Advertisement

ಕಲ್ಯಾಣ್‌ ಕರ್ನಾಟಕ ಸಂಘ ಶ್ರಾವಣ ಸಂಗೀತ ಕಾರ್ಯಕ್ರಮ, ಸಮ್ಮಾನ

03:31 PM Oct 04, 2018 | Team Udayavani |

ಕಲ್ಯಾಣ್‌: ಕರ್ನಾಟಕ ಸಂಘ ಕಲ್ಯಾಣ್‌ ಇದರ 13ನೇ ವಾರ್ಷಿಕ ಶ್ರಾವಣ ಸಂಗೀತ ಕಾರ್ಯಕ್ರಮವು  ಕಲ್ಯಾಣ್‌ ಪಶ್ಚಿಮದ ಮಾತೋಶ್ರೀ ಸಭಾಗೃಹದಲ್ಲಿ ಸಂಜೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಪ್ರಾರಂಭದಲ್ಲಿ ದೀಪಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘದ ನೂತನ ಅಧ್ಯಕ್ಷೆ ದರ್ಶನಾ ಸೋನ್‌ಕರ್‌, ಸ್ಥಾಪಕಾಧ್ಯಕ್ಷ ನಂದಾ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಟಿ. ಎಸ್‌. ಉಪಾಧ್ಯಾಯ, ಸ್ವರಕಲಾ ವೇದಿಕೆಯ ಕಾರ್ಯಾಧ್ಯಕ್ಷ ಶ್ರೀಧರ ಹಿಂದೋಪುರ್‌ ಮೊದಲಾದವರು ಉಪಸ್ಥಿತರಿದ್ದರು. ಉಮಾ ನಾಯಕ್‌ ಪ್ರಾರ್ಥನೆಗೈದರು.

ಸಂಘದ ಉಪಾಧ್ಯಕ್ಷ ಕೆ. ಎನ್‌. ಸತೀಶ್‌ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರಾವಣ ಸಂಗೀತ ಕಾರ್ಯಕ್ರಮದ ಬಗ್ಗೆ ಅದರ ಪ್ರಾಮುಖ್ಯವನ್ನು ತಿಳಿಸಿ, ಕಲಾವಿದರನ್ನು ಪರಿಚಯಿಸಿದರು. ಶ್ರಾವಣ ಸಂಗೀತ ಕಾರ್ಯಕ್ರಮದಲ್ಲಿ 23 ಮಂದಿ ಕಲಾವಿದರು ಭಾಗವಹಿಸಿದ್ದರು. ಗೀತಾ ಪೂಜಾರಿ, ಜಯಂತಿ ಪೂಜಾರಿ, ಪ್ರೇಮಾ ಪೂಜಾರಿ, ಸುಜಾತಾ ಶೆಟ್ಟಿ, ಸುಜಾತಾ ಶರತ್‌ ಶೆಟ್ಟಿ, ವಸಂತಾ ಚಂದ್ರಶೇಖರ್‌, ಇಂದಿರಾ ಕುಲಕರ್ಣಿ, ಅರುಣಾ ಕುಂದರ್‌, ತೋರ್ವಿ, ಶ್ರೀಧರ ರೈ, ಪ್ರಸನ್ನಿ ರೈ, ಊರ್ವಿ ದೇಶ್‌ಪಾಂಡೆ, ಸಂತೋಷ್‌ ದೇಶ್‌ಪಾಂಡೆ, ಉಮಾ ನಾಯಕ್‌, ಆಶಾ ನಾಯಕ್‌, ಮಹಾಲಕ್ಷ್ಮಿ¾à ತೋರ್ವಿ, ವಿಭಾ ದೇಶು¾ಖ್‌, ವಿಶ್ವನಾಥ ಶೆಟ್ಟಿ, ಶ್ರೀಧರ ಹಿಂದೋಪುರ್‌, ಕೆ. ಎನ್‌. ಸತೀಶ್‌, ಗುರುರಾಜ ಕಾಂಜಿಕರ್‌ ಅವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಘದ ಸಲಹೆಗಾರ ಗುರುದೇವ್‌ ಭಾಸ್ಕರ್‌ ಶೆಟ್ಟಿ ಮತ್ತು ಇತರ ಗಣ್ಯರು ಸಂಘದ ನೂತನ ಅಧ್ಯಕ್ಷೆ ದರ್ಶನಾ ಸೋನ್‌ಕರ್‌ ಅವರನ್ನು ಹಾಗೂ ಹಿರಿಯ ಕಲಾವಿದೆ ನಳಿನಿ ಕೊಟಂಗಿ ಅವರನ್ನು ಸಮ್ಮಾನಿಸಲಾಯಿತು. ಸ್ವರ ಕಲಾವೇದಿಕೆಯ ಕಾರ್ಯಾಧ್ಯಕ್ಷ ಶ್ರೀಧರ ಹಿಂದೋಪುರ್‌ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷೆ ನೂತನ್‌ ಹೆಗ್ಡೆ ವಂದಿಸಿದರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಗೋಪಾಲ್‌ ರಾಘವನ್‌, ತಬಲಾದಲ್ಲಿ ಸಂಕೇತ್‌ ಕದಂ, ಕೊಳಲಿನಲ್ಲಿ ಭಾಸ್ಕರ್‌ ಭಟ್‌ ಅವರು ಸಹಕರಿಸಿದರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next