Advertisement

ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ಉಲ್ಬಣ: ಆತಂಕ

04:27 PM Sep 27, 2021 | Team Udayavani |

ಮಂಡ್ಯ: ಲಸಿಕೆ ಹಾಕದ ಪರಿಣಾಮ ಜಿಲ್ಲೆಯಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡು ಸಾವನ್ನಪ್ಪುತ್ತಿರುವುದು ರೈತರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

Advertisement

ಜಿಲ್ಲೆಯಲ್ಲಿ ಹೈನುಗಾರಿಕೆ ರೈತರ ಆರ್ಥಿಕ ಜೀವನಕ್ಕೆ ಸಹಕಾರಿಯಾಗಿದೆ. ಕೊರೊನಾ ಸಂದ ರ್ಭದಲ್ಲಿ ಕೃಷಿಯಿಂದ ಆರ್ಥಿಕ ಹೊಡೆತ ಬಿದ್ದರೂ ಹೈನುಗಾರಿಕೆ ರೈತರ ಕೈಹಿಡಿದಿತ್ತು. ಆದರೆ ಈಗ ಕಾಲುಬಾಯಿ ಜ್ವರದಿಂದ ಹೈನುಗಾರಿಕೆ ತತ್ತರಿಸುವಂತೆ ಮಾಡಿದೆ.

ಲಸಿಕೆ ಹಾಕದ ಪರಿಣಾಮ: ಪ್ರಸ್ತುತ ವರ್ಷ ರಾಸುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಹಾಕಿಲ್ಲ.ಇದರಿಂದ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರಕಾಣಿಸಿಕೊಂಡಿದೆ. ಪ್ರತಿ ವರ್ಷಕ್ಕೆ ಎರಡು ಬಾರಿ ಲಸಿಕೆಹಾಕಬೇಕು. ಆದರೆ ಕಳೆದ 2020ರ ಡಿಸೆಂಬರ್‌ನಲ್ಲಿ ಲಸಿಕೆಹಾಕಲಾಗಿತ್ತು. ಆ ನಂತರ 2021ರ ಜೂನ್‌, ಜುಲೈನಲ್ಲಿಲಸಿಕೆ ಹಾಕಬೇಕಾಗಿತ್ತು. ಆದರೆ ಲಸಿಕೆ ಹಾಕದ ಪರಿಣಾಮಕಾಲುಬಾಯಿ ಜ್ವರದಿಂದ ರಾಸುಗಳ ಮರಣ ಮೃದಂಗ ಮುಂದುವರಿದಿದೆ.

ಸರ್ಕಾರಗಳ ನಿರ್ಲಕ್ಷ್ಯ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವರ್ಷ ಸ್ಕೀಂ ಆಧಾರದ ಮೇಲೆ ಲಸಿಕೆಹಾಕುವ ಅಭಿಯಾನ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಸಿಕೆ ಹಾಕಲು ಯಾವುದೇ ಅನುದಾನ, ಅಭಿಯಾನ ನಡೆಸದ ಪರಿಣಾಮಕಾಲುಬಾಯಿ ಜ್ವರ ಹೆಚ್ಚಳಕ್ಕೆ ಕಾರಣವಾಗಿದೆ.

ರಾಸುಗಳ ಸಾವು: ಜಿಲ್ಲೆಯ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ ಹಾಗೂಕೆ.ಆರ್‌.ಪೇಟೆ ತಾಲೂಕುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ. ಈಗಾಗಲೇ ಮದ್ದೂರು, ಶ್ರೀರಂಗಪಟ್ಟಣ ಹಾಗೂ ಮಂಡ್ಯ ತಾಲೂಕಿನಲ್ಲಿ ರಾಸುಗಳು ಸಾವನ್ನಪ್ಪುತ್ತಿವೆ. ಮಂಡ್ಯ ತಾಲೂಕಿನಕೊತ್ತತ್ತಿಯ ಲಾಳನಕೆರೆ, ಮೊತ್ತಹಳ್ಳಿ ಗ್ರಾಮದಲ್ಲಿ ಕಾಲುಬಾಯಿ ಜ್ವರಕ್ಕೆ ನಿತ್ಯ ಮೇಕೆ, ಕುರಿ, ಹಸುಗಳುಸಾವನ್ನಪ್ಪಿವೆ. ಇದುವರೆಗೂ 5 ಹಸು, 1 ಕರು, 2 ಟಗರು,2 ಮೇಕೆಗಳು ಮೃತಪಟ್ಟಿವೆ. ಮದ್ದೂರಿನಲ್ಲೂ ಮೂರುಹಸುಗಳು ಕಾಲುಬಾಯಿ ಜ್ವರಕ್ಕೆ ತುತ್ತಾಗಿವೆ. ಕಳೆದ ಒಂದು ತಿಂಗಳಿನಿಂದ 20ಕ್ಕೂ ಹೆಚ್ಚು ರಾಸುಗಳು ಮೃತಪಟ್ಟಿರುವುದು ವರದಿಯಾಗಿದೆ.

Advertisement

ಲಸಿಕೆ ಹಾಕುವಂತೆ ಆಗ್ರಹ: ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ಹೆಚ್ಚಾಗುತ್ತಿದೆ. ಆದ್ದರಿಂದ ಕೂಡಲೇ ಸರ್ಕಾರ ಲಸಿಕೆ ಹಾಕಲು ಮುಂದಾಗಬೇಕು. ಪ್ರತಿ ವರ್ಷದಂತೆ ಎರಡು ಬಾರಿ ಲಸಿಕೆ ಹಾಕಬೇಕು. ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ತುಂಬಾ ತೊಂದರೆಯಾಗಲಿದೆ. ಎಷ್ಟೋ ರೈತರು ಜಾನುವಾರುಗಳಿಗೆ ವಿಮೆ ಮಾಡಿಸಿಲ್ಲ. ಇದರಿಂದ ಯಾವುದೇ ಪರಿಹಾರವೂ ಸಿಗುವುದಿಲ್ಲ. ಪಶು ಇಲಾಖೆಯಿಂದಲೂ ಪರಿಹಾರ ನೀಡುವುದಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ಕೂಡಲೇ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

 

ಸರ್ಕಾರ ಪರಿ ಹಾರ ನೀಡಲಿ: ಕೊತ್ತತ್ತಿ ಪಂಚಾಯ್ತಿ ವ್ಯಾಪ್ತಿಯ ಕೊತ್ತತ್ತಿ, ಲಾಳನಕೆರೆ ಹಾಗೂ ಮೊತ್ತಹಳ್ಳಿ ಗ್ರಾಮದಲ್ಲಿ ಕಾಲುಬಾಯಿ ಜ್ವರಉಲ್ಬಣವಾಗಿದ್ದು, ಪ್ರತಿದಿನ ಒಂದಲ್ಲ ಒಂದುಜಾನುವಾರುಗಳು ಮೃತಪಡುತ್ತಿವೆ. ಜಾನುವಾರು ಸಾಕಿರುವ ರೈತರು ಕಂಗಾಲಾಗಿದ್ದಾರೆ. ಈ ಭಾಗದಲ್ಲಿರುವ ಕೊತ್ತತ್ತಿ ಪಶು ವೈದ್ಯ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ. ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕದಿರುವುದು ರೋಗ ಉಲ್ಬಣಕ್ಕೆ ಕಾರಣ. ನಾನು ಹಸು ಕಳೆದುಕೊಂಡಿದ್ದು, ಸರ್ಕಾರದಿಂದ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ಮೊತ್ತಹಳ್ಳಿಯ ಸಚಿನ್‌ ಒತ್ತಾಯಿಸಿದರು.

ಉದ್ಘಾಟನೆಯಾದರೂ ವೈದ್ಯರ ನೇಮಕವಿಲ್ಲ : ಕೊತ್ತತ್ತಿ ಗ್ರಾಮದಲ್ಲಿ ಹಳೇ ಪಶು ಆಸ್ಪತ್ರೆಯನ್ನು ತೆರವುಗೊಳಿಸಿ ನೂತನವಾಗಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು, ಕಳೆದ 2 ತಿಂಗಳ ಹಿಂದೆ ಶಾಸಕರವೀಂದ್ರ ಶ್ರೀಕಂಠಯ್ಯ ಉದ್ಘಾಟನೆ ಮಾಡಿದ್ದು,ಬಿಟ್ಟರೆ ಇದುವರೆಗೂ ಪಶು ವೈದ್ಯರನ್ನು ನೇಮಿಸಿಲ್ಲ.ಶಾಸಕರು, ಅ ಧಿಕಾರಿಗಳು ಇತ್ತ ಗಮನಹರಿಸಿಲ್ಲ.ಅವರ ನಿರ್ಲಕ್ಷ್ಯದಿಂದಲೇ ಇಂದು ರಾಸುಗಳನ್ನುರೈತರು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಪಶು ವೈದ್ಯರ ಕೊರತೆ:

ಜಿಲ್ಲೆಯ ಬಹುತೇಕ ಪಶು ಆಸ್ಪತ್ರೆಗಳಲ್ಲಿ ವೈದ್ಯರೇಇಲ್ಲ. ಆಸ್ಪತ್ರೆಗಳಲ್ಲಿ ಸುಮಾರು 400ಕ್ಕೂ ಹೆಚ್ಚುಹುದ್ದೆಗಳು ಖಾಲಿ ಇವೆ. ಒಂದು ಆಸ್ಪತ್ರೆಯ ಪಶು ವೈದ್ಯರು ನಾಲ್ಕೈದು ಆಸ್ಪತ್ರೆಗಳ ನಿಭಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊತ್ತತ್ತಿ ಪಶು ಆಸ್ಪತ್ರೆಯಲ್ಲಿ ಕಳೆದ 11 ತಿಂಗಳಿನಿಂದ ಯಾವುದೇವೈದ್ಯರಿಲ್ಲ. ಸಿಬ್ಬಂದಿಗಳು ಸರಿಯಾಗಿ ಕೆಲಸನಿರ್ವಹಿಸುತ್ತಿಲ್ಲ. ಜಾನುವಾರುಗಳಿಗೆ ರೋಗಬಂದರೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ಜಾನುವಾರುಗಳು ಸಾವನ್ನಪ್ಪುತ್ತಿದೆ. ಕೂಡಲೇಪಶು ವೈದ್ಯರನ್ನು ನೇಮಕ ಮಾಡಬೇಕು ಎಂದು ಸುತ್ತಮುತ್ತಲ ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next