Advertisement
ದಕ್ಷಿಣ ಭಾರತದ ಐತಿಹಾಸಿಕ ಕಮನೀಯ ಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಅವರಣದಲ್ಲಿ ಪ್ರತಿವರ್ಷದಂತೆ ಸಂಕ್ರಾಂತಿ ಹಬ್ಬದ ಮಾರನೇ ದಿನದಿಂದ ರಾಸುಗಳ ಜಾತ್ರೆ ಪ್ರಾರಂಭವಾಗಿದ್ದು ರಾಸುಗಳನ್ನು ಕೊಳ್ಳಲು ಮಾರಲು ರಾಜ್ಯದ ಮೂಲೆ ಮೂಲೆಯಿಂದ ರೈತರು ಆಗಮಿಸಿ ಭರ್ಜರಿ ವಹಿವಾಟು ನಡೆಸುತ್ತಿದ್ದಾರೆ.
ಸಂಕ್ರಾಂತಿ ಹಬ್ಬದಿಂದ 8 ದಿನಗಳ ಕಾಲ ನಡೆಯುವ ರಾಸುಗಳ ಜಾತ್ರೆಗೆ ಹಳ್ಳಿಕಾರ್ ತಳಿ, ಅಮೃತಮಹಲ್, ಹಳ್ಳಿ, ರಾಣಿ, ಬಿಳಿ, ಕಪ್ಪು ಬಣ್ಣದ ಎತ್ತುಗಳು ಮಾರಾಟಕ್ಕೆ ಬೇಡಿಕೆಯಾಗಿದೆ. ಅತಿಹೆಚ್ಚು ಅಪ್ಪಟ ನಾಟಿ ಹಸುಗಳು, ಹಾಲು ಕೊಡುವ ಹಸು, ಹಾಗೂ ಹೊಲ ಉಳುವ ಎತ್ತುಗಳು ಹೆಚ್ಚು ಬೇಡಿಕೆಯ ರಾಸುಗಳಾಗಿ ಮಾರಾಟವಾಗುತ್ತಿವೆ.
Related Articles
Advertisement
ಸಂಕ್ರಾಂತಿ ಹಬ್ಬದ ಮಾರನೇ ದಿನ ಪ್ರಾರಂಭವಾಗುವ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ರಾಸುಗಳ ಜಾತ್ರೆ ಪ್ರಾರಂಭ. ಫೆ.14 ರಿಂದ ಫೆ.25ರವರೆಗೂ ಸ್ವಾಮಿಗೆ ವಿಶೇಷ ಹೋಮ ಹವನ ಪೂಜೆಗಳು ನಡೆಯಲಿದ್ದು, ಫೆ.16ರ ಶುಕ್ರವಾರ ಬ್ರಹ್ಮ ರಥೋತ್ಸವ ಜರುಗಲಿದೆ. ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಆಂಜನೇಯಸ್ವಾಮಿ ಭಕ್ತರು ಆಗಮಿಸಲಿದ್ದಾರೆ.
3ಸಾವಿರ ವರ್ಷಗಳ ಇತಿಹಾಸ ಇರುವ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ 30 ಸಾವಿರ ರಾಸುಗಳ ವಹಿವಾಟು, ಕರೋನ ಹಾಗೂ ಕಾಲುಬಾಯಿ ಕಾಯಿಲೆಯಿಂದ ಕುಂಠಿತವಾಗಿದ್ದ ಜಾತ್ರೆ ಮತ್ತೆ ಬಾರಿ ರಾಸುಗಳ ಜಾತೆಯಿಂದಾಗಿ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಜಾತ್ರೆಗೆ ಹಸುಗಳು ಬರಲಿಲ್ಲ. ಈಗ 3ಸಾವಿರಕ್ಕೂ ಹೆಚ್ಚು ರಾಸುಗಳು ಬರುತ್ತಿದ್ದು ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತಿದೆ. ಸುಮಾರು ನಾಲ್ಕು ತರದ ತಳಿಗಳು ರಾಸುಗಳು ಜಾತ್ರೆ ಬಂದಿವೆ. ನಾವು ಚಿಕ್ಕ ವಯಸ್ಸಿನಿಂದಲೂ ಸಹ ಈ ಜಾತ್ರೆಗೆ ಬರುತ್ತಿದ್ದೇವೆ.-ನಾಗರಾಜು ರೈತ ಆರೂಡಿ ಗೌರಿಬಿದನೂರು ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ರಾಸು ಜಾತ್ರೆ ಹಾಗೂ ರಥ ಸಪ್ತಮಿ ಇರುವುದರಿಂದ ರೈತರಿಗೆ ಹಾಗೂ ಅಂಗಡಿ ವ್ಯಾಪಾರ ಮಾಡುವವರಿಗೆ ತೊಟ್ಟಿಗಳಿಗೆ ನೀರು ಬಿಡಲಾಗಿದೆ. ಟ್ಯಾಂಕರ್ ಮೂಲಕ ನೀರನ್ನು ಬಿಡುವ ವ್ಯವಸ್ಥೆ ಮಾಡಲಾಗಿದೆ. ಜಾತ್ರಾ ಅವರಣದಲ್ಲಿರುವ ಕಂಬಗಳಿಗೆ ವಿದ್ಯುತ್ ಬಲ್ಪ್ ಅಳವಡಿಸಲಾಗಿದ್ದು, ಸ್ಥಳದಲ್ಲಿಯೇ ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು 24 ಗಂಟೆ ಇರುವಂತೆ ಸೂಚಿಸಲಾಗಿದೆ
-ಕೆ.ಮಂಜುನಾಥ್ ತಹಸೀಲ್ದಾರ್ ಕೊರಟಗೆರೆ ವರದಿ: ಸಿದ್ದರಾಜು ಕೆ. ಕೊರಟಗೆರೆ