Advertisement

ಈ ವಿಚಾರದಲ್ಲಿ ಶಾರುಖ್‌ ಖಾನ್‌ ʼಜವಾನ್‌ʼ ಚಿತ್ರವನ್ನೇ ಮೀರಿಸಿದ ʼKalki 2898 ADʼ

04:00 PM Jun 30, 2024 | Team Udayavani |

ಹೈದರಾಬಾದ್:‌ ʼಕಲ್ಕಿ 2898 ಎಡಿʼ (Kalki 2898 AD) ವಿಶ್ವದಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ. ಮಹಾಭಾರತದಿಂದ ಸ್ಪೂರ್ತಿ ಪಡೆದು ಸೈನ್ಸ್‌ ಫೀಕ್ಷನ್‌ ನಲ್ಲಿ ಬಂದಿರುವ ಈ ಸಿನಿಮಾದ ಅದ್ಧೂರಿ ವಿಶ್ಯುವಲ್ಸ್‌ ಗಳನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

Advertisement

ದಿನಕಳೆದಂತೆ ʼಕಲ್ಕಿ 2898 ಎಡಿʼ ಸಿನಿಮಾ ನೋಡುಗರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಭಾಸ್‌ (Prabhas), ಅಮಿತಾಭ್‌ ಹಾಗೂ ಕಮಲ್‌ ಹಾಸನ್‌ ಅವರ ಹೊಸ ಅವತಾರಕ್ಕೆ ಪ್ರೇಕ್ಷಕರು ಫುಲ್‌ ಮಾರ್ಕ್ಸ್‌ ಕೊಟ್ಟಿದ್ದಾರೆ. ಇತ್ತ ಅಲ್ಲು ಅರ್ಜುನ್‌, ಯಶ್‌ ಸೇರಿದಂತೆ ಇತರೆ ಖ್ಯಾತ ಸೆಲೆಬ್ರಿಟಿಗಳು ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಚಿತ್ತ ರಿಲೀಸ್‌ ಆಗಿ ಮೂರು ದಿನ ಕಳೆದಿದ್ದು, ಭಾರತದಲ್ಲಿ 200 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ವರ್ಲ್ಡ್‌ ವೈಡ್‌ ಗಳಿಕೆಯಲ್ಲಿ 300 ಕೋಟಿ ರೂ ದಾಟಿದೆ. ಈಗಾಗಲೇ ಗಳಿಕೆಯಲ್ಲಿ ದಾಖಲೆ ಬರೆದಿರುವ  ಸಿನಿಮಾ ಮತ್ತೊಂದು ವಿಚಾರದಲ್ಲೂ ದಾಖಲೆ ಬರೆದಿದೆ.

ಭಾನುವಾರ(ಜು.30ರಂದು) ಮಧ್ಯಾಹ್ನ 1 ಗಂಟೆಯ ವೇಳೆ ಬುಕ್‌ ಮೈ ಶೋನಲ್ಲಿ ʼಕಲ್ಕಿʼ ಸಿನಿಮಾದ ಟಿಕೆಟ್‌ ಕಳೆದ 1 ಗಂಟೆಯಲ್ಲಿ ಹೆಚ್ಚು ಮಾರಾಟವಾಗಿದೆ ಎಂದು ತೋರಿಸಿದೆ. ಕಳೆದ 1 ಗಂಟೆಯಲ್ಲಿ ಸಿನಿಮಾದ 93.77 ಸಾವಿರ ಟಿಕೆಟ್‌ ಗಳು ಮಾರಾಟವಾಗಿದೆ ಎಂದು ಬಹಿರಂಗಪಡಿಸಿದೆ.

ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಿನಲ್ಲಿ ಶಾರುಖ್‌ ಖಾನ್‌ ಅವರ ʼಜವಾನ್‌ʼ ಸಿನಿಮಾದ 86 ಸಾವಿರ ಟಿಕೆಟ್‌ ಗಳು ಒಂದು ಗಂಟೆಯೊಳಗಡೆ ಮಾರಾಟವಾಗಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ʼಕಲ್ಕಿ 2898 ಎಡಿʼ ಬ್ರೇಕ್‌ ಮಾಡಿದೆ.

Advertisement

ಚಿತ್ರದಲ್ಲಿ ಪ್ರಭಾಸ್‌, ಅಮಿತಾಭ್‌ ಬಚ್ಚನ್‌, ದೀಪಿಕಾ ಪಡುಕೋಣೆ, ಕಮಲ್‌ ಹಾಸನ್‌, ದಿಶಾ ಪಟಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next