Advertisement

ಚಿಕ್ಕಮಗಳೂರು: ಧುಮ್ಮಿಕ್ಕಿ ಹರಿದು, ಕಣ್ಮನ ಸೆಳೆಯುತ್ತಿರುವ ಕಾಮನದುರ್ಗ ಜಲಪಾತ

10:34 AM Jul 15, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಕಾಮನದುರ್ಗ ಜಲಪಾತ ಭಾರೀ ಮಳೆಯಿಂದ ಧುಮ್ಮಿಕ್ಕಿ ಹರಿಯುತ್ತಿದ್ದು ಕಣ್ಮನ ಸೆಳೆಯುತ್ತಿದೆ.

Advertisement

ಮಲೆನಾಡಲ್ಲಿ ಸುರಿಯುತ್ತಿರೋ ಮಳೆಯಿಂದ ಜೀವಕಳೆ ಪಡೆದುಕೊಂಡಿರುವ ಕಾಮನದುರ್ಗ ಜಲಪಾತ ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ.  ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿರುವ ಫಾಲ್ಸ್ ನೋಡುಗರ ಮನಸೆಳೆಯುತ್ತಿದೆ.

ಬೆಟ್ಟದ ತುದಿಯಿಂದ ಬೀಳೋ ಕಾಮನದುರ್ಗ ಜಲಪಾತದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next