Advertisement

ದುಷ್ಕರ್ಮಿಗಳನ್ನು ಪತ್ತೆಹಚ್ಚಿದ ಕಮ್ಮನಹಳ್ಳಿ ದೌರ್ಜನ್ಯ ಸಂತ್ರಸ್ತೆ

11:53 AM Mar 01, 2017 | Team Udayavani |

ಬೆಂಗಳೂರು: ಕಮ್ಮನಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ಯುವತಿ ಕೊನೆಗೂ ಎರಡು ತಿಂಗಳ ಬಳಿಕ ಆರೋಪಿಗಳ ಗುರುತು ಪತ್ತೆ ಪರೇಡ್‌ಗೆ ಮಂಗಳವಾರ ಹಾಜರಾಗಿದ್ದರು. 

Advertisement

ಬಾಣಸವಾಡಿ ಪೊಲೀಸ್‌ ಉಪವಿಭಾಗದಿಕಾರಿ ರವಿ ಕುಮಾರ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಸಂತ್ರಸ್ತ ಯುವತಿ ಆರೋಪಿಗಳ ಗುರುತು ಪತ್ತೆ ಪರೇಡ್‌ನ‌ಲ್ಲಿ ಬಂದು ಪ್ರಕರಣದ ಆರೋಪಿಗಳನ್ನು ಗುರುತಿಸಿದ್ದಾರೆ ಎಂದು ತನಿಖಾಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಈ  ಹಿಂದೆ ಎರಡು ಬಾರಿ ಆರೋಪಿಗಳ ಗುರುತು ಪತ್ತೆಗೆ ಸಂತ್ರಸ್ತ ಯುವತಿಯನ್ನು ಪೊಲೀಸರು ಕರೆದಿದ್ದರಾದರೂ ಸಂತ್ರಸ್ತ ಯುವತಿ ಪರೇಡ್‌ಗೆ ಹಾಜರಾಗಿರಲಿಲ್ಲ. 
ಘಟನೆ ನಡೆದ ಬಳಿಕ ಸಂತ್ರಸ್ತ ಯುವತಿ ಹೆದರಿಕೆ­ಯಿಂದ ಬಾಣಸವಾಡಿ ಪೊಲೀಸ್‌ ಸರಹದ್ದಿನಿಂದ ಮನೆ ಖಾಲಿ ಮಾಡಿಕೊಂಡು ಹೋಗಿದ್ದಳು. ಮನೆ ಮಾಡಿರುವ ವಿಷಯ ಪೊಲೀಸರಿಗೆ ತಿಳಿಸಿರಲಿಲ್ಲ. ಪೊಲೀಸರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. 

ಸಂತ್ರಸ್ತ ಯುವತಿಗೆ ಪೊಲೀಸರು ಧೈರ್ಯ ತುಂಬಿ , ಆಕೆಗೆ ಭದ್ರತೆ ನೀಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಇದೆಲ್ಲ ಭರವಸೆಗಳ ಬಳಿಕ ಬಂದ ಯುವತಿ ಆರೋಪಿಗಳ ಗುರುತ ಪತ್ತೆ ಪರೇಡ್‌ನ‌ಲ್ಲಿ ಪಾಲ್ಗೊಂಡು ತನಿಖೆಗೆ ಸಹಕರಿಸಿದ್ದಾಳೆ ಎಂದು ತನಿಖಾಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ. 

ಸಂತ್ರಸ್ತ ಯುವತಿಯಿಂದ ಘಟನೆ ಸಂಬಂಧ ಹೇಳಿಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ಧ ಶೀಘ್ರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾ ಗುವುದು. ಯುವತಿಯ ಹೇಳಿಕೆಯಿಂದ ಪ್ರಕರಣದ ತನಿಖೆ ಸಂಪೂರ್ಣ ಮುಗಿದಂತಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಹೊಸ ವರ್ಷಾಚರಣೆ ದಿನವಾದ ಜ.1 ರಂದು ಸಂತ್ರಸ್ತ ಯುವತಿ ತಡರಾತ್ರಿ 2.41 ಗಂಟೆ ಸುಮಾರಿಗೆ ಕಮ್ಮನಹಳ್ಳಿಯಲ್ಲಿರುವ ತನ್ನ ಪಿ.ಜಿ.ಗೆ ಸಮೀಪದಲ್ಲಿ ಆಟೋ ಇಳಿದು ನಡೆದುಕೊಂಡು ಹೋಗುತ್ತಿದ್ದರು. 

Advertisement

ದಾರಿ ಮಧ್ಯೆ ಬೈಕ್‌ನಲ್ಲಿ ಎದುರಾದ ಆರೋಪಿ ಅಯ್ಯಪ್ಪ ಮತ್ತು ಆತನ ಸ್ನೇಹಿತ ಲೆನೋ ಯುವತಿಯನ್ನು ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರಕರಣ ದಾಖಲಾದ 24 ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next