Advertisement

ವಿಜಯ್‌ ಹುಟ್ಟುಹಬ್ಬಕ್ಕೆ ಕನಕ ತಂಡದ ಗಿಫ್ಟ್

10:49 AM Jan 14, 2018 | Team Udayavani |

“ದುನಿಯಾ’ ವಿಜಯ್‌ ಅಭಿನಯದ “ಕನಕ’ ಚಿತ್ರವು ಸೆನ್ಸಾರ್‌ ಆಗಿದ್ದು, “ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಚಿತ್ರವು ಜವವರಿ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ಚಿತ್ರವು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ವಿಜಯ್‌ ಅಭಿನಯದ ಚಿತ್ರಗಳಲ್ಲೇ, ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರ “ಕನಕ’ ಆಗುವ ಸಾಧ್ಯತೆ ಇದೆ.

Advertisement

“ಕನಕ’ ಬಿಡುಗಡೆಯಾಗುವುದಕ್ಕಿಂದ ಆರು ದಿನಗಳ ಮುನ್ನ, ಅಂದರೆ ಡಿಸೆಂಬರ 20ಕ್ಕೆ ವಿಜಯ್‌ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಕಳೆದ ಬಾರಿ ಅನಿಲ್‌ ಮತ್ತು ಉದಯ್‌ ಅವರ ಸಾವಿನಿಂದ ದುಃಖತಪ್ತರಾಗಿದ್ದ ವಿಜಯ್‌, ದೊಡ್ಡ ಮಟ್ಟದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.

ಈ ಬಾರಿ “ಕನಕ’ ಚಿತ್ರದ ಬಿಡುಗಡೆಯೂ ಹತ್ತಿರದಲ್ಲೇ ಇರುವುದರಿಂದ, ಹುಟ್ಟುಹಬ್ಬಕ್ಕೆ ವಿಜಯ್‌ ಅವರ ಸಾವಿರಾರು ಅಭಿಮಾನಿಗಳನ್ನು ಸೇರಿಸಿ, ದೊಡ್ಡ ಮಟ್ಟದಲ್ಲಿ ಆಚರಿಸಲು “ಕನಕ’ ತಂಡ ತೀರ್ಮಾನಿಸಿದೆ. ಅದಕ್ಕೆಂದೇ ವಿಜಯ್‌ ಅವರ ಕತ್ರಿಗುಪ್ಪೆ ನಿವಾಸದ ಬಳಿ, 80 ಅಡಿ ಕಟೌಟ್‌ ನಿಲ್ಲಿಸಲು ನಿರ್ದೇಶಕ-ನಿರ್ಮಾಪಕ ಆರ್‌. ಚಂದ್ರು ತಯಾರಿ ನಡೆಸುತ್ತಿದ್ದಾರೆ.

ವಿಜಯ್‌ ತಮ್ಮ ಹುಟ್ಟುಹಬ್ಬವನ್ನು 20ರಂದು ಆಚರಿಸಿಕೊಳ್ಳುತ್ತಾರಾದರೂ, 19ರ ರಾತ್ರಿಯಿಂದಲೇ ಸಂಭ್ರಮಾಚರಣೆ ಶುರುವಾಗಲಿದೆ. ಇನ್ನು 20ರಂದು ಬೆಳಿಗ್ಗೆ, ವಿಜಯ್‌ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುವುದರ ಜೊತೆಗೆ, ಅಲ್ಲಿ ಜಮಾಯಿಸುವ ಸಾವಿರಾರು ಅಭಿಮಾನಿಗಳಿಗೆ ಕೇಕು ಮತ್ತು ಬಿರಿಯಾನಿಯನ್ನು ಹಂಚಲಾಗುತ್ತದಂತೆ.

Advertisement

Udayavani is now on Telegram. Click here to join our channel and stay updated with the latest news.

Next