Advertisement

ಅಮೆರಿಕಾದಿಂದ ಹಿಂತಿರುಗಿದ ಕಮಲ್ ಹಾಸನ್ ಗೆ ಕೋವಿಡ್ ಪಾಸಿಟಿವ್

05:11 PM Nov 22, 2021 | Team Udayavani |

ಚೆನ್ನೈ: ಮಕ್ಕಳ್ ನೀಧಿ ಮೈಯಂ ಮುಖ್ಯಸ್ಥ ಮತ್ತು ಪ್ರಖ್ಯಾತ ನಟ ಕಮಲ್ ಹಾಸನ್ ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಯುಎಸ್ ಪ್ರವಾಸದಿಂದ ಹಿಂತಿರುಗಿದ ನಂತರ ಸ್ವಲ್ಪ ಕೆಮ್ಮು ಇತ್ತು. ಪರೀಕ್ಷೆಯ ನಂತರ ಕೋವಿಡ್ 19 ಸೋಂಕು ದೃಢಪಟ್ಟಿದೆ. ನಾನು ಆಸ್ಪತ್ರೆಯಲ್ಲಿ ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ. ವೈರಸ್‌ನ ಹರಡುವಿಕೆ ನಿಂತಿಲ್ಲ ಎಂಬುದನ್ನು ಎಲ್ಲರೂ ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಲು ವಿನಂತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಸ್ಟಾರ್ ನಟ ಇತ್ತೀಚೆಗೆ ತಮ್ಮ ಬಟ್ಟೆ ಬ್ರಾಂಡ್‌ನ ಬಿಡುಗಡೆಯ ಕಾರ್ಯಕ್ರಮಕ್ಕೆ ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣ ಬೆಳೆಸಿದ್ದರು ಮತ್ತು ಲೋಕೇಶ್ ಕನಕರಾಜ್ ನಿರ್ದೇಶನದ ಅವರ ಮುಂಬರುವ ಚಿತ್ರ ‘ವಿಕ್ರಮ್’ ಚಿತ್ರೀಕರಣವನ್ನು ಪುನರಾರಂಭಿಸಲು ದೇಶಕ್ಕೆ ಮರಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next