Advertisement
ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾದ “ಕಲ್ಕಿ’ ಚಿತ್ರ ಬರೋಬ್ಬರಿ 750 ಕೋಟಿ ರೂಪಾಯಿ ಗಳಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಇದು ವಿಶ್ವದಾದ್ಯಂತ ಚಿತ್ರ ಏಳು ದಿನಗಳಲ್ಲಿ ಬಾಚಿಕೊಂಡಿರುವ ಕಲೆಕ್ಷನ್. ಈ ಕಲೆಕ್ಷನ್ ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ಹೊಸ ಹುರುಪು ಕೊಟ್ಟಿದ್ದು ಸುಳ್ಳಲ್ಲ. ಮಲಯಾಳಂ ಹೊರತುಪಡಿಸಿ ಹಿಂದಿ, ತಮಿಳು, ತೆಲುಗು, ತೆಲುಗು ಹಾಗೂ ಕನ್ನಡ ಚಿತ್ರರಂಗಗಳು ಒಂದು ಗೆಲುವಿಗಾಗಿ ಎದುರು ನೋಡುತ್ತಿವೆ. ಬಿಡುಗಡೆಯಾದ ಸಿನಿಮಾಗಳು ಕೂಡಾ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡುತ್ತಿಲ್ಲ. ಹೀಗಿರುವಾಗ ಪ್ರೇಕ್ಷಕ ಸಿನಿಮಾ ಬಗ್ಗೆ ಆಸಕ್ತಿ ಕಳೆದುಕೊಂಡನಾ ಎಂಬ ಸಂದೇಹ ಬಂದಿದ್ದು ಸುಳ್ಳಲ್ಲ.
Related Articles
Advertisement
“ಕಲ್ಕಿ’ ಸಿನಿಮಾ ಮೂಲ ತೆಲುಗು ಚಿತ್ರರಂಗದಿಂದ ತಯಾರಾದ ಚಿತ್ರವಾದರೂ ಅದರ ಗೆಲುವು ಮಾತ್ರ ಈಗ ಎಲ್ಲಾ ಚಿತ್ರರಂಗಗಳಿಗೆ ವಿಸ್ತರಿಸುವ ಜೊತೆಗೆ ವಿಶ್ವಾಸ ಮೂಡಿಸಿರುವುದು ಸುಳ್ಳಲ್ಲ. ಅದರಲ್ಲೂ ಬಿಗ್ ಬಜೆಟ್‌ನ ಸ್ಟಾರ್ ಸಿನಿಮಾಗಳಿಗೆ “ಕಲ್ಕಿ’ಯ ಕಲೆಕ್ಷನ್ ವಿಶ್ವಾಸ ತಂದಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಸಿನಿಮಾಗಳ ರಿಲೀಸ್, ಪ್ರಮೋಶನ್ ಪ್ಲ್ರಾನ್ ಎಲ್ಲದರಲ್ಲೂ ಒಂದಷ್ಟು ಬದಲಾವಣೆಯಾಗುವ ಸಾಧ್ಯತೆಯಂತೂ ಇದೆ. ಸದ್ಯ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಸ್ಟಾರ್ ಸಿನಿಮಾಗಳು ಆಗಸ್ಟ್‌ನಿಂದ ಬಿಡುಗಡೆಯಾಗಲಿವೆ. ಸದ್ಯ “ಕಲ್ಕಿ’ಯನ್ನು ಕಣ್ತುಂಬಿಕೊಂಡ ಪ್ರೇಕ್ಷಕ ಅದೇ ಮೂಡ್‌ನಲ್ಲಿ ತಮ್ಮ ಸಿನಿಮಾಕ್ಕೂ ಬರುತ್ತಾನೆ ಎಂಬ ನಂಬಿಕೆಯೊಂದಿಗೆ ಸಿನಿಮಂದಿ ಎದುರು ನೋಡುತ್ತಿರುವುದು ಸುಳ್ಳಲ್ಲ. ಆದರೆ, ಇಲ್ಲಿ ಸ್ಟಾರ್ ಸಿನಿಮಾಗಳು ಒಂದನ್ನು ಗಮನಿಸಬೇಕು. ಅದು ಸಿನಿಮಾದ ಕಥೆ. ತಮ್ಮ ಕಥೆ ಹೇಗಿದೆ ಮತ್ತು ಯಾವ ವರ್ಗದ ಜನ ಬರಬಹುದು ಎಂಬುದು. ಆ ನಿಟ್ಟಿನಲ್ಲಿ ಸಿನಿಮಾದ ಪ್ರಚಾರ ಇದ್ದರೆ ಒಳಿತು. ಅದು ಬಿಟ್ಟು ಸಿನಿಮಾಕ್ಕೆ ಜನ ಬರಲಿಲ್ಲ ಎಂದು ಕೊರಗಿದರೆ ಅದಕ್ಕೆ ಅರ್ಥವಿರಲ್ಲ.
ರವಿಪ್ರಕಾಶ್ ರೈ