ಬಂಟ್ವಾಳ: ರಾ.ಹೆ.75ರ ಕಲ್ಲಡ್ಕದಲ್ಲಿ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಕಾಮಗಾರಿಯ ಹೊಂಡಕ್ಕೆ ಬಿದ್ದ ಘಟನೆ ಬುಧವಾರ ನಡೆದಿದ್ದು, ಆಟೋ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಬಿ.ಸಿ.ರೋಡು- ಅಡ್ಡಹೊಳೆ ಕಾಮಗಾರಿಗಾಗಿ ಅಪಾಯಕಾರಿ ರೀತಿಯಲ್ಲಿ ಹೆದ್ದಾರಿ ಬದಿ ಅಗೆದು ಹೊಂಡ, ಕಂದಕಗಳನ್ನು ಸೃಷ್ಟಿಸಲಾಗಿದ್ದು, ಕಾಮಗಾರಿ ನಿರ್ವಹಣಾ ಸಂಸ್ಥೆಯ ಕುರಿತು ಸಾರ್ವಜನಿಕರಿಂದ ಆಕ್ರೋಶಗಳು ಕೂಡ ವ್ಯಕ್ತವಾಗಿದೆ.
ಮಂಗಳೂರು ಭಾಗದಿಂದ ಆಗಮಿಸಿದ ಆಟೋ ರಿಕ್ಷಾದ ಚಾಲಕನಿಗೆ ಸರಿಯಾದ ಮಾಹಿತಿ ಇಲ್ಲದೆ ಹೊಂಡಕ್ಕೆ ಬಿದ್ದಿದೆ ಎನ್ನಲಾಗಿದೆ. ಬಳಿಕ ಆಟೋ ರಿಕ್ಷಾವನ್ನು ಹಿಚಾಚಿ ಮೂಲಕ ಮೇಲಕ್ಕೆತ್ತಲಾಗಿದ್ದು, ರಿಕ್ಷಾ ಬಹುತೇಕ ಜಖಂಗೊಂಡಿದೆ.