Advertisement

ಕಾಂದಿವಲಿ ಕನ್ನಡ ಸಂಘದಿಂದ ಶ್ರೀ ಕೃಷ್ಣ ಸಂಧಾನ ತಾಳಮದ್ದಳೆ

05:17 PM Apr 13, 2020 | Team Udayavani |

ಮುಂಬಯಿ: ಕಾಂದಿವಲಿ ಕನ್ನಡ ಸಂಘದ ವತಿಯಿಂದ ಶ್ರೀ ಕೃಷ್ಣ ಸಂಧಾನ ಯಕ್ಷಗಾನ  ತಾಳಮದ್ದಳೆಯು ಸೆ. 15ರಂದು ಕಾಂದಿವಲಿ ಪಶ್ಚಿಮದ ಪೊಯಿಸಾರ್‌ ಜಿಮಾVನದಲ್ಲಿ ಜರಗಿತು.

Advertisement

ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಇವರ ಆಯೋಜನೆಯಲ್ಲಿ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕಾಂದಿವಲಿ ಕನ್ನಡ ಸಂಘದ ಅಧ್ಯಕ್ಷ ಪೊಲ್ಯ ಜಯಪಾಲ್‌ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಸಂಚಾಲಕ ಪ್ರಕಾಶ್‌ ಎಂ. ಶೆಟ್ಟಿ ಸುರತ್ಕಲ್‌ ಅವರು ಕಾಂದಿವಲಿ ಪರಿಸರದಲ್ಲಿ ತಾಳಮದ್ದಳೆ ಕಾರ್ಯಕ್ರಮವನ್ನು ಆಯೋಜಿಸಲು ಅನುಮಾಡಿಕೊಟ್ಟು ಸಹಕರಿಸಿದ ಕಾಂದಿವಲಿ ಕನ್ನಡ ಸಂಘದ ಪರವಾಗಿ ಅಧ್ಯಕ್ಷ ಪೊಲ್ಯ ಜಯಪಾಲ ಶೆಟ್ಟಿ ಅವರನ್ನು ಅಭಿನಂದಿಸಿ ಗೌರವಿಸಿದರು.

ಕಾಂದಿವಲಿ ಕನ್ನಡ ಸಂಘದ ಗೌರವಾಧ್ಯಕ್ಷ ಜಿ. ಟಿ. ಪೂಜಾರಿ, ಉಪಾಧ್ಯಕ್ಷ ಪ್ರೇಮನಾಥ್‌ ಪಿ. ಕೋಟ್ಯಾನ್‌, ಸಲಹೆಗಾರರಾದ ಜಯಕರ ಶೆಟ್ಟಿ, ಗೌರವ ಕೋಶಾಧಿಕಾರಿ ಸುಂದರ ಶೆಟ್ಟಿ, ಮಂಜಯ್ಯ ಸಿ. ಅಮೀನ್‌, ಸಾಯಿಲ್‌ ಎಸ್‌. ಕುಮಾರ್‌, ಜಯಕರ ಕುಕ್ಯಾನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಾ ಎನ್‌. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಯಶೋದಾ ಎಸ್‌. ಶೆಟ್ಟಿ, ಜಯಶ್ರೀ ಆಳ್ವ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಗೌರವ ಕಾರ್ಯದರ್ಶಿ ಯೋಗೇಶ್‌ ಕೆ. ಹೆಜ್ಮಾಡಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಉಮೇಶ್‌ ಸುರತ್ಕಲ್‌ ಅವರು ವಂದಿಸಿದರು. ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಫುಲ್ಲಚಂದ್ರ ನೆಲ್ಯಾಡಿ, ಅಮೃತಾ ಅಡಿಗ, ಚೆಂಡೆ-ಮದ್ದಳೆಯಲ್ಲಿ ಸತ್ಯನಾರಾಯಣ ಅಡಿಗ, ಗಣೇಶ್‌ ಮಯ್ಯ ಅವರು ಸಹಕರಿಸಿದರು.

Advertisement

ಅರ್ಥದಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್‌, ಜಬ್ಟಾರ್‌ ಸಮೋ ಸಂಪಾಜೆ, ರಾಧಾಕೃಷ್ಣ ಕಲ್ಚಾರ್‌, ಗಣೇಶ್‌ ಶೆಟ್ಟಿ ಕನ್ನಡಿಕಟ್ಟೆ, ಎಂ. ಕೆ. ರಮೇಶ್‌ ಆಚಾರ್ಯ, ವಿನಯ್‌ ಆಚಾರ್ಯ ಹೊಸಬೆಟ್ಟು ಅವರು ಪಾಲ್ಗೊಂಡಿದ್ದರು. ತುಳು-ಕನ್ನಡಿಗರು, ಕಲಾಭಿಮಾನಿಗಳು, ಸ್ಥಳೀಯ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜ ಸೇವಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪರಿಸರದ ತುಳು-ಕನ್ನಡಿಗರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next