Advertisement

ದಶಕದ ರವಿವಾರದ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ

01:22 PM Jan 04, 2021 | Team Udayavani |

ಉಡುಪಿ, ಜ. 3: ಗೋಪಾಲಪುರ ವಾರ್ಡ್‌ನಲ್ಲಿ ನಿರ್ಮಾಣಗೊಂಡ ಕಲ್ಯಾಣಪುರದ ನೂತನ  ಮಾರುಕಟ್ಟೆಯಲ್ಲಿ ರವಿವಾರ ಸಂತೆ ನಡೆಯಿತು. ಮಾರುಕಟ್ಟೆಯಲ್ಲಿ ಸುಮಾರು 150ಕ್ಕೂ ಅಧಿಕ  ವ್ಯಾಪಾರಿಗಳು ಹಣ್ಣು, ತರಕಾರಿ, ಒಣ ಮೆಣಸು ಸೇರಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡಿದರು. ಬೆಳಗ್ಗೆ 5ರಿಂದ ಪ್ರಾರಂಭವಾದ ಸಂತೆ 12 ಗಂಟೆವರೆಗೂ ಗ್ರಾಹಕರು ವಸ್ತುಗಳ ಖರೀದಿಗೆ ಬರುತ್ತಿದ್ದರು. ಹಳೆ ಮಾರುಕಟ್ಟೆಯಲ್ಲಿ ಹಸಿ ಹಾಗೂ ಒಣ ಮೀನು ಮಾರಾಟಗಾರರು ವ್ಯಾಪಾರ ಮಾಡುತ್ತಿದ್ದಾರೆ.

Advertisement

ಹಳೆ ಸಮಸ್ಯೆಗೆ ಮುಕ್ತಿ :

ಹಳೆ ಮಾರುಕಟ್ಟೆಯಲ್ಲಿ ಸ್ಥಳಾವಕಾಶದ ಕೊರತೆ ಯಿದ್ದ ಹಿನ್ನೆಲೆ ವ್ಯಾಪಾರಸ್ಥರು ರಾ.ಹೆ. ಸರ್ವಿಸ್‌ ರಸ್ತೆಯ ಎರಡೂ ಬದಿಗಳಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುವುದರಿಂದ ಗ್ರಾಹಕರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ವಸ್ತುಗಳನ್ನು ಖರೀದಿಸುತ್ತಿದ್ದರು. ಇದರಿಂದ ರಾ.ಹೆ.ಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ ತೀರ ಗೊಂದಲವಾಗುತ್ತಿತ್ತು. ಇದರಿಂದ ಪ್ರತಿ  ರವಿವಾರ ಜಂಕ್ಷನ್‌ನಲ್ಲಿ ಪಾರ್ಕಿಂಗ್‌, ಟ್ರಾಫಿಕ್‌ ಸಮಸ್ಯೆ ಇರುತ್ತಿತ್ತು. ಇದೀಗ  ಮಾರುಕಟ್ಟೆಯನ್ನು ಬೇರೆಡೆಗೆ ವರ್ಗಾಯಿ ಸಿರುವುದರಿಂದ ಈ ಸಮಸ್ಯೆಗೆ ಮುಕ್ತಿ ದೊರೆತಂತಾಗಿದೆ.

ಮೀನುಗಾರರಿಗೆ ಸಮಸ್ಯೆ :

ಸಂತೆಗೆ ಹೋದವರು ರಸ್ತೆದಾಟಿ ಬಂದು ಮೀನು ಖರೀದಿಸಲು ಬರುತ್ತಿಲ್ಲ ಎನ್ನುವ ಗೋಳು ಇಲ್ಲಿನ ಮಹಿಳೆಯರದು. ಹೇಗಾದರೂ ಮಾಡಿ ಮೀನು ಮಾರಾಟಗಾರರಿಗೆ ಸಮೀಪದ ಸ್ಥಳದಲ್ಲಿ ವ್ಯಾಪಾರಕ್ಕೆ ಅನುವು ಮಾಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

Advertisement

ಒಳರಸ್ತೆ-ಟ್ರಾಫಿಕ್‌ ಸಮಸ್ಯೆ :  ಜಂಕ್ಷನ್‌ ಟ್ರಾಫಿಕ್‌ ಸಮಸ್ಯೆಗೆ ಈಗ ಮುಕ್ತಿ ಸಿಕ್ಕಿದೆ. ಆದರೆ ಸಂತೆಕಟ್ಟೆಯಿಂದಮಿಲಾಗ್ರಿಸ್‌ ಸೇರಿದಂತೆ ಇತರ ಕಡೆಗಳಿಗೆ ತೆರಳುವ ಮಾರ್ಗದಲ್ಲಿ ಟ್ರಾμಕ್‌ಜಾಮ್‌ ಉಂಟಾಗಿದೆ. ರಸ್ತೆಯ ಉದ್ದಕ್ಕೂ ವಾಹನಗಳನ್ನು ಪಾರ್ಕ್‌ ಮಾಡ ಲಾಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ವಾಹನ ಸವಾರರ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

12.50 ಲ.ರೂ. ಆದಾಯ :  ಪ್ರತೀ ವಾರ ಕಲ್ಯಾಣಪುರ ಸಂತೆಗೆಬರುವ ವ್ಯಾಪಾರಿಗಳಿಂದ 100 ರೂ.ವರೆಗೆ ಸುಂಕ ಪಡೆಯಲಾಗುತ್ತದೆ.ಇಲ್ಲಿ ಸಂಗ್ರಹವಾಗುವ ಹಣದಿಂದನಗರಸಭೆಗೆ ಪ್ರತಿವರ್ಷ 12.50ವರೆಗೆ ಆದಾಯ ಸಲ್ಲಿಕೆಯಾಗುತ್ತದೆ.ಇದರ ಉಸ್ತುವಾರಿಯನ್ನು ತಿಮ್ಮಪ್ಪಶೆಟ್ಟಿ ವಹಿಸಿಕೊಂಡಿದ್ದಾರೆ. ಈ ಹಿಂದೆ6.50 ಲ.ರೂ. ಸುಂಕ ನಗರಸಭೆಗೆ ಪಾವತಿಯಾಗುತ್ತಿತ್ತು.

ಕಳೆದ 10 ವರ್ಷದಿಂದ ಸಂತೆಕಟ್ಟೆಗೆ ಮನೆಯಲ್ಲಿ ಬೆಳೆದಿರುವ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಿದ್ದೇನೆ. ಹೊಸ ಮಾರುಕಟ್ಟೆಯಲ್ಲಿ ಉತ್ತಮ ವ್ಯವಸ್ಥೆ ನೀಡಿದ್ದಾರೆ. ಜನರು ಮುಂಜಾನೆಯಿಂದಲೇ ಬಂದು ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಮಳೆ ಬಂದರೂ ಇನ್ನು ಯಾವುದೇ ಸಮಸ್ಯೆ ಇಲ್ಲ.-ಗೋಪಾಲ ನಾಯಕ್‌, ಕರ್ಜೆ ಬ್ರಹ್ಮಾವರ.

ಕಳೆದ 30 ವರ್ಷದಿಂದ ಕಲ್ಯಾಣಪುರದ ರವಿವಾರದ ಸಂತೆಯಲ್ಲಿ ಮೀನು ಮಾರಾಟ ಮಾಡುತ್ತಿದ್ದೇನೆ. ಇದೀಗ ಹೊಸ ಮಾರುಕಟ್ಟೆಗೆ ಎಲ್ಲ ವರ್ಗಾವಣೆಗೊಂಡಿರುವುದರಿಂದ ಜನರು ರಸ್ತೆ ದಾಟಿ ಬಂದು ಇಲ್ಲಿ  ಮೀನು ಖರೀದಿಸುತ್ತಿಲ್ಲ. ಇಂದು ತಂದ ಮೀನು ಎಲ್ಲವೂ ಮಾರಾಟವಾಗದ  ಪರಿಸ್ಥಿತಿ ನಿರ್ಮಾಣವಾಗಿದೆ. -ಶಾಂತಾ, ಮೀನು ಮಾರಾಟ ಮಹಿಳೆ, ಸಂತೆಕಟ್ಟೆ

 

Advertisement

Udayavani is now on Telegram. Click here to join our channel and stay updated with the latest news.

Next