ಪುಂಜಾಲಕಟ್ಟೆ: ಕಂಬಳ ಋತುವಿನ ಪ್ರಥಮ ಕಂಬಳ ಬಂಟ್ವಾಳ ತಾಲೂಕಿನ ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿಭಾಗದಲ್ಲಿ ಮಹಿಷಮರ್ದಿನಿ ಕಂಬಳ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ರವಿವಾರ ನಡೆಯಿತು.
ಒಟ್ಟು 176 ಜೋಡಿ ಕೋಣಗಳು ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿದ್ದವು. ಕಿರಣ್ ಕುಮಾರ್ ಮಂಜಿಲ ಮತ್ತು ಯಶೋಧರ ಮಹಾಬಲ ಪೂಜಾರಿ ಸಹೋದರರ ನೇತೃತ್ವದಲ್ಲಿ ಬೆಂಗಳೂರು ದೊಡ್ಮನೆ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದವರು ಪುನೀತ್ ಹೆಸರಿನಲ್ಲಿ ಓಟದ ಕೋಣಗಳನ್ನು ಓಡಿಸಿದ್ದು, ಗಮನ ಸೆಳೆಯಿತು.
ಇದನ್ನೂ ಓದಿ:ಶಿರಸಿ : ಸ್ವರ್ಣವಲ್ಲಿ ಶ್ರೀಗಳಿಂದ ಮಾಳವಿಕಾ ಪರಿಣಯ ಯಕ್ಷಗಾನ ಕೃತಿ ಬಿಡುಗಡೆ
ವಿವಿಧ ಕ್ಷೇತ್ರದ ಗಣ್ಯರು ಕಂಬಳದಲ್ಲಿ ಪಾಲ್ಗೊಂಡಿದ್ದು, ಸಾವಿರಾರು ಕಂಬಳಾಭಿಮಾನಿಗಳು ಭಾಗವಹಿಸಿದ್ದರು.