ಚನ್ನಪಟ್ಟಣ: ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಕಾಮನ ಹಬ್ಬವನ್ನು ಇಲ್ಲಿನ ಮಂಡಿಪೇಟೆ ಗರುಡಗಂಭದ ಬೀದಿಯಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಈಗಾಗಲೇ ಕಾಮಣ್ಣನ ಉತ್ಸವ, ರತಿ-ಮನ್ಮಥನ ಮೂರ್ತಿಪ್ರತಿಷ್ಠಾಪನೆ ಯೊಂದಿಗೆ ಆರಂಭಗೊಂಡಿದ್ದು, ಮಾ.29 ರವರೆಗೆ ನಡೆಯಲಿದೆ.
ಹಳೇ ಮೈಸೂರು ಭಾಗದಲ್ಲಿ ಚನ್ನಪಟ್ಟಣದಲ್ಲಿ ವಿಶೇಷವಾಗಿ ಕಾಮನ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಈ ಬಾರಿ ಇಡೀ ನಗರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. 15 ದಿನ ನಡೆಯಲಿರುವ ಆಚರಣೆಗೆ ಕಾಮನ ಹಬ್ಬದ ಉತ್ಸವ ಸಮಿತಿ ನೇತೃತ್ವವಹಿಸಿಕೊಂಡಿದೆ. ರತಿ ಮನ್ಮಥರಿಗೆ ವಿಶೇಷ ವೇಷಭೂಷಣತೊಡಿಸುವ ಜತೆಗೆ ಬೈಕ್, ಕಾರುಗಳಲ್ಲಿ ಕುಳ್ಳಿರಿಸಿಯೂ ವಿಶೇಷ ಪ್ರದರ್ಶನ ನಡೆಸಲಾಗುತ್ತದೆ.
ಕಾಮನ ಉತ್ಸವ ನಿಲ್ಲುವುದಿಲ್ಲ: 15 ದಿನ ಮಂಡಿಪೇಟೆ ಸೇರಿ ಪಟ್ಟಣದ ವಿವಿಧೆಡೆ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆಯುತ್ತಾರೆ. ಕಾಮನ ಹಬ್ಬಮಾಡದಿದ್ದರೆ ಕೆಡಕು ಉಂಟಾಗುತ್ತದೆ, ಮಳೆ ಬಾರದೆಬೆಳೆಯಾಗುವುದಿಲ್ಲ ಎನ್ನುವ ನಂಬಿಕೆಯೂ ಇಲ್ಲಿನ ಜನರಲ್ಲಿದೆ.ಹಾಗಾಗಿ ಯಾವ ಹಬ್ಬ ನಿಂತರೂ ಕಾಮನ ಉತ್ಸವ ಮಾತ್ರ ಎಂದಿಗೂ ನಿಲ್ಲುವುದಿಲ್ಲ.
ಮಂಡಿಪೇಟೆಯಲ್ಲಿ ವಿಶೇಷ: ಹೋಳಿ ಹಬ್ಬ ಮೋಜು, ಮಸ್ತಿಗಾಗಿ ಆಡುವ ದೊಡ್ಡ ಫ್ಯಾಷನ್ ಆಗಿ ಬದಲಾಗಿದೆ. ಕಾಮನ ಹಬ್ಬಕ್ಕೆಯಾವುದೇ ರೀತಿಯ ವಯಸ್ಸಿನ ಮಿತಿಯಿಲ್ಲ. ಹಿರಿಯರು,ಕಿರಿಯರು ಅನ್ನದೇ ಪ್ರತಿಯೊಬ್ಬರು ಖುಷಿಯಾಗಿ ಹೋಳಿಸಂಭ್ರಮಾಚರಣೆ ಮಾಡುತ್ತಾರೆ. ವಿವಿಧ ಬಣ್ಣಗಳ ಓಕುಳಿ ಹರಿಸಿ,ಇಡೀ ವರ್ಷ ಸಂತೋಷದಿಂದ ಕೂಡಿರಲಿ ಎಂದು ಹಾರೈಸುವರಂಗಿನ ಹಬ್ಬ ಇದು, ಆದರೆ, ಮಂಡಿಪೇಟೆಯಲ್ಲಿ ನಡೆಯುವಉತ್ಸವದಲ್ಲಿ, ಕೇವಲ ಬಣ್ಣ ಎರಚುವುದಷ್ಟೇ ಅಲ್ಲ, ರತಿ, ಮನ್ಮಥರ ಪ್ರತಿಷ್ಠಾಪನೆಯಿಂದ ಹಿಡಿದು ಹಬ್ಬದ ಮಹತ್ವವನ್ನು ಸಂಪೂರ್ಣವಾಗಿಕಟ್ಟಿಕೊಡುವ ಕೆಲಸ ಮಾಡಲಾಗುತ್ತಿದೆ.
ವಿವಿಧ ಕಾರ್ಯಕ್ರಮ: ಮಾ.29ರವರೆಗೆ ಪ್ರತಿದಿನ ಸಂಜೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ರಾತ್ರಿ ಸಾಂಸ್ಕೃತಿಕಕಾರ್ಯಕ್ರಮ ನಡೆಯುತ್ತಿವೆ. ಮಾ.28ರಂದು ರತಿ, ಮನ್ಮಥರಮೆರವಣಿಗೆ ನಡೆಯಲಿದೆ, ವಿವಿಧ ವೇಷಭೂಷಣ, ಜಾನಪದ ನೃತ್ಯಕಾರ್ಯಕ್ರಮ ಮೆರವಣಿಗೆಯಲ್ಲಿ ಸಾಗಲಿವೆ. ಬೆಳಗ್ಗೆ ಉತ್ಸವ ಹೊರಟು,ಸಂಜೆ ಕಾಮದಹನ ನೆರವೇರಲಿದೆ. ರಾತ್ರಿ 7 ಗಂಟೆಗೆ ರತಿ ಮೆರವಣಿಗೆನಡೆಯುತ್ತದೆ. ಅಂದು ಸ್ವಾಮಿಯ ಆರೋಹಣ, ರತಿ ಮನ್ಮಥರ ಬೆಳ್ಳಿಪಲ್ಲಕ್ಕಿ ಉತ್ಸವ, ಹೋಳಿ ಹಬ್ಬ ಆಚರಣೆ ವಿಜೃಂಭಣೆಯಿಂದ ನೆರವೇರಲಿದೆ.
ವಿಜಯೋತ್ಸವದ ಉತ್ಸವ: ರತಿ ಮನ್ಮಥರ ವಿಜಯೋತ್ಸವದ ಉತ್ಸವವು ಮಂಡಿಪೇಟೆ ಗರುಡಗಂಭದ ಬೀದಿಯಿಂದ ಹೊರಟು ಡೂಂ ಲೈಟ್ ವೃತ್ತ ಮಾರ್ಗವಾಗಿ ಮದೀನಾ ಸರ್ಕಲ್,ಲಕ್ಷ್ಮೀ ನಾರಾಯಣ ದೇವಸ್ಥಾನ ಪ್ರದಕ್ಷಿಣೆ ಮಾಡಿ, ಎಂ.ಜಿ.ರಸ್ತೆ ತಲುಪಿ, ಡಿ.ಟಿ.ರಾಮು ವೃತ್ತ, ಪೊಲೀಸ್ ಠಾಣೆ ಮೂಲಕ ಹೊರಟು ಕಾಳಮ್ಮ ದೇವಸ್ಥಾನ ರಸ್ತೆ, ಕೋಟೆ ಮಾರಮ್ಮ ದೇವಸ್ಥಾನ ರಸ್ತೆಯಲ್ಲಿ ಹೊರಟು ಕರಬಲ ಮೈದಾನ ತಲುಪುತ್ತದೆ. ಅಲ್ಲಿ ಪೂಜೆಯ ನಂತರ ಜೆ.ಸಿ.ರಸ್ತೆ ತಲುಪಲಿದೆ.
ಪ್ರತಿ ದಿನವೂ ರತಿ-ಮನ್ಮಥ ಮೂರ್ತಿಗಳಿಗೆ ಅಲಂಕಾರ: 15 ದಿನ ವಿಶೇಷವಾಗಿ ರತಿ -ಮನ್ಮಥರ ಮೂರ್ತಿಯನ್ನು ಅಲಂಕಾರಮಾಡುವ ಜೊತೆಗೆ ಇಡೀ ಹಬ್ಬಕ್ಕೆ ಹೊಸ ಮೆರಗು ತಂದುಕೊಡುವಮೂಲಕ ಕಾಮನ ಹಬ್ಬದ ಉತ್ಸವ ಸಮಿತಿ ಯಶಸ್ವಿಯಾಗಿಮಾಡಿಕೊಂಡು ಬರುತ್ತಿದೆ. ಇದರ ಜೊತೆಗೆ ಜಾನಪದ,ವೇಷಭೂಷಣ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಬಹುಮಾನ ಸಹನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತದೆ. ಪಟ್ಟಣದಲ್ಲಿನಡೆಯುವ ಬಹುತೇಕ ಹಬ್ಬಗಳಲ್ಲಿ ಕಾಮಣ್ಣನ ಹಬ್ಬವೂ ಒಂದಾಗಿದ್ದು, ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಮಿತಿ ಮನವಿ ಮಾಡಿದೆ.