Advertisement

ಹೆಣ್ಣು ಮಗು ರಕ್ಷಿಸಿ, ಓದಿಸಿ: ಹೊಸಮನಿ

05:37 PM Jan 31, 2020 | Naveen |

ಕಲಕೇರಿ: ಹೆಣ್ಣು ಮಕ್ಕಳ ರಕ್ಷಣೆ, ಹೆಣ್ಣು ಮಕ್ಕಳ ಶಿಕ್ಷಣ, ಲಿಂಗಾನುಪಾತ, ಮಹಿಳಾ ಸಬಲೀಕರಣ ಮತ್ತು ಹೆಣ್ಣು ಭ್ರೂಣಹತ್ಯೆ ತಡೆಗಟ್ಟುವುದರ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಸರಕಾರ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಇದರ ಯಶಸ್ಸಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಸಿಂದಗಿಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಜಿ ಹೊಸಮನಿ ಹೇಳಿದರು.

Advertisement

ಗ್ರಾಮದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಪೋಷಣ ಅಭಿಯಾನ ಮಾಸಾಚರಣೆ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಅರಿವು ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಯೋಜನೆಗಳ ಸದುಪಯೋಗವನ್ನು ಪ್ರತಿಯೊಬ್ಬ ಹೆಣ್ಣು ಮಕ್ಕಳು ಪಡೆದುಕೊಳ್ಳಬೇಕು. ಮುಖ್ಯವಾಗಿ ಹೆಣ್ಣು, ಗಂಡೆಂಬ ಲಿಂಗ ತಾರತಮ್ಯ ಮಾಡಬಾರದು ಎಂದರು.

ಕಲಕೇರಿ ತಾಪಂಸದಸ್ಯ ಲಕ್ಕಪ್ಪ ಬಡಿಗೇರ ಮಾತನಾಡಿ, ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿ ತೂಕದ ತಾಳ್ಮೆಯಿರುವ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು. ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಪೊಲೀಸ್‌ ಠಾಣೆ ಮುಖ್ಯ ಬಜಾರ್‌, ಅಗಸಿ ಮಾರ್ಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಪ್ರೌಢಶಾಲೆ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿನಿಯರು ಕುಂಭದೊಂದಿಗೆ ಜಾಗೃತಿ ಜಾಥಾ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಪಂನ ಪರಶುರಾಮ ಬೇಡರ, ಉಪಾಧ್ಯಕ್ಷ ಈರಣ್ಣ ಕಡಕೋಳ, ಮೈಮೂದ ಕೆಂಬಾವಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಪ್ರಭಾಕರ್‌ ತೆರದಾಳ, ಹಿರಿಯ ಆರೋಗ್ಯ ಸಹಾಯಕಿ, ಸಾವಿತ್ರಿ ಡೋಣಿಯವರ್‌, ಎಸ್‌. ಎಸ್‌ ಜಾನಕಿ, ಬಿ.ಜಿ. ಹಿರೇಮಠ, ಶಿವಾನಂದ ಮಠ, ಮಮತಾಜ್‌ ಕೆಂಬಾವಿ ಸೇರಿದಂತೆ ಬಸವೇಶ್ವರ ಪ್ರೌಢಶಾಲೆ ಸಿಬ್ಬಂದಿಗಳು, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ಕಲಕೇರಿ ಮತ್ತು ಆಸ್ಕಿ ವಲಯದ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next