ಕುಷ್ಟಗಿ: ಕೋವಿಡ್ ಮಹಾಮಾರಿ ಸೋಂಕು ಮಕ್ಕಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಆಗಿರುವ ಅಸಮತೋಲನವನ್ನು ಕಲಿಕಾ ಚೇತರಿಕೆ, ಕಲಿಕಾ ಹಬ್ಬಗಳ ಮೂಲಕ ಸರಿದೂಗಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಹೇಳಿದರು.
ಇಲ್ಲಿನ ಕಾರ್ಗಿಲ್ ವೃತ್ತದ ಬಳಿ ಸಮಗ್ರ ಶಿಕ್ಷಣ ಕರ್ನಾಟಕ, ಜಿ.ಪಂ. ಸಹಯೋಗದಲ್ಲಿ ಕುಷ್ಟಗಿ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚುಸುವಲ್ಲಿ ಪರಿಣಾಮಕಾರಿಯಾಗಿದೆ. ತರಗತಿ ಕೋಣೆಯಲ್ಲಿ ಒತ್ತಡಮುಕ್ತವಾಗಿ ಸಂಭ್ರಮದಿಂದ ಕಲಿಯಬಹುದು ಎಂಬುದಕ್ಕೆ ಸಾಕ್ಷಿ ಎಂದರು.
Related Articles
ಗಮನ ಸೆಳೆದ ಮಕ್ಕಳ ಡೊಳ್ಳು ಮೇಳ
ಮಕ್ಕಳ ಕಲಿಕಾ ಹಬ್ಬದ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿಡೊಳ್ಳು ವಾದ್ಯಗಳ ಸಮೇತ ಸಂಚರಿಸಿತು. ಈ ಮಕ್ಕಳ ಕಲಿಕಾ ಹಬ್ಬದಲ್ಲಿ ನೆರೆಬೆಂಚಿ ಶಾಲೆ ವಿದ್ಯಾರ್ಥಿಗಳು ಡೊಳ್ಳು ವಾದ್ಯ ಬಾರಿಸಿರುವುದು ವಿಶೇಷವೆನಿಸಿತು. ಈ ವಾದ್ಯಮೇಳದಲ್ಲಿ ಶಿಕ್ಷಕರು ಡೊಳ್ಳು ವಾದ್ಯ ನುಡಿಸಿ ಮಕ್ಕಳ ಸಂಭ್ರಮದಲ್ಲಿ ಪಾಲ್ಗೊಂಡರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಾಜಿ ಬಳಿಗಾರ, ಸಿ.ಆರ್.ಪಿ. ಚನ್ನಪ್ಪ ಚನ್ನಪ್ಪನವರ್, ಬಿಆರ್ ಪಿ ಶರಣಪ್ಪ ತೆಮ್ಮಿನಾಳ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಹ್ಮದ ಹುಸೇನ ಆದೋನಿ, ಬಸಟೆಪ್ಪ ಸಿಳ್ಳೀನ್, ಮುಖ್ಯ ಶಿಕ್ಷಕಿ ಜಯದೇವಿ ಉಪ್ಪೀನ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಿದ್ಯಾ ಕಂಪಾಪೂರಮಠ, ಹೊನ್ನಪ್ಪ ಡೊಳ್ಳೀನ್, ಸುಭಾಸ ನಿಡಸನೂರು, ವಿದ್ಯಾ ಕಾಡಾದ್ ಮತ್ತಿತರರಿದ್ದರು.