ಚೆನ್ನೈ: ಉಲಗ ನಾಯಗನ್ ಕಮಲ್ ಹಾಸನ್ ಅವರಿಗಿಂದು 68ನೇ ಹುಟ್ಟುಹಬ್ಬದ ಸಂಭ್ರಮ. ವಯಸ್ಸಾದರೂ ಇಂದಿಗೂ ಚಿರ ಯುವಕನಂತೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಕಮಲ್ ಹಾಸನ್ ಅವರʼವಿಕಂʼ ಸಿನಿಮಾದ ಬಳಿಕ ಮುಂದಿನ ಸಿನಿಮಾಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.
ವಿಶ್ವದೆಲ್ಲೆಡೆಯಿಂದ ಕಮಲ್ ಹಾಸನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳ ಮಹಾಪೂರವೇ ಬರುತ್ತಿದೆ. ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ದೊಡ್ಡ ಗುಡ್ ನ್ಯೂಸ್ ಸಿಕ್ಕಿದೆ. ಅದು ಅವರ 234 ಸಿನಿಮಾದ ಬಗ್ಗೆ.
1987 ರಲ್ಲಿ ಮಣಿರತ್ನಂ ಹಾಗೂ ಕಮಲ್ ಹಾಸನ್ ಅವರ ಕಾಂಬಿನೇಷನ್ ನಲ್ಲಿ ʼನಾಯಗನ್ʼ ಸಿನಿಮಾ ತೆರೆಗೆ ಬಂದಿತ್ತು. ಗ್ಯಾಂಗ್ ಸ್ಟರ್, ಕ್ರೈಮ್ ಲೋಕದ ಕಥೆಯನ್ನು ಹೇಳಿದ್ದ ಸಿನಿಮಾ ಆ ಸಮಯದಲ್ಲಿ ದೊಡ್ಡ ಹಿಟ್ ಆಗಿತ್ತು. ಕಮಲ್ ಹಾಸನ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಈಗ ಹಿಟ್ ಕಾಂಬಿನೇಷನ್ ಮತ್ತೆ ಜೊತೆಯಾಗುತ್ತಿದೆ. 35 ವರ್ಷದ ಬಳಿಕ ಮಣಿರತ್ನಂ ಅವರು ಕಮಲ್ ಹಾಸನ್ ಅವರಿಗೆ ಡೈರೆಕ್ಟ್ ಮಾಡಲಿದ್ದಾರೆ.
“KH234” ಸಿನಿಮಾವನ್ನು ಜಂಟಿಯಾಗಿ ಮೂವರು ನಿರ್ಮಾಣ ಮಾಡುತ್ತಿದ್ದಾರೆ. ಉದಯನಿಧಿ ಸ್ಟ್ಯಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಹಾಗೂ ಮಣಿರತ್ನಂ ಅವರ ಮದ್ರಾಸ್ ಟಾಕೀಸ್.
Related Articles
ಸಿನಿಮಾದ ಮತ್ತೊಂದು ಹೈಲೈಟ್ ಎಂದರೆ ಈ ಸಿನಿಮಾದ ಮ್ಯೂಸಿಕನ್ನು ದಿಗ್ಗಜ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರು ನೀಡಲಿದ್ದಾರೆ.
ಪುಟ್ಟ ಟೀಸರ್ ಬಿಟ್ಟು 2024 ರಲ್ಲಿ ಸಿನಿಮಾ ಬರಲಿದೆ ಎಂದು ಚಿತ್ರ ತಂಡ ಹೇಳಿದೆ.
ಸದ್ಯ ಶಂಕರ್ ಅವರ “ಇಂಡಿಯನ್ -2” ಸಿನಿಮಾದಲ್ಲಿ ಕಮಲ್ ಹಾಸನ್ ಬ್ಯುಸಿಯಾಗಿದ್ದಾರೆ. ಪೊನ್ನಿಯನ್ ಸೆಲ್ವನ್ ಹಿಟ್ ಆದ ಸಂತಸದಲ್ಲಿ ಮಣಿರತ್ನಂ ಇದ್ದಾರೆ.