Advertisement

ರೈತರ ಸ್ಥಿತಿ ಸುಧಾರಣೆ ಅವಶ್ಯ: ಅಜಯಸಿಂಗ್‌

03:53 PM Feb 14, 2021 | Team Udayavani |

ಜೇವರ್ಗಿ: ರೈತರು ದೇಶದ ಬೆನ್ನೆಲುಬು ಆಗಿದ್ದು, ಅವರ ಶ್ರೇಯೋಭಿವೃದ್ದಿಗಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಂಡ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಮುಂದಾಗಬೇಕು ಎಂದು ಶಾಸಕ ಡಾ| ಅಜಯಸಿಂಗ್‌ ಹೇಳಿದರು.

Advertisement

ತಾಲೂಕಿನ ಸೊನ್ನ ಕ್ರಾಸ ಬಳಿ ಇರುವ ಕಾಶಿಂ ಪಿಂಜಾರಾ ಜಮೀನಿನಲ್ಲಿ ಕಲಶ್‌ ಸೀಡ್ಸ್‌ ಆಯೋಜಿಸಿದ್ದ ರೈತರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಎಂಟು ಸಾವಿರ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದ್ದು, ಸೊನ್ನ, ಕಲ್ಲಹಂಗರಗಾ, ನೆಲೋಗಿ ವ್ಯಾಪ್ತಿಯಲ್ಲಿಯೇ ಐದು ಸಾವಿರ ಎಕರೆ ಬಿತ್ತನೆ ಮಾಡಲಾಗಿದೆ.

ಕಲಶ್‌ ಸಿಡ್ಸ್‌ ಹೈಬ್ರಿಡ್‌ ಮೆಣಸಿನಕಾಯಿ ಹಾಗೂ ಸೊನ್ನ ವಿಜಯಕುಮಾರ ಪಾಟೀಲ ಅಗ್ರೋ ಏಜೆನ್ಸಿ ಸಹಯೋಗದಲ್ಲಿ ರೈತರಿಗೆ ಹಂತ
ಹಂತವಾಗಿ ಹೆಚ್ಚಿನ ಇಳುವರಿ ಬರುವ ಮಾಹಿತಿ ಒದಗಿಸುವ ಮೂಲಕ ಉತ್ತಮ ಇಳುವರಿಗೂ ರೈತರಿಗೆ ಸಹಕಾರಿಯಾಗಿದ್ದಾರೆ ಎಂದರು.

ಸೊನ್ನ ವಿರಕ್ತ ಮಠದ ಪೀಠಾಧಿ  ಪತಿ ಡಾ| ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಶೀಲ್ದಾರ್‌ಸಿದರಾಯ ಭೋಸಗಿ, ನೆಲೋಗಿ
ಗ್ರಾ.ಪಂ ಅಧ್ಯಕ್ಷ ಬೈಲಪ್ಪ ನೇದಲಗಿ, ಶರಣು ಸಾಹು ಬಿಲ್ಲಾಡ, ಗಿರೆಪ್ಪಗೌಡ ಕಲ್ಲಹಂಗರಗಾ, ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ಅಶೋಕ ಪಾಟೀಲ, ಬಹದ್ದೂರ ರಾಠೊಡ, ವಿಜಯಕುಮಾರ ಬಿರಾದಾರ, ಚಂದ್ರು ಹೊಸಮನಿ, ರಾಚಣ್ಣ ಸಾಹು ಕಲ್ಲಹಂಗರಗಿ, ಸಂಗಮೇಶ ಗೋಗಿ, ಕುಬೇರ, ಎಂ ಬಾಪುಗೌಡ ಕಲ್ಲಹಂಗರಗಿ, ಶರಣು ಹೊಸಮನಿ, ನಿಂಗಣ್ಣ ಕುಂಬಾರ, ಸುನೀಲ ಹಳ್ಳಿ, ಧೂಳೇಶ ಪಾಟೀಲ ನೆಲೋಗಿ, ಬಾಬುಗೌಡ ವಿಭೂತಿ, ಬಸವಂತ್ರಾಯಗೌಡ ಗಾಣಿಗೇರ, ಧರ್ಮರಾಜ ಜೊಗೂರ, ಶರಬು ಕಲ್ಯಾಣಿ, ಮಲ್ಲಿಕಾರ್ಜುನ ಬೂದಿಹಾಳ, ರಿಯಾಜ್‌ ಪಟೇಲ ಪಾಲ್ಗೊಂಡಿದ್ದರು.

Advertisement

ಓದಿ : ಬೈಪಾಸ್‌ ಹೊಲಕ್ಕೆ ಡಿಸಿ ಭೇಟಿ-ಪರಿಶೀಲನೆ

Advertisement

Udayavani is now on Telegram. Click here to join our channel and stay updated with the latest news.

Next