Advertisement
ಜಿಲ್ಲಾಡಳಿತದಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧ ಹಾಗೂ ಬದ್ಧವಾಗಿದೆ ಎಂದರು.
Related Articles
Advertisement
ಡಾ| ನಂಜುಂಡಪ್ಪ ವರದಿ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಯಾದಗಿರಿ ಅತಿ ಹಿಂದುಳಿದ ಭಾಗಗಳಲ್ಲಿ ಒಂದಾಗಿದೆ. ಆರ್ಥಿಕಸಮೀಕ್ಷೆಗಳಲ್ಲಿ ಯಾದಗಿರಿಯ ಸ್ಥಾನ 29, 30ನೇ ಸ್ಥಾನದಲ್ಲಿದೆ. ಇದನ್ನ ಉತ್ತಮ ಪಡಿಸಬೇಕಿದೆ. ಐಐಟಿ, ಐಐಎಸ್ಸಿ ಯಂತಹ ಉತ್ತಮ ಶಿಕ್ಷಣಸಂಸ್ಥೆಗಳು, ಕೈಗಾರಿಕೋದ್ಯಮಗಳನ್ನು ಈ ಭಾಗಕ್ಕೆ ತರಬೇಕಿದೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ ಕಲಂ 371ಎ ಪ್ರಕಾರ ಕಾರ್ಯಕ್ರಮ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳು ಪ್ರತ್ಯೇಕ ಸಚಿವಾಲಯ ಸ್ಥಾಪನೆ ಘೋಷಣೆಮಾಡಿದ್ದಾರೆ. ಈ ಭಾಗದ ಸರ್ವತೋಮುಖ ಬೆಳವಣಿಗೆಗೆ ಸುಮಾರು 7000 ಕೋಟಿ ರೂ. ಅಗತ್ಯವಿದ್ದು, ಹಂತ ಹಂತವಾಗಿ ನಮ್ಮ ಮುಖ್ಯಮಂತ್ರಿಗಳು ಕಾರ್ಯಕ್ರಮ ರೂಪಿಸುತ್ತಿದ್ದಾರೆ ಎಂದರು.
ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷಬಸನಗೌಡ ಪಾಟೀಲ ಯಡಿಯಾಪುರ, ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್., ಜಿಪಂ ಸಿಇಒ ಶಿಲ್ಪಾ ಶರ್ಮಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.