Advertisement

ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

03:33 PM Feb 14, 2021 | Team Udayavani |

ಶಹಾಬಾದ: ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಶನಿವಾರ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮುಖಾಂತರ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.

Advertisement

ಕಾಂಗ್ರೆಸ್‌ ಮುಖಂಡ ವಿಜಯಕುಮಾರ ರಾಮಕೃಷ್ಣ ಮಾತನಾಡಿ, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿ ಸಿ ದೆಹಲಿ ಗಡಿ ಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾನೂನುಗಳಿಂದ ಎಂಎಸ್ಪಿ ಸ್ಥಗಿತವಾಗುತ್ತದೆ. ಕೃಷಿ ಮಾರುಕಟ್ಟೆಗಳು ನಾಶವಾಗುತ್ತವೆ. ಕಾಯ್ದೆಗಳನ್ನು ವಾಪಸ್‌ ಪಡೆಯದಿದ್ದರೆ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ರಶೀದ್‌ ಮರ್ಚಂಟ್‌, ಉಪಾಧ್ಯಕ್ಷ ವಿಜಯಕುಮಾರ ಮುಟ್ಟತ್ತಿ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ, ಮೃತ್ಯುಂಜಯ ಹಿರೇಮಠ, ಹಾಷಮ್‌ಖಾನ್‌, ಅಜಿತ್‌ ಪಾಟೀಲ, ಶರಣಗೌಡ ಪಾಟೀಲ ಗೋಳಾ, ಸುಭಾಷ ಪವಾರ, ಸುಭಾಷ ಪಂಚಾಳ, ಮಾಣಿಕ್‌ಗೌಡ, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ಸಾಹೇಬಗೌಡ
ಬೋಗುಂಡಿ, ರಾಜೇಶ ಯನಗುಂಟಿಕರ್‌, ಅನ್ವರ್‌ ಪಾಶಾ, ಕುಮಾರ ಚವ್ಹಾಣ, ಡಾ| ಅಹ್ಮದ್‌ ಪಟೇಲ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಕಿರಣಕುಮಾರ ಚವ್ಹಾಣ, ದೇವೇಂದ್ರ ಕಾರೊಳ್ಳಿ, ಸ್ನೇಹಲ್‌ ಜಾಯಿ, ಶರಣಗೌಡ ಪಾಟೀಲ ದಳಪತಿ, ಸುರೇಶ ನಾಯಕ, ನಾಗಣ್ಣ
ರಾಂಪೂರೆ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಓದಿ :ಶಿಥಿಲಾವಸ್ಥೆಯ ಕಚೇರಿಯನ್ನು ಸ್ವತಃ ಸ್ವಚ್ಚಗೊಳಿಸಿದ ಕಲಬುರಗಿ ತಹಶೀಲ್ದಾರ್

Advertisement

Udayavani is now on Telegram. Click here to join our channel and stay updated with the latest news.

Next