Advertisement

ಅಬಕಾರಿ ದಾಳಿ: 15 ಲೀ. ಕಳ್ಳ ಭಟ್ಟಿ ಜಪ್ತಿ- ಪ್ರಕರಣ ದಾಖಲು

01:08 PM Apr 24, 2020 | Naveen |

ಕಲಬುರಗಿ: ಕೋವಿಡ್ ವೈರಸ್‌ ಹರಡದಂತೆ ಮುಂಜಾಗ್ರತೆಗಾಗಿ ಜಿಲ್ಲೆಯಾದ್ಯಂತ ಮದ್ಯ ಉತ್ಪಾದನೆ, ಸಾಗಾಣಿಕೆ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

Advertisement

ಕಲಬುರಗಿ ವಿಭಾಗದ ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಸಣ್ಣೂರ ತಾಂಡಾದ ಹೊರಗಡೆ ವಿವಿಧ ಹೊಲಗಳಲ್ಲಿ ದಾಳಿ ನಡೆಸಿ ಒಟ್ಟು 350 ಲೀ ಬೆಲ್ಲದ ಕೊಳೆ ಹಾಗೂ 15 ಲೀ. ಕಳ್ಳಭಟ್ಟಿ ಜಪ್ತಿಪಡಿಸಿಕೊಂಡು 3 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ಆದೇಶ ಹಾಗೂ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಭಾಗದ ಅಬಕಾರಿ ಉಪ ಅಧಿಧೀಕ್ಷಕ ಮಹ್ಮದ್‌ ಇಸ್ಮಾಯಿಲ್‌ ಇನಾಮದಾರ ನೇತೃತ್ವದಲ್ಲಿ ಡಿಸಿಇಐಬಿ ವಲಯ ನಂ.1ರ ಅಬಕಾರಿ ನಿರೀಕ್ಷಕ ಹಾಗೂ ಉಪ ವಿಭಾಗದ ಸಿಬ್ಬಂದಿಯೊಂದಿಗೆ ದಾಳಿ ನಡೆಸಲಾಗಿದೆ.

ಕಲಬುರಗಿ ಉಪವಿಭಾಗದ ಅಬಕಾರಿ ಉಪ ನಿರೀಕ್ಷಕ ಸಂತೋಷ ಕುಮಾರ ಹಾಗೂ ಕಲಬುರಗಿ ವಲಯ ನಂ.1ರ ಅಬಕಾರಿ ಉಪ ನಿರೀಕ್ಷಕ ದಾವಲಸಾಬ ಹಾಗೂ ಡಿಸಿಇಐಬಿ ಅಬಕಾರಿ ನಿರೀಕ್ಷಕ ಪಂಡಿತ ಅವರು ತಲಾ ಒಂದು ಸೇರಿದಂತೆ ಒಟ್ಟು ಮೂರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಜಪ್ತಿ ಮಾಡಲಾದ ಒಟ್ಟು ಮದ್ಯದ ಅಂದಾಜು ಮೌಲ್ಯ 8000 ರೂ. ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next