Advertisement

ಕಲ್ಲೋಳ-ಯಡೂರು ಸೇತುವೆ ಜಲಾವೃತ

08:38 PM Jul 17, 2021 | Team Udayavani |

ಚಿಕ್ಕೋಡಿ: ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದ ಕೊಂಕಣ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಗಡಿ ಜಿಲ್ಲೆಯ ಕೃಷ್ಣಾ ನದಿ ಒಳಹರಿವು ಹೆಚ್ಚಳವಾಗಿ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರು ಸಂಪರ್ಕ ಸೇತುವೆ ಶುಕ್ರವಾರ ಜಲಾವೃತಗೊಂಡಿದೆ.

Advertisement

ಸದ್ಯಕ್ಕೆ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ ಮೂಲಕ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ 56 ಸಾವಿರ ಕ್ಯೂಸೆಕ್‌ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದು ನದಿ ತೀರದ ಜನರಲ್ಲಿ ಆತಂಕ ಮನೆಮಾಡಿದೆ. ಈಗಾಗಲೇ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಜಾರಿ ಮಾಡಲಾಗಿದೆ.

ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಜಿಟಿಜಿಟಿ ಮಳೆ ಆಗುತ್ತಿದೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 44,750 ಕ್ಯೂಸೆಕ್‌, ದೂಧಗಂಗಾ ನದಿಯಿಂದ 11,649 ಕ್ಯೂಸೆಕ್‌ ನೀರು ಸೇರಿದಂತೆ ಒಟ್ಟು 56 ಸಾವಿರ ಕ್ಯೂಸೆಕ್‌ಗೂ ಅ ಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.

ಮಹಾರಾಷ್ಟ್ರದ ಜಲಾನಯನ ಪ್ರದೇಶವಾದ ಕೊಯ್ನಾ- 23 ಮಿ.ಮೀ, ನವಜಾ-70 ಮಿ.ಮೀ, ಮಹಾಬಲೇಶ್ವರ-57 ಮಿ.ಮೀ, ವಾರಣಾ-10 ಮಿ.ಮೀ, ಕಾಳಮ್ಮವಾಡಿ-15 ಮಿ.ಮೀ, ರಾಧಾನಗರಿ-42 ಮಿ.ಮೀ, ಪಾಟಗಾಂವ-104 ಮಿ.ಮೀ ಮಳೆಯಾಗಿದೆ. ಹಿಪ್ಪರಗಿ ಬ್ಯಾರೆಜ್‌ನಿಂದ 44,750 ಕ್ಯೂಸೆಕ್‌ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಬಿಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next