ಧಾರವಾಡ: ಹಿರಿಯ ಸಾಹಿತಿ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆಯ ಚಾರ್ಜ್ ಶೀಟ್ ಕೊನೆಗೂ ಹತ್ಯೆಯಾದ ನಾಲ್ಕು ವರ್ಷಕ್ಕೆ ಎಸ್ಐಟಿ ತನಿಖಾಧಿಕಾರಿಗಳು ಇಲ್ಲಿನ 3ನೇ ಹೆಚ್ಚುವರಿ ಹಿರಿಯ ದಿವಾಣಿ ಹಾಗೂ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಶನಿವಾರ ಸಲ್ಲಿಸಿದ್ದಾರೆ.
2015 ರ ಆಗಸ್ಟ 30 ರಂದು ದುಷ್ಕರ್ಮಿಗಳು ಕಲಬುರ್ಗಿ ಅವರನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಆಗಸ್ಟ 31 ರಂದು ರಾಜ್ಯ ಸರ್ಕಾರ ಈ ಹತ್ಯೆಯ ತನಿಖೆಯನ್ನು ಸಿಐಡಿ ತಂಡಕ್ಕೆ ನೇಮಿಸುತ್ತು. ಆದರೆ ಸಿಐಡಿ ತಂಡದಿಂದ ತನಿಖೆ ಚುರುಕು ಆಗದ ಹಿನ್ನೆಲೆ, ಕಲಬುರ್ಗಿ ಪತ್ನಿ ಉಮಾದೇವಿ ಸುಪ್ರಿಂ ಕೊರ್ಟ ಮೋರೆ ಹೋಗಿ ಹತ್ಯೆಯ ತನಿಖೆಯನ್ನ ಎಸ್ಐಟಿಗೆ ನೀಡಬೇಕು ಎಂದು ಮನವಿ ಮಾಡಿತ್ತು. ನಂತರ ಗೌರಿ ಲಂಕೇಶ ಹತ್ಯೆಯ ಎಸ್ಐಟಿ ತಂಡಕ್ಕೆನೇ ಕಲಬುರ್ಗಿ ಹತ್ಯೆಯ ತನಿಖೆಯ ಜವಾಬ್ದಾರಿಯನ್ನ ಕೂಡಾ ನೀಡಲಾಗಿತ್ತು.
ಡಿಸಿಪಿ ಎಂ.ಎನ್. ಅನುಚೇತ್ ನೇತೃತ್ವದಲ್ಲಿ ಎಸ್ಐಟಿ ತನಿಖೆ ಮಾಡಿತ್ತು.
ಗೌರಿ ಲಂಕೇಶ , ಮಹಾರಾಷ್ಟ್ರದ ದಾಬೊಲ್ಕರ್, ಪಾನ್ಸಾರೆ ಹತ್ಯೆಯ ಆರೋಪದಲ್ಲಿ ಬಂಧನಕ್ಕೆ ಒಳಗಾದ ಹಂತಕರನ್ನ ಕೂಡಾ ವಿಚಾರಣೆ ಮಾಡಿತ್ತು.