Advertisement

Kanakapura: ಡಿಸಿಎಂ‌ ಸ್ವಕ್ಷೇತ್ರದಲ್ಲಿ ಜೆಡಿಎಸ್ ಗೆಲುವು

11:00 AM Dec 30, 2023 | Team Udayavani |

ರಾಮನಗರ: ಡಿಸಿಎಂ ಸ್ವಕ್ಷೇತ್ರ ಕನಕಪುರದ ನಗರಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಲೋಕೇಶ್ ಗೆಲುವು ಸಾಧಿಸಿದ್ದಾರೆ. 52 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

Advertisement

ನಗರಸಭಾ 5ನೇ ವಾರ್ಡ್ (ಕುರುಪೇಟೆ) ಗೆ ಉಪಚುನಾವಣೆ ನಡೆದಿದೆ. ಹಿಂದೆ ನಗರಸಭಾ ಸದಸ್ಯರಾಗಿದ್ದ ಕಾಂಗ್ರೆಸ್ ಸದಸ್ಯ ಕೃಷ್ಣಪ್ಪ ನಿಧನದಿಂದ ತೆರವಾಗಿದ್ದ‌ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದಿತ್ತು.

ಕಾಂಗ್ರೆಸ್ ನಿಂದ ಚಾಮರಾಜು, ಬಿಜೆಪಿಯಿಂದ ಶಿವರುದ್ರ, ಜೆಡಿಎಸ್ ನಿಂದ ಲೋಕೇಶ್ ಸ್ಪರ್ಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next