್ಯೂಜಿಲ್ಯಾಂಡ್‌-4 ವಿಕೆಟಿಗೆ 229 (ವಿಲಿಯಮ್ಸನ್‌ 102, ನಿಕೋಲ್ಸ್‌ ಬ್ಯಾಟಿಂಗ್‌ 49, ಲ್ಯಾಥಂ 26, ಆ್ಯಂಡರ್ಸನ್‌ 53ಕ್ಕೆ 3).

Advertisement
Advertisement

Udayavani is now on Telegram. Click here to join our channel and stay updated with the latest news.

Next