ದಾವಣಗೆರೆ: ದಾಸ ಶ್ರೇಷ್ಠ ಕನಕದಾಸರು ಜಾತಿ, ಧರ್ಮ ಮೀರಿ ಸಾಮಾಜಿಕನ್ಯಾಯ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ದಾರ್ಶನಿಕ ಎಂದು ದಾವಣಗೆರೆವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತತ್ವಜ್ಞಾನಿ ಕನಕದಾಸರ ಚಿಂತನೆ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಬೆಳೆದು ಐಷಾರಾಮಿ ಜೀವನ ಮಾಡಬಹುದಾಗಿದ್ದಕನಕದಾಸರು ಲೌಕಿಕ ಸುಖಕ್ಕಿಂತಪಾರಮಾರ್ಥಿಕ ಸುಖವನ್ನು ಅರಸಿದರು.ಭಗವಂತನ ಸನ್ನಿಧಾನದಲ್ಲಿ ಶಾಶ್ವತ ನೆಲೆ ಕಂಡುಕೊಂಡರು. ತ್ಯಾಗ, ಅಚಲ ಭಕ್ತಿ, ದೇವರಆರಾಧನೆಯಲ್ಲಿ ತಮ್ಮನ್ನುಅರ್ಪಿಸಿಕೊಂಡವರು ಎಂದು ಸ್ಮರಿಸಿದರು. ಕನಕದಾಸರು ತಮ್ಮನ್ನು ದಾಸರದಾಸ ಎನ್ನುವ ಮೂಲಕ ಸಮರ್ಪಣಾ ಭಾವತೋರಿದ್ದಾರೆ. ಅಂತಹ ಹಂತವನ್ನು ತಲುಪುವುದು ಸುಲಭವಲ್ಲ. ಅವರಲ್ಲಿನಭಕ್ತಿ, ಸೇವಾಕಾಂಕ್ಷೆಗಳು ಉನ್ನತಿಗೆ ಏರಿಸಿದವು.ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆಮ್ಮದೇಯಾದ ಕೊಡುಗೆ ನೀಡಿದ್ದಾರೆ. ಅವರಕಾವ್ಯಗಳು ವಾಸ್ತವಕ್ಕೆ ಹಿಡಿದ ಕನ್ನಡಿ ಎಂದು ತಿಳಿಸಿದರು.
ಕುಲಸಚಿವ ಪ್ರೊ| ಬಸವರಾಜ ಬಣಕಾರ ಮಾತನಾಡಿ, ದೇವರು ಭಕ್ತನಿಗೆ ದರ್ಶನ ನೀಡದಿದ್ದಾಗ ನಿಷ್ಕಲ್ಮಷ ಭಕ್ತಿ, ಅಚಲ ಸಂಕಲ್ಪ ಇದ್ದಾಗ ಭಕ್ತನ ಬಳಿಗೆ ದೇವರು ಬರುತ್ತಾನೆ ಎಂಬುದನ್ನು ತೋರಿಸಿಕೊಟ್ಟವರು ಕನಕದಾಸರು ಎಂದು ತಿಳಿಸಿದರು.
ಕನ್ನಡಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ| ಎಚ್. ವಿಶ್ವನಾಥ್ ಮಾತನಾಡಿ, ಕನಕದಾಸರು ಬದುಕುವ ಶೈಲಿಯನ್ನು ಕಲಿಸುವ ಜೊತೆಗೆ ಅನಿಷ್ಠ, ಅನಾಚಾರಗಳನ್ನು ಬಂಡೆದ್ದು ಪ್ರತಿಭಟಿಸಿದಛಲಗಾರ. ಜಾತ್ಯತೀತ ಮನೋಭಾವ ಬಗ್ಗೆಎಲ್ಲರಿಗೂ ಅರಿವು ಮೂಡಿಸುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಕಲಾ ನಿಕಾಯದ ಡೀನ್ ಪ್ರೊ| ಕೆ.ಬಿ. ರಂಗಪ್ಪ, ಉಪಕುಲಸಚಿವ ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಅಭಿವೃದ್ಧಿ ವಿಭಾಗದ ಸಂಯೋಜನಾ ಧಿಕಾರಿಕುಮಾರ ಸಿದ್ಧಮಲ್ಲಪ್ಪ ಸ್ವಾಗತಿಸಿದರು.