Advertisement

ಕಲ್ಲಾಪು:  ಅಕ್ರಮ ಮರಳು ದಾಸ್ತಾನು ಪತ್ತೆ 

11:21 AM Jan 27, 2018 | Team Udayavani |

ಮಂಗಳೂರು: ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಕಲ್ಲಾಪು ಪಟ್ಲ ಅಂಬೋಡಿ ಹೌಸ್‌ ಬಳಿ ಸಾಮಾನ್ಯ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದನ್ನು ಉಳ್ಳಾಲ ಪೊಲೀಸರು ಪತ್ತೆ ಹಚ್ಚಿದ್ದು, ಒಟ್ಟು ಸುಮಾರು 20 ಲಕ್ಷ ರೂ. ಮೌಲ್ಯದ  2,500 ಟನ್‌ (ಅಂದಾಜು 300 ಲೋಡ್‌) ಮರಳನ್ನು ವಶಪಡಿಸಿ ಕೊಂಡಿದ್ದಾರೆ.

Advertisement

ಇದು ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುವ  ದಂಧೆಗೆ ಸಂಬಂಧಿಸಿದ ಮರಳು ಆಗಿರಬಹುದೆಂದು ಪೊಲೀಸರು ಶಂಕಿಸಿದ್ದು, ಈ ಬಗ್ಗೆ  ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು  ತಿಳಿಸಿದ್ದಾರೆ.  ವಶಪಡಿಸಿಕೊಂಡ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ. 

ಉಳ್ಳಾಲ  ಪೊಲೀಸ್‌ ಇನ್ಸ್‌ಪೆಕ್ಟರ್‌ ಗೋಪಿಕೃಷ್ಣ, ಕೆ.ಆರ್‌., ಸಬ್‌ ಇನ್ಸ್‌ ಪೆಕ್ಟರ್‌ ವಿನಾಯಕ ತೋರಗಲ್‌, ಎಎಸ್‌ಐ ವಿಜಯರಾಜ್‌, ಎಚ್‌ಸಿ ಸುರೇಶ್‌, ಸಿಬಂದಿ ಲಿಂಗರಾಜ್‌, ಬಸವರಾಜ್‌,  ಪ್ರಶಾಂತ, ಚಂದ್ರ ನಾಯ್ಕ, ಚಿದಾನಂದ, ಸುರೇಶ  ಸಹಕರಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next