Advertisement

ಶಾರ್ಟ್ ಸರ್ಕಿಟ್‌: ಕಲಬುರಗಿ ಮಹಾನಗರ ಪಾಲಿಕೆ ಹಳೆ ಕಚೇರಿಗೆ ಬೆಂಕಿ, ಮಹತ್ವದ ದಾಖಲೆಗಳು ಭಸ್ಮ

10:32 PM Apr 01, 2023 | Team Udayavani |

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ ಹಳೆ ಕಟ್ಟಡಕ್ಕೆ ಶಾರ್ಟ್ ಸರ್ಕಿಟ್‌ನಿಂದ ಶನಿವಾರ ಬೆಂಕಿ ಬಿದ್ದಿದ್ದು, ಲೆಕ್ಕಪತ್ರ ಶಾಖೆಯಲ್ಲಿದ್ದ ಮಹತ್ವದ ದಾಖಲೆಗಳು ಭಸ್ಮವಾಗಿವೆ ಎಂದು ಗೊತ್ತಾಗಿದೆ.

Advertisement

ಹಳೆ ಕಟ್ಟಡದ ಮೊದಲ ಮಹಡಿಯನ್ನು ಕೆಲ ವರ್ಷಗಳಿಂದ ಬಳಸುತ್ತಿರಲಿಲ್ಲ. ಅಲ್ಲಿ ಲೆಕ್ಕಪತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇರಿಸಲಾಗಿತ್ತು. ಈ ಕಟ್ಟಡವನ್ನು ವಿಧಾನಸಭೆ ಚುನಾವಣೆ ಪ್ರಯುಕ್ತ ಕಲಬುರಗಿ ದಕ್ಷಿಣ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕೊಠಡಿಗೆ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು. ಬೆಂಕಿ ಹೊತ್ತಿಕೊಂಡಿದ್ದರಿಂದ ಕೊಠಡಿಯಲ್ಲಿದ್ದ ಪೀಠೋಪಕರಣಗಳು, ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತ್ರ ಬರೆದಿದ್ದ ಅಧಿಕಾರಿ: ಚುನಾವಣಾಧಿಕಾರಿಗಳ ಕಚೇರಿ ಇಲ್ಲಿ ಆರಂಭಿಸುವ ಬಗ್ಗೆ ಪ್ರಸ್ತಾವ ಬಂದಾಗ ಈ ಕಟ್ಟಡ ಹಳೆಯದಾಗಿದೆ. ಬಳಕೆಗೆ ಯೋಗ್ಯವಿಲ್ಲ ಎಂದು ಪಾಲಿಕೆಯ ಎಂಜಿನಿಯರಿಂಗ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಪತ್ರ ಬರೆದಿದ್ದರು. ಅದನ್ನು ಮೀರಿಯೂ ಇಲ್ಲಿ ಚುನಾವಣಾಧಿಕಾರಿಗಳ ಕಚೇರಿ ಆರಂಭಿಸಲು ಜಿಲ್ಲಾಡಳಿತ ಮುಂದಾಗಿತ್ತು. ಅಷ್ಟರಲ್ಲಿ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡಿದೆ.

ಬೆಂಕಿ ಹೊತ್ತಿಕೊಂಡ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ನಂದಿಸಿದರು.
ಮಹಾನಗರ ಪಾಲಿಕೆಯ ಹೊಸ ಕಟ್ಟಡ ನಿರ್ಮಾಣವಾದ ಬಳಿಕ ಹಳೆಯ ಕಟ್ಟಡದಲ್ಲಿದ್ದ ಬಹುತೇಕ ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ. ಅಲ್ಲದೇ, ಹಳೆ ಕಟ್ಟಡ 30 ವರ್ಷಕ್ಕೂ ಹಳೆಯದಾಗಿದ್ದರಿಂದ ಇದನ್ನು ಉಪಯೋಗಿಸುತ್ತಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಮೂಡಲಗಿ: ಸಪ್ತಪದಿ ತುಳಿದ ಹತ್ತೆ ದಿನದಲ್ಲಿ ನವ ದಂಪತಿ ಅಪಘಾತದಲ್ಲಿ ಮೃತ್ಯು

Advertisement
Advertisement

Udayavani is now on Telegram. Click here to join our channel and stay updated with the latest news.

Next