Advertisement

ಇಂದು ಕಲ್ಯಾಣ ಕರ್ನಾಟಕ ಅಮೃತೋತ್ಸವ ಸಂಭ್ರಮ; ವರ್ಷಪೂರ್ತಿ ಆಚರಣೆಗೆ ಸರಕಾರದ ನಿರ್ಧಾರ

12:03 AM Sep 17, 2022 | Team Udayavani |

ಕಲಬುರಗಿ/ಹೈದರಾಬಾದ್‌: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವಕ್ಕೆ ಕ್ಷಣಗಣನೆ ಆರಂಭ ವಾಗಿದ್ದು, ಇಡೀ ಕಲಬುರಗಿ ನಗರ ಸೇರಿದಂತೆ 7 ಜಿಲ್ಲೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸಡಗರಕ್ಕೆ ಸಾಕ್ಷಿಯಾಗಲಿದ್ದು, “ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ’ಕ್ಕೆ ಚಾಲನೆ ನೀಡುವರು. ನೂತನ ವಿದ್ಯಾಲಯ ಮೈದಾನದಲ್ಲಿ ಬೃಹತ್‌ ವೇದಿಕೆ ನಿರ್ಮಿಸಲಾಗಿದ್ದು, ಸಿಎಂ ಸ್ವಾಗತಕ್ಕೆ ಕಟೌಟ್‌ಗಳು ರಾರಾಜಿಸುತ್ತಿವೆ. ಸರಕಾರಿ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗಿದೆ.

ವಿಶೇಷ ವಿಮಾನದ ಮೂಲಕ ಆಗಮಿಸುವ ಸಿಎಂ ಬಸವರಾಜ ಬೊಮ್ಮಾಯಿ, ಉತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಇದಕ್ಕೂ ಮುಂಚೆ ಉಕ್ಕಿನ ಮನುಷ್ಯ, ಹೈದರಾಬಾದ್‌ ಕರ್ನಾಟಕ ವಿಮೋಚನೆ ರೂವಾರಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ಬಳಿಕ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಸರಕಾರದ ಸಾಧನೆಗಳನ್ನು ಅನಾವರಣಗೊಳಿಸುವರು.

ದೇಶಕ್ಕೆ 1947ರ ಆ. 15ರಂದು ಸ್ವಾತಂತ್ರ್ಯ ಸಿಕ್ಕರೆ ಈಗಿನ ಕಲ್ಯಾಣ ಕರ್ನಾಟಕ ಹಿಂದಿನ ಹೈದರಾಬಾದ್‌ ಕರ್ನಾಟಕ ಭಾಗಕ್ಕೆ 1948ರ ಸೆ.17ರಂದು ಸ್ವಾತಂತ್ರ್ಯ ದೊರಕಿತು. ಹೈದರಾಬಾದ್‌ ನಿಜಾಮನಿಂದ ಈ ಭಾಗ ವಿಮೋಚನೆಗೊಂಡಿದ್ದರಿಂದ ಪ್ರತಿವರ್ಷ ಸೆ.17ರಂದು ವಿಮೋಚನಾ ದಿನ ಹಾಗೂ ಈಗ ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚ ರಿಸ ಲಾಗು ತ್ತಿದೆ. ಬಿ.ಎಸ್‌.ಯಡಿಯೂರಪ್ಪ ಸಿಎಂ ಆಗಿದ್ದಾಗ ಹೈದರಾಬಾದ್‌ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರಿಸಿದ್ದರು. ವಿಮೋಚನಾ ದಿನಾಚರಣೆಯನ್ನು ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಮಾರ್ಪಡಿಸಿದ್ದರು.

ಶಾ ವರ್ಸಸ್‌ ಕೆಸಿಆರ್‌
ಈ ಬಾರಿಯ ಹೈದರಾಬಾದ್‌ ವಿಮೋ ಚನ ದಿನಾಚರಣೆಗೆ ಹೆಚ್ಚಿನ ಮಹತ್ವ ಬಂದಿದೆ. ಕೇಂದ್ರ ಸರಕಾರ ಹೈದರಾಬಾದ್‌ ವಿಮೋಚನ ದಿನಾಚರಣೆಯ ಹೆಸರಲ್ಲೇ ಹೈದರಾಬಾದ್‌ನಲ್ಲಿ ಇದೇ ಮೊದಲ ಬಾರಿಗೆ ಬೃಹತ್‌ ಕಾರ್ಯಕ್ರಮ ಏರ್ಪಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಭಾಗಿಯಾಗುವರು. ತೆಲಂ ಗಾಣದ ಕೆಸಿಆರ್‌ ಸರಕಾರವೂ ಇದಕ್ಕೆ ಪ್ರತಿ ಯಾಗಿ 3 ದಿನ ತೆಲಂಗಾಣ ಏಕತಾ ದಿನವನ್ನು ಆಚರಿಸುತ್ತಿದೆ. ಹೈದರಾ ಬಾದ್‌ನಲ್ಲಿಯೇ ಪ್ರತ್ಯೇಕವಾಗಿ ಎರಡು ಧ್ವಜಾ ರೋಹಣ ಸಮಾ ರಂಭಗಳು ನಡೆಯಲಿವೆ ಎಂಬುದು ವಿಶೇಷ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next