Advertisement

ಆನೆಗೊಂದಿಯಿಂದ ಕಲ್ಯಾಣ ರಥಯಾತ್ರೆ ಆರಂಭ: ಗಾಲಿ ರೆಡ್ಡಿಯಿಂದ ಪ್ರಚಾರಕ್ಕೆ ಚಾಲನೆ

06:07 PM Jan 30, 2023 | Team Udayavani |

ಗಂಗಾವತಿ: ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆದಿರುವ ಮಾಜಿ ಸಚಿವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧಿಕೃತವಾಗಿ ತಾಲೂಕಿನ ಆನೆಗೊಂದಿಯಿಂದ ಮುಂಬರುವ ವಿಧಾನಸಭೆಯ ಚುನಾವಣೆಯ ಪ್ರಚಾರಕ್ಕೆ ಜ.31 ರಂದು ಬೆಳ್ಳಿಗ್ಗೆ 10.30ಕ್ಕೆ ಕೆಆರ್‌ಪಿ ಪಕ್ಷದ 2023ರ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸಲಿದ್ದಾರೆಂದು ಕೆಆರ್‌ಪಿ ಪಕ್ಷ ಪ್ರಕಟಣೆ ನೀಡಿದ್ದು ರಾಜ್ಯದ ಸುಮಾರು 40 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದು ಇತಿಹಾಸ ಪ್ರಸಿದ್ಧ ಆನೆಗೊಂದಿಯಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಕಲ್ಯಾಣ ರಥಯಾತ್ರೆಗೆ ಚಾಲನೆ ನೀಡುವ ಯೋಜನೆ ರೂಪಿಸಲಾಗಿದೆ. ಈ ಹಿಂದೆ ಜನಾರ್ದನರೆಡ್ಡಿ ಹೇಳಿದಂತೆ ಕೆಆರ್‌ಪಿ ಪಕ್ಷ ಸಂಘಟನೆ ಮತ್ತು ಅಭ್ಯರ್ಥಿಗಳ ಘೋಷಣೆ ದೃಷ್ಠಿಯಿಂದ ಕಲ್ಯಾಣ ರಥಯಾತ್ರೆಯ ಇಡೀ ರಾಜ್ಯವನ್ನು ಸುತ್ತಲಿದೆ.

Advertisement

ಈಗಾಗಲೇ ಹಾಲಿ ಬಿಜೆಪಿ ಕಾಂಗ್ರೆಸ್ ಮುಖಂಡರು ಪ್ರಮುಖ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿರುವ ರೆಡ್ಡಿ ಸ್ಪೀಡ್‌ಗೆ ಬಿಜೆಪಿ ಹೈಕಮಾಂಡ ಬ್ರೇಕ್ ಹಾಕಲು ಯೋಜನೆ ರೂಪಿಸಿದಂತೆ ಕಾಣುತ್ತಿದ್ದು ಹಾಲಿ ಮಾಜಿ ಶಾಸಕರು ಸಚಿವರು ಪಕ್ಷದ ಪ್ರಮುಖ ಮುಖಂಡರು ರೆಡ್ಡಿಯವರನ್ನು ಕರೆದು ಮಾತುಕತೆ ನಡೆಸುವಂತೆ ಹೈಕಮಾಂಡ್‌ಗೆ ದುಂಬಾಲು ಬಿದ್ದಿದ್ದಾರೆನ್ನಲಾಗಿದೆ. ಈ ಮಧ್ಯೆ ರವಿವಾರ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಎಂ.ಮಲ್ಲಿಕಾರ್ಜುನನಾಗಪ್ಪ ಹಾಗೂ ಎಚ್.ಆರ್. ಶ್ರೀನಾಥ ಆಪ್ತರು ಕೆಆರ್‌ಪಿ ಪಕ್ಷ ಸೇರ್ಪಡೆಯಾಗಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಭಾರಿ ಹಿನ್ನೆಡೆಯಾಗಿದೆ.

ತಾ.ಪಂ.ಮಾಜಿ ಅಧ್ಯಕ್ಷೆ ಪಕ್ಷ ಸೇರ್ಪಡೆ: ಹಂಪಿ ಕನ್ನಡ ವಿವಿ ವಿದ್ಯಾವಿಷಯಕ್ ಪರಿಷತ್ ಸದಸ್ಯೆ ಹಾಗೂ ಬಿಜೆಪಿ ಮಹಿಳಾ ಘಟಕ ಮುಖಂಡರಾದ ನ್ಯಾಯವಾದಿ ರಾಜೇಶ್ವರಿ ಸುರೇಶ ಪಕ್ಷ ತೊರೆಯದಂತೆ ಶಾಸಕ ಮುನವಳ್ಳಿ ಮನೆಗೆ ತೆರಳಿ ಮನವಿ ಮಾಡಿ ಬಿಜೆಪಿ ಶಾಲು ಹಾಕಿ ಪಕ್ಷ ನಿಷ್ಠೆ ಕುರಿತು ಹೊಗಳಿದ ಮಧ್ಯೆದಲ್ಲೂ ರವಿವಾರ ಸಂಜೆ ಕೆಆರ್‌ಪಿ ಪಕ್ಷದ ಕಚೇರಿಯಲ್ಲಿ ಗಾಲಿ ಜನಾರ್ದನರೆಡ್ಡಿ ಸಮ್ಮುಖದಲ್ಲಿ ರೆಡ್ಡಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: ದುಬೈಯಿಂದ ಆಕ್ಲೆಂಡ್ ಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ಬಂದಿಳಿದದ್ದು ಮಾತ್ರ ದುಬೈಯಲ್ಲೇ…

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next