ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ “ಮರೀಚಿ’ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.
ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಟ ವಿಜಯ್ ರಾಘವೇಂದ್ರ, “ಈಗಾಗಲೇ “ಮರೀಚಿ’ ಸಿನಿಮಾದ ಟೀಸರ್ ಹಾಗೂ ಹಾಡುಗಳು ಜನರನ್ನು ತಲುಪಿವೆ. ಈಗ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಮಾ ಇದೇ ಡಿ. 8ಕ್ಕೆ ಬಿಡುಗಡೆಯಾಗಲಿದೆ. ತಾಂತ್ರಿಕವಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡು ಈ ಸಿನಿಮಾ ಮಾಡಲಾಗಿದೆ. ಸಿನಿಮಾವನ್ನು ತುಂಬ ಪ್ರೀತಿಸುವ ನಿರ್ಮಾಪಕರು, ನಿರ್ದೇಶಕ ಸಿದ್ಧುವ್ ಅವರಿಂದ ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ಎಲ್ಲರೂ ಒಟ್ಟಾಗಿ ಕೂತು ನೋಡುವಂಥ ಸಿನಿಮಾ ಇದಾಗಿದೆ’ ಎಂದು “ಮರೀಚಿ’ಯ ಮೇಲೆ ನಿರೀಕ್ಷೆಯ ಮಾತುಗಳನ್ನಾಡಿದರು.
ನಿರ್ದೇಶಕ ಕಂ ನಿರ್ಮಾಪಕ ಸಿದ್ಧುವ್ ಮಾತನಾಡಿ, “ಪೊಲೀಸ್ ಆμàಸರ್ ಲೈಫ್ ಸ್ಟೈಲ್ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕನ ಕನಸನ್ನು ನನಸು ಮಾಡಲು ಕಲಾವಿದರು, ತಂತ್ರಜ್ಞರ ಬೆಂಬಲ ತುಂಬ ಮುಖ್ಯ. ನಾನು ಈ ವಿಚಾರದಲ್ಲಿ ಅದೃಷ್ಟವಂತ. ಇಡೀ ಚಿತ್ರತಂಡ ಆರಂಭದಿಂದ ಇಲ್ಲಿವರೆಗೂ ಬೆಂಬಲವಾಗಿ ನಿಂತಿದೆ. ಹೊಸ ನಿರ್ದೇಶಕನಾದರೂ ಎಲ್ಲರೂ ಸಪೋರ್ಟ್ ಮಾಡಿದ್ದಾರೆ. ಹುಟ್ಟುತ್ತಲೇ ಯಾರು ಕ್ರೈಂ ಮಾಡಬೇಕೆಂದುಕೊಂಡಿರುವುದಿಲ್ಲ. ಆದರೆ ಪರಿಸ್ಥಿತಿ ಮನುಷ್ಯನನ್ನು ಬದಲಾಯಿಸುತ್ತವೆ. ತಂತ್ರಜ್ಞಾನ ನೆಗೆಟಿವ್ ಮನಸ್ಸಿಗೆ ಸಿಕ್ಕಾಗ ಏನಾಗುತ್ತದೆ ಅನ್ನೋದನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ’ ಎಂದರು.
“ಮರೀಚಿ’ ಸಿನಿಮಾದಲ್ಲಿ ವಿಜಯ ರಾಘವೇಂದ್ರ, ಸೋನುಗೌಡ ಜತೆಗೆ ಅಭಿದಾಸ್, ಸ್ಪಂದನಾ ಸೋಮಣ್ಣ, ಆರ್ಯನ್, ಶೃತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಮನೋಹರ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನವಿದೆ.
ಈಗಾಗಲೇ “ಮರೀಚಿ’ ಸಿನಿಮಾದ ಫಸ್ಟ್‌ಲುಕ್ ಮತ್ತು ಟೀಸರ್ ನೋಡುಗರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಈಗ ಟ್ರೇಲರ್ ಕೂಡ ನಿಧಾನವಾಗಿ ಸದ್ದು ಮಾಡುತಿ