Advertisement

ಕನಕದಾಸ, ಟಿಪ್ಪು ಜಯಂತಿ ಅದ್ಧೂರಿ ಆಚರಣೆಗೆ ತೀರ್ಮಾನ

12:39 PM Oct 30, 2017 | Team Udayavani |

ತಿ.ನರಸೀಪುರ: ಸಮುದಾಯ ಸಂಘಟನೆಗಳ ಸಹಕಾರವನ್ನು ಪಡೆದುಕೊಂಡು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಸಂತ ಶ್ರೇಷ್ಠ ಕವಿ ಭಕ್ತ ಕನಕದಾಸರು ಹಾಗು ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಜನ್ಮ ದಿನಾಚರಣೆಯನ್ನು ಸಾಂಪ್ರಾದಾಯಿಕವಾಗಿ ಆಚರಣೆ ಮಾಡಲು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಎರಡೂ ಜಯಂತಿಗಳ ಪೂರ್ವಸಿದ್ಧತಾ ಸಭೆಯಲ್ಲಿ ತಾಲೂಕು ಕುರುಬರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಕಚೇರಿ ಆವರಣದಲ್ಲಿಯೇ ನ.6 ರಂದು ಭಕ್ತ ಕನಕದಾಸರ ಜಯಂತಿಯನ್ನು ಹಾಗೂ ಮುಸ್ಲಿಂ ಮುಖಂಡರ ಸಹಕಾರ ಪಡೆದು ನ.10 ರಂದು ಟಿಪ್ಪು ಸುಲ್ತಾನ್‌ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ತೀರ್ಮಾನಿಸಲಾಯಿತು.

ಕುರುಬರ ಸಂಘದ ಅಧ್ಯಕ್ಷ ಟಿ.ಎಸ್‌.ಪ್ರಶಾಂತ್‌ ಬಾಬು ಮಾತನಾಡಿ, ಕನಕದಾಸರ ಜಯಂತಿಯನ್ನು ಕಳೆದ ಎರಡು ವರ್ಷಗಳಿಂದ ಸರಳವಾಗಿ ಆಚರಣೆ ಮಾಡಲಾಗಿದೆ. ಈ ಬಾರಿಯಾದರೂ ತಾಲೂಕು ಆಡಳಿತ ಸಂಘ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ವಿವಿಧ ಪ್ರಗತಿಪರ ಮುಖಂಡರ ಸಹಭಾಗಿತ್ವದಲ್ಲಿ ಒಟ್ಟುಗೂಡಿ ಅದ್ಧೂರಿಯಾಗಿ ಆಚರಣೆ ಮಾಡಬೇಕು. ನಮ್ಮ ಸಹಕಾರವನ್ನು ಸಂಪೂರ್ಣವಾಗಿ ನೀಡುತ್ತೇವೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು ಮಾತನಾಡಿ, ವಾಡಿಕೆಯಂತೆ ಶ್ರೀಗುಂಜಾ ನರಸಿಂಹಸ್ವಾಮಿ ದೇವಾಲಯದ ಮುಂಭಾಗ ನಂದಿಧ್ವಜ ಕಂಬಕ್ಕೆ ಪೂಜೆಸಲ್ಲಿಸಿ ಉತ್ಸವದ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುವ ಮೆರವಣಿಗೆ ತಾಲೂಕು ಕಚೇರಿ ಆವರಣದಲ್ಲಿ ತಲುಪಲಿದೆ.

ಸಂತ ಶ್ರೇಷ್ಠ ಕವಿ ಬಗ್ಗೆ ಅಧ್ಯಾಯನ ಮಾಡಿರುವರನ್ನು ಮುಖ್ಯ ಭಾಷಣಕಾರರಾಗಿ ಆಹ್ವಾನಿಸಲಾಗುವುದು. ಮೆರವಣಿಯಲ್ಲಿ ಕನಕ ದಾಸರ ಕೀರ್ತನೆಗಳ ಗಾಯನ ಹಾಗೂ ಸ್ತಬ್ಧ ಚಿತ್ರಗಳ ಮೆರವಣಿಗೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ತಾಲೂಕು ಪಂಚಾಯಿತಿ ಅಧ್ಯಕ್ಷ ಸಿ.ಚಾಮೇಗೌಡ, ಜಿಪಂ ಸದಸ್ಯ  ಟಿ.ಎಚ್‌.ಮಂಜುನಾಥ್‌, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಸದಸ್ಯರಾದ ಎಂ.ರಮೇಶ್‌, ಬಿ.ಸಾಜೀದ್‌ ಅಹಮ್ಮದ್‌, ಕೆ.ಎಸ್‌.ಗಣೇಶ್‌,

Advertisement

-ರತ್ನರಾಜ್‌, ಪುರಸಭೆ ಸದಸ್ಯ ಸಿ.ಉಮೇಶ್‌, ಭೈರಾಪುರ ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಂ.ನಂಜುಡಸ್ವಾಮಿ, ಮುಖಂಡರಾದ ಸಿ.ಪುಟ್ಟಮಲ್ಲಯ್ಯ, ಮಾದಯ್ಯ, ಕೆಬ್ಬೇಹುಂಡಿ ಮಹೇಶ್‌, ಆಲಗೂಡು ಶಿವಣ್ಣ, ಬನ್ನೂರು ನಾರಾಯಣ್‌, ಅಕºರ್‌ ಪಾಷ್‌, ಬಿ.ಮನ್ಸೂರು ಅಲಿ, ಎನ್‌.ಕೆ.ಫ‌ರಿದ್‌, ಸಾಹೀದ್‌, ಬಿಇಒ ಮರಿಸ್ವಾಮಿ , ಸಿಡಿಪಿಒ ಬಸವರಾಜು, ಶಿರಸ್ತೇದಾರ್‌ ಪ್ರಭುರಾಜ್‌, ರಾಜೇಶ್‌, ಕುಪ್ಯ ಪುಟ್ಟಸ್ವಾಮಿ ಮುಂತಾದವರಿದ್ದರು.

ನಾಮಿನಿ ಸದಸ್ಯರಿಂದ ಸಭೆ ಬಹಿಷ್ಕಾರ: ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಭಕ್ತ ಕನಕದಾಸರು ಹಾಗೂ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಅಂಗವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಟ್ಟಣದ ಪುರಸಭೆಯ ನೂತನ ನಾಮ ನಿರ್ದೇಶಿತ ಸದಸ್ಯರಾದ ಬಿ.ಮರಯ್ಯ, ಆಲಗೂಡು ನಾಗರಾಜು, ಹಾಗೂ ಮುದ್ದಬೀರನಹುಂಡಿ ಗುರುಸ್ವಾಮಿ ಸಭೆಯನ್ನು ಬಹಿಷ್ಕರಿಸಿದರು. ಅಧಿಕಾರಿಗಳು ನಮ್ಮನ್ನು ವೇದಿಕೆಗೆ ಆಹ್ವಾನಿಸದೇ ಅಗೌರವ ತೋರಿದ್ದಾರೆ ಎಂದು ಬೇಸರಗೊಂಡ ಮೂವರು ನಾಮಿನಿ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರ ಹೋದರು.

ಮತ್ತೂಮ್ಮೆ ಟಿಪ್ಪು ಜಯಂತಿ ಪೂರ್ವಭಾವಿ ಸಭೆ: ತಾಲೂಕು ಆಡಳಿತದಿಂದ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಪೂರ್ವಭಾವಿ ಸಭೆಗೆ ಯಾವುದೇ ಆಹ್ವಾನ ನೀಡಿಲ್ಲವೆಂದು ಬನ್ನೂರು ಪುರಸಭೆ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಮುನಾವರ್‌ಪಾಷ ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಕೆಲವು ಕಾಲ ಗೊಂದಲ, ಗದ್ದಲ ಉಂಟಾಯಿತು. ವಿವಿಧ ಸಂಘಟನೆಯ ಮುಖಂಡರು ಹಾಗೂ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಗದ್ದಲವನ್ನು ತಿಳಿಗೊಳಿಸಿ ನ.2 ರಂದು ಮತ್ತೂಂದು ಪೂರ್ವಭಾವಿ ಸಭೆ ಕರೆದು ಅಂತಿಮ ಸಿದ್ಧತೆಗಳ ಬಗ್ಗೆ ಚರ್ಚಿಸಲು ನಿರ್ಧಾರ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next