ಕಲಬುರಗಿ: ಕೋವಿಡ್ ಸೋಂಕು ಪತ್ತೆಯಾದ ಹೊಸ 19 ಪ್ರದೇಶಗಳನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಆ ಪ್ರದೇಶಗಳಿಂದ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್- ಇನ್ಸಿಡೆಂಟ್ ಕಮಾಂಡರ್‌ಗಳನ್ನು ನೇಮಕ ಮಾಡಲಾಗಿದೆ.
ಆಳಂದ ತಾಲೂಕಿನ ನರೋಣಾ ಗ್ರಾಮಕ್ಕೆ ಬಿಇಒ ಕೆ.ಈಶ್ವರಪ್ಪ, ಜಿರೋಳ್ಳಿ ತಾಂಡಾಕ್ಕೆ ಸರ್ವೇ ಇಲಾಖೆಯ ಸಹಾಯಕ ನಿರ್ದೇಶಕ ಶಿವಕಾಂತ ಜಿಡಗೇಕರ್, ಅಫಜಲಪುರ ತಾಲೂಕಿನ ರೇವೂರ್(ಬಿ) ಗ್ರಾಮಕ್ಕೆ ಅಲ್ಪಸಂಖ್ಯಾತರ ತಾಲೂಕು ವಿಸ್ತೀರ್ಣಾಧಿಕಾರಿ ವಾಜೀದ್
ಮುಖೇನ್, ಕಲಬುರಗಿ ನಗರದ ನ್ಯೂ ಬ್ಯಾಂಕ್ ಕಾಲೋನಿಗೆ ಡಿಡಿಪಿಐ ಶಾಂತಗೌಡ ಪಾಟೀಲ ಅವರನ್ನು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಆಗಿ ನೇಮಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕಮಲಾಪುರ ತಾಲೂಕಿನ ವಿ.ಕೆ. ಸಲಗರ ಗ್ರಾಮಕ್ಕೆ ಲೋಕೋಪಯೋಗಿ ಇಲಾಖೆಯ ಆಡಿಟ್ ಆಫೀಸರ್ ವಿಕಾಸ್, ಸೇಡಂನ ಮಿಸ್ಕಿನಪೂರ ಪ್ರದೇಶಕ್ಕೆ ಬಿಇಒ ಮಹಾದೇವ ರೆಡ್ಡಿ, ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿ ಗ್ರಾಮಕ್ಕೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದುಗೌಡ, ಚಿತ್ತಾಪುರ ಸ್ಟೇಷನ್ ತಾಂಡಾಕ್ಕೆ ಪುರಸಭೆ ಮುಖ್ಯಾಧಿ ಕಾರಿ ಮನೋಜ್ ಕುಮಾರ್, ಅಣ್ಣಿಗೇರಿ ತಾಂಡಾಕ್ಕೆ ವಲಯ ಅರಣ್ಯಾಧಿಕಾರಿ ವಿಜಯಕುಮಾರ್, ಲಾಡ್ಲಾಪುರ ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗಿರೀಶ್, ಕಮರವಾಡಿ ತಾಂಡಾಕ್ಕೆ ಬಿಇಒ ಶಂಕ್ರೆಮ್ಮ ಢವಳಗಿ, ದೇವಪುರ ಗ್ರಾಮಕ್ಕೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ್ ನಾಯ್ಕೋಡಿ ನೇಮಕ ಮಾಡಲಾಗಿದೆ.
ಯಾಗಾಪುರ ತಾಂಡಾಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಜು ರಾಠೊಡ್, ವಚ್ಚಾ ಗ್ರಾಮಕ್ಕೆ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಬಸಲಿಂಗಪ್ಪ ಡಿಗ್ಗಿ, ಕಾಳಗಿಯ ಮಳಗಾ(ಕೆ) ಗ್ರಾಮಕ್ಕೆ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿವೇಕಾನಂದ, ಕಲ್ಲಹಿಪ್ಪರಗಾಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮುಸ್ತಫಾ ಅಹ್ಮದ್, ಕಾಳಗಿಗೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವೆಂಕಟೇಶ್, ಮುಕ್ರಂಬಾ ಗ್ರಾಮಕ್ಕೆ ಜಿಪಂ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಂದ್ರಕುಮಾರ್ ಹಾಗೂ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮಕ್ಕೆ ಚಿಂಚೋಳಿ ರೇಷ್ಮೆ ಇಲಾಖೆಯ ವಿಸ್ತೀರ್ಣಾಧಿಕಾರಿ ಮಹ್ಮದ್ ಇಸ್ಮಾಯಿಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.