Advertisement

ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು

07:19 PM Jan 26, 2022 | Team Udayavani |

ಕುಷ್ಟಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪನೆ ಸೇರಿದಂತೆ ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯಲ್ಲಿ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಆಗ್ರಹಿಸಿ ಕಲ್ಯಾಣ ಕನರ್ಾಟಕ ಕಲಾವಿದರ ಒಕ್ಕೂಟ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರಿಗೆ ಮನವಿ ಸಲ್ಲಿಸಿದರು.

Advertisement

ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಕಲ್ಯಾಣ ಕನರ್ಾಟಕ ಕಲಾವಿದರ ಒಕ್ಕೂಟದ ಉಪಾಧ್ಯಕ್ಷ ಶರಣಪ್ಪ ವಡಿಗೇರಿ ಸಲ್ಲಿಸಿದ ಮನವಿಯಲ್ಲಿ ಕಲಾವಿದರ ಮಾಶಾಸನ ವಯೋಮಾನ 58ಕ್ಕೆ ಬದಲಿಗೆ 50ಕ್ಕೆ ಇಳಿಸಿ, ಮಾಶಾಸನದ ಮೊತ್ತವನ್ನು 2ಸಾವಿರ ರೂ. ಬದಲಿಗೆ 5ಸಾವಿರ ರೂ. ಹೆಚ್ಚಿಸುವುದು ತೆಲಂಗಾಣ ಮಾದರಿಯಲ್ಲಿ ರಾಜ್ಯ, ಕೇಂದ್ರ ಸರ್ಕಾರದ ಪ್ರಶಸ್ತಿ ಪುರಸ್ಕೃತರಿಗೆ 10ಸಾವಿರ ರೂ. ಮಾಶಾನ, ರಾಜ್ಯ, ರಾಷ್ಟ್ರೀಯ ಅಂತರಾಷ್ಟ್ರೀಯ ಉತ್ಸವಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ ಪರಿಗಣನೆ, ಹಂಪೆ ಉತ್ಸವದ ಮಾದರಿಯಲ್ಲಿ ಜಿಲ್ಲಾ ಉತ್ಸವ, ಸಂಗೀತ, ರಂಗ ಶಿಕ್ಷಕರ ನೇಮಿಸುವಂತೆ ಹಾಗೂ ಶಿಕ್ಷಕ, ಪದವಿ ವಿಧಾನ ಪರಿಷತ್ ಕ್ಷೇತ್ರದ ಮಾದರಿಯಲ್ಲಿ ಕಲಾವಿದರಿಗಾಗೊ ವಿಧಾನ ಪರಿಷತ್ ರಚಿಸಬೇಕೆಂದು ಮನವಿಯಲ್ಲಿ ವಿವರಿಸಲಾಗಿದೆ.

ಜಾನಪದ ಅಕಾಡೆಮಿ ಸದಸ್ಯರಾದ ಲಿಂಗದಳ್ಳಿ ಚಂದ್ರಶೇಖರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಎಸ್.ಎಸ್. ಹಿರೇಮಠ, ದೇವೇಂದ್ರಪ್ಪ ಕಮ್ಮಾರ, ಸುಖಮುನಿ ಗಡಗಿ, ವೆಂಕಟೇಶ ಹೊಸಮನಿ, ಗ್ಯಾನಪ್ಪ ತಳವಾರ, ಲಲಿತಮ್ಮ ಹಿರೇಮಠ, ಸಿದ್ದಪ್ಪ ಕಲಾಲಬಂಡಿ, ಕಳಜಪ್ಪ ಗೊಂಗಡಶೆಟ್ಟರ್, ಚನ್ನಪ್ಪ ಬಾವಿಮನಿ ಮತ್ತೀತರಿದ್ದರು.

ಕಲಾವಿದರ ಹಲವು ಬೇಡಿಕೆಗಳನ್ನು ಕಳೆದ ಸ್ವಾತಂತ್ರ್ಯೋತ್ಸವ ಸಂಧರ್ಭದಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ಕಲ್ಯಾಣ ಕರ್ನಾಟಕದ 40 ಶಾಸಕರಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವೊಬ್ಬ ಶಾಸಕರು ಪ್ರಸ್ತಾಪಿಸದ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವದಂದು ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ.
– ಶರಣಪ್ಪ ವಡಿಗೇರಿ ಉಪಾಧ್ಯಕ್ಷ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next