Advertisement

ಕಮಲಾಪುರ ಬಸ್‌ ನಿಲ್ದಾಣ ಕೊಳಚೆ ತಾಣ

09:48 AM Jun 11, 2018 | Team Udayavani |

ಕಮಲಾಪುರ: ಇದು ನೂತನ ತಾಲೂಕು ಕಮಲಾಪುರ ಬಸ್‌ ನಿಲ್ದಾಣದ ದೃಶ್ಯ. ಯಾವ ದೃಷ್ಟಿಯಿಂದ ನೋಡಿದರೂ ಬಸ್‌ ನಿಲ್ದಾಣ ಎನ್ನುವಂತೆ ಕಾಣುವುದೇ ಇಲ್ಲ.

Advertisement

ಒಂದಿಷ್ಟು ಮಳೆ ಬಂದರೆ ಸಾಕು ನೀರು ನಿಲ್ದಾಣದೊಳಗೆ ನಿಲ್ಲುತ್ತದೆ. ಒಂದು ಹೆಜ್ಜೆ ಇಡಬೇಕೆಂದರೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಿಸಿ ರಸ್ತೆ ಇರದೇ ಬರೀ ಮಣ್ಣಿನದ್ದಾಗಿದ್ದರಿಂದ ತಗ್ಗು-ಗುಂಡಿಗಳು ಬಿದ್ದಿವೆ. ಇದರಲ್ಲಿ ನೀರು ನಿಂತು ಕೊಳಚೆಯಂತೆ ನಿರ್ಮಾಣವಾಗುತ್ತಿರುವುದು ಪ್ರಯಾಣಿಕರು ಹಾಗೂ ವ್ಯಾಪಾರಸ್ಥರು ತೀವ್ರ ಯಾತನೆ ಅನುಭವಿಸುವಂತಾಗಿದೆ.

ಬಸ್‌ ನಿಲ್ದಾಣದ ಪಕ್ಕದಲ್ಲೇ ಹರಿಯುವ ಚರಂಡಿ ನೀರಿನ ವಾಸನೆಯಂತು ಬಸ್‌ ನಿಲ್ದಾಣದೊಳಗೆ ಕೂಡಲಿಕ್ಕೆ, ನಿಲ್ಲಲಿಕ್ಕೆ
ಬಾರದಂತೆ ಮಾಡುತ್ತಿದೆ. ಇದಕ್ಕೆಲ್ಲ ಮುಕ್ತಿ ಯಾವಾಗ ಎಂದು ಪಟ್ಟಣದ ಜನತೆ ಪ್ರಶ್ನಿಸುತ್ತಿದ್ದಾರೆ.

ಕಲಬುರಗಿ-ಬೀದರ ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲಿರುವ ನೂತನ ತಾಲೂಕು ಕಮಲಾಪುರ ಬಸ್‌ ನಿಲ್ದಾಣದೊಳಗೆ ದಿನಾಲು ನೂರಾರು ಬಸ್‌ಗಳು ಬರುತ್ತವೆ. ಆದರೆ ಅವುಗಳನ್ನು ನಿಲ್ಲಲು ಸೂಕ್ತ ಸ್ಥಳವಿರದಿರುವುದು ಹಾಗೂ ಪ್ರಯಾಣಿಕರು ಬಸ್‌ ಏರಲು ಹರ ಸಾಹಸ ಪಡುತ್ತಿರುವುದು ನಿಜಕ್ಕೂ ಜನಪ್ರತಿನಿಧಿಗಳಿಗೆ ಸವಾಲು ಎನ್ನುವಂತಾಗಿದೆ.

ನೂತನ ತಾಲೂಕಾಗಿದ್ದರಿಂದ ನೂತನವಾಗಿ ಶಾಸಕರಾಗಿ ಆಯ್ಕೆಯಾಗಿರುವ ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರ ಮೇಲೆ ಈ ಬಸ್‌ ನಿಲ್ದಾಣ ಅಭಿವೃದ್ಧಿಪಡಿಸುವ ಮಹತ್ವದ ಜವಾಬ್ದಾರಿ ಅಡಗಿದೆ. ಈ ನಿಟ್ಟಿನಲ್ಲಿ ಶಾಸಕರು ಕೈಗೊಳ್ಳುವ ಶಾಶ್ವತ ಕಾಮಗಾರಿಗಿಂತ ಮೊದಲು ಹಾಗೂ ತುರ್ತಾಗಿ ಗ್ರಾಪಂನವರು ಶುಚಿತ್ವ ಕಾರ್ಯ ಕೈಗೊಳ್ಳುವುದು ಅಗತ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next