Advertisement

Kali River; ತಡೆಬೇಲಿಯನ್ನು ದಾಟಿ ನದಿಗಿಳಿಯುತ್ತಿರುವ ಜನತೆ!

11:22 PM Nov 15, 2023 | Team Udayavani |

ದಾಂಡೇಲಿ : ಮೊಸಳೆಗಳಿಂದ ಜೀವ ಹಾನಿ ಘಟನೆ ಸಂಭವಿಸದಂತೆ ಅರಣ್ಯ ಇಲಾಖೆಯವರು ನಗರದ ಕುಳಗಿ ರಸ್ತೆಯ ಕಾಳಿ ನದಿ ತಟದಲ್ಲಿ ನದಿಗಿಳಿಯದಂತೆ ತಡೆಬೇಲಿಯನ್ನು ಅಳವಡಿಸಿದ್ದಾರೆ.

Advertisement

ಈಗಾಗಲೆ ನಗರದಲ್ಲಿ ಐವರನ್ನು ಮೊಸಳೆ ಬಲಿ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಇಂತಹ ದುರ್ಘಟನೆಗಳು ನಡೆಯಬಾರದೆಂದು ತಾಲೂಕ್ ಆಡಳಿತ ನಗರ ಆಡಳಿತ ಮತ್ತು ಅರಣ್ಯ ಇಲಾಖೆ ಸಾಕಷ್ಟು ಬಾರಿ ಜನ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಲೆ ಬರುತ್ತಿದೆ. ಇನ್ನೂ ನದಿ ಹತ್ತಿರದ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಇದನ್ನು ಮೀರಿ ನದಿಗಳಿದವರಿಗೆ ಸಾಕಷ್ಟು ಬಾರಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಎಚ್ಚರಿಕೆಯನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇಷ್ಟೆಲ್ಲ ಆದರೂ ನಗರದ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಹತ್ತಿರ ನದಿಗಿಳಿಯದಂತೆ ನಿರ್ಮಿಸಿದ ತಡೆ ಬೇಲಿಯನ್ನು ದಾಟಿ ನದಿಗಳಿದು ಬಟ್ಟೆ ತೊಳೆಯುವುದು ಬುಧವಾರ ಕಂಡು ಬಂದಿದೆ. ಬಟ್ಟೆ ತೊಳೆಯುತ್ತಿರುವ ಹತ್ತಿರದಲ್ಲಿ ಸೇತುವೆಯ ಸಮೀಪ ಮೊಸಳೆಯು ಪ್ರತ್ಯಕ್ಷ ವಾಗಿದೆ. ಆದರೂ ಜನತೆ ಮಾತ್ರ ಇದು ಯಾವುದಕ್ಕೂ ಕ್ಯಾರೆಯೆನ್ನದೆ ನದಿಗಿಳಿಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next