Advertisement

Kalasa: ತಡವಾಗಿ ಘೋಷಣೆಯಾದ ರಜೆ… ಶಾಲೆಗೆ ಹೋಗಿ ವಾಪಸ್ಸಾದ ವಿದ್ಯಾರ್ಥಿಗಳು

10:01 AM Jun 28, 2024 | Team Udayavani |

ಮೂಡಿಗೆರೆ: ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಪರಿಣಾಮ ಶುಕ್ರವಾರ ಕಳಸ ತಾಲೂಕಿನ ಶಾಲೆಗಳಿಗೆ ತಹಸೀಲ್ದಾರ್ ರಜೆ ಘೋಷಣೆ ಮಾಡಿದ್ದಾರೆ.

Advertisement

ಬೆಳಗ್ಗಿನ ವರೆಗೂ ರಜೆಯ ಯಾವುದೇ ಸೂಚನೆ ಇರದ ಕಾರಣ ಮಕ್ಕಳು ಬೆಳಿಗ್ಗೆ ಶಾಲೆಗಳಿಗೆ ತೆರಳಿದ್ದಾರೆ ಈ ವೇಳೆ ತಹಸೀಲ್ದಾರ್ ರಜೆ ಘೋಷಣೆ ಮಾಡಿದ್ದರಿಂದ ಮಕ್ಕಳು ಶಾಲೆಯಿಂದ ವಾಪಸ್ಸಾಗಿದ್ದಾರೆ.

ಗುರುವಾರ ರಾತ್ರಿ ಕಳಸ ತಾಲೂಕಿನಾದ್ಯಂತ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: Hunsur: ಕೊಡಗು, ನಾಗರಹೊಳೆಯಲ್ಲಿ ಭಾರೀ ಮಳೆಗೆ ತುಂಬಿದ ಹನಗೋಡು ಅಣೆಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next