Advertisement

ಶರಣಬಸವ ವಿಶ್ವವಿದ್ಯಾಲಯದಿಂದ ಮತ್ತೊಂದು ಮೈಲಿಗಲ್ಲು!

12:48 PM May 17, 2019 | Naveen |

ಕಲಬುರಗಿ: ಪ್ರಾರಂಭದ ವರ್ಷದೊಳಗೆ ದಾಖಲೆ ಪ್ರವೇಶಾತಿ ಮೂಲಕ ತನ್ನ ಪ್ರೌಢಿಮೆ ಹಾಗೂ ಘನತೆ ಹೆಚ್ಚಿಸಿಕೊಂಡಿರುವ ಇಲ್ಲಿನ ಶರಣಬಸವ ವಿಶ್ವವಿದ್ಯಾಲಯ ಮತ್ತೂಂದು ಮೈಲಿಗಲ್ಲು ಸಾಧಿಸಿದೆ.

Advertisement

ವಿವಿಯ ಅಧೀನದಲ್ಲಿ ನಡೆಯುತ್ತಿರುವ ಇಂಜಿನಿಯರಿಂಗ್‌, ಮಾಸ್ಟರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಶನ್‌ ಮತ್ತು ಮಾಸ್ಟರ್‌ ಆಫ್‌ ಬಿಜಿನೆಸ್‌ ಅಡ್ಮಿನಿಸ್ಟ್ರೇಷನ್‌ನ ಎಲ್ಲ ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ಎಐಸಿಟಿಇಯಿಂದ ಮಾನ್ಯತೆ ಪಡೆಯಲು ಯಶಸ್ವಿಯಾಗಿದ್ದು, ವಿಶ್ವವಿದ್ಯಾಲಯವು ಸಲ್ಲಿಸಿದ ಪ್ರಸ್ತಾವನೆಗೆ ಎಐಸಿಟಿಇ ಬುಧವಾರ ಅನುಮೋದನೆ ನೀಡಿದೆ.

ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ| ಶರಣಬಸವಪ್ಪ ಅಪ್ಪ ಅವರು, ಶರಣಬಸವ ವಿಶ್ವವಿದ್ಯಾಲಯದ ಎಲ್ಲ ಇಂಜಿನಿಯರಿಂಗ್‌, ಎಂಸಿಎ ಮತ್ತು ಎಂಬಿಎನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಿಗೆ ಎಐಸಿಟಿಇಯಿಂದ ಮಾನ್ಯತೆ ಪಡೆಯಲು ಹಗಲಿರುಳು ಶ್ರಮಿಸಿ, ಎಐಸಿಟಿಇಗೆ ಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ನಿಗದಿತ ಸಮಯದಲ್ಲಿ ಒದಗಿಸಿ ಮಾನ್ಯತೆ ದೊರಕಿಸಲು ಕಾರಣರಾಗಿರುವ ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಕುಲಪತಿ ಡಾ| ನಿರಂಜನ ನಿಷ್ಟಿ ಅವರಿಗೆ ಅಭಿನಂದಿಸಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮಾನ್ಯತೆ ಪಡೆಯಲು ಅವಿರತವಾಗಿ ಶ್ರಮಿಸಿ ಯಶಸ್ವಿಯಾಗಿರುವ ಇಂಜಿನಿಯರಿಂಗ್‌, ಎಂಬಿಎ ಮತ್ತು ಎಂಸಿಎ ವಿಭಾಗದ ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

ಎಐಸಿಟಿಇಯಿಂದ ಮಾನ್ಯತೆ ಪಡೆಯಲು ಪ್ರಮುಖ ಪಾತ್ರ ವಹಿಸಿದ ವಿಶ್ವವಿದ್ಯಾಲಯದ ಕುಲಸಚಿವ ಡಾ| ಅನಿಲಕುಮಾರ ಬಿಡವೆ ಗುರುವಾರ ಮಾತನಾಡಿ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 1678 ವಿದ್ಯಾರ್ಥಿಗಳಿಗೆ ಪ್ರವೇಶ ಪಡೆದುಕೊಳ್ಳಲು ಅನುಮತಿ ನೀಡಿದೆ. ಇಂಜಿನಿಯರಿಂಗ್‌ ಸ್ನಾತಕೋತ್ತರ ಬಿ. ಆರ್ಕಿಟೆಕ್ಟರ್‌, ಎಂಸಿಎ ಮತ್ತು ಎಂಬಿಎ ಪದವಿ ಒಳಗೊಂಡು 2019-20 ಶೈಕ್ಷಣಿಕ ಸಾಲಿಗಾಗಿ ಒಟ್ಟು 1180 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿಯಲ್ಲಿ ಸೇರಿಸಿಕೊಳ್ಳಲು ಅನುಮೋದನೆ ನೀಡಿದೆ. 498 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಗೆ ಪ್ರವೇಶ ನೀಡಲು ಅನುಮೋದನೆ ನೀಡಿದೆ. ವಿಶೇಷವಾಗಿ ಮಹಿಳೆಯರಿಗಾಗಿ ಸ್ನಾತಕ ಮತ್ತು ಸ್ನಾತಕೋತ್ತರ ಇಂಜಿನಿಯರಿಂಗ್‌ ಮತ್ತು ಮ್ಯಾನೆಜಮೆಂಟ್ ವಿಭಾಗದಲ್ಲಿ ಶಿಕ್ಷಣ ನೀಡುವ ದೇಶದ ಕೆಲವೇ ಕೆಲವು ವಿಶ್ವವಿದ್ಯಾಲಯಗಳಲ್ಲಿ ಶರಣಬಸವ ವಿಶ್ವವಿದ್ಯಾಲಯವು ಒಂದಾಗಿದೆ ಎಂದು ತಿಳಿಸಿದ್ದಾರೆ.

ವಿಶ್ವವಿದ್ಯಾಲಯವು ಇಂಜಿನಿಯರಿಂಗ್‌ ಸ್ನಾತಕ ಪದವಿಯ ಕೋರ್ಸ್‌ನ ಸಹ ಶಿಕ್ಷಣದ ಐದು ವಿಭಾಗಗಳಲ್ಲಿ, ಪ್ರತ್ಯೇಕವಾಗಿ ಮಹಿಳೆಯರಿಗಾಗಿಯೆ ಇರುವ ಐದು ವಿಭಾಗಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ಇಂಜಿನಿಯರಿಂಗ್‌ ಕೋರ್ಸನ ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಸೈನ್ಸ್‌, ಸಿವಿಲ್ ಇಂಜಿನಿಯರಿಂಗ್‌, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಕೋರ್ಸ್‌ಗಳು ಸಹ ಶಿಕ್ಷಣದ ಅಡಿಯಲ್ಲಿ ಮತ್ತು ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಸೈನ್ಸ್‌, ಇನರಮೇಶನ್‌ ಸೈನ್ಸ್‌, ಎಲೆಕ್ಟ್ರಿಕಲ್, ಸಿವಿಲ್ ಇಂಜಿನಿಯರಿಂಗ್‌ ಕೋರ್ಸ್‌ನಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಪ್ರವೇಶಗಳು ಆರಂಭವಾಗಿವೆ. ಇದರ ಜೊತೆಗೆ ವಿವಿಯು ಬಿ. ಆರ್ಕಿಟೆಕ್ಚರ್‌ ಕೋರ್ಸ್‌ಗಾಗಿ ಸಹ ಶಿಕ್ಷಣದ ವಿಭಾಗದಲ್ಲಿ ಪ್ರವೇಶಗಳು ಆರಂಭಿಸಿದೆ.

Advertisement

ವಿಶ್ವವಿದ್ಯಾಲಯವು ಕಂಪ್ಯೂಟರ್‌ ಸೈನ್ಸ್‌, ಕಂಪ್ಯೂಟರ್‌ ನೆಟವರ್ಕಿಂಗ್‌, ಡಿಜಿಟಲ್ ಎಲೆಕ್ಟ್ರಾನಿಕ್ಸ್‌, ವಿಎಲ್ಎಸ್‌ಐ ಮತ್ತು ಎಂಬಡೆಡ್‌ ಸಿಸ್ಟಮ್‌, ಸ್ಟ್ರಕ್ಚ್ರಲ್ ಇಂಜಿನಿಯರಿಂಗ್‌, ನ್ಯಾನೋ ಟೆಕ್ನಾಲಜಿ, ಮಶೀನ್‌ ಡಿಜೈನ್‌ ಸೇರಿದಂತೆ ಏಳು ಎಂ.ಟೆಕ್‌ ಕೋರ್ಸ್‌ಗಳಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ ನೀಡುತ್ತಿದೆ. ವಿಶ್ವವಿದ್ಯಾಲಯವು ಇತರೆ ಎರಡು ಕೋರ್ಸ್‌ಗಳಾದ ಡಿಜಿಟಲ್ ಕಮ್ಯೂನಿಕೇಶನ್‌ ಮತ್ತು ನೆಟವರ್ಕಿಂಗ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ಇಂಜಿನಿಯರಿಂಗ್‌ ಶಿಕ್ಷಣವು ನೀಡುತ್ತಿದೆ ಎಂದು ವಿವರಣೆ ನೀಡಿದ್ದಾರೆ.

ಬಹು ಮುಖ್ಯವಾಗಿ ಎಐಸಿಟಿಇಯು ಎರಡು ವರ್ಷಗಳ ಎಂಬಿಎ ಪದವಿಗೆ ಅದರಲ್ಲಿಯೂ ಒಂದು ವಿಶೇಷವಾಗಿ ಮಹಿಳೆಯರಿಗೆ ಪ್ರವೇಶ ನೀಡಲು, ಅದರಂತೆ ಸಹ ಶಿಕ್ಷಣದ ನೆರಳಿನಲ್ಲಿ ಎಂಸಿಎ, ಎಂಬಿಎನಲ್ಲಿ ಹಾಸ್ಪಿಟಲ್ ಅಡ್ಮಿನಿಷ್ಟ್ರೇಸನ್‌ ಹಾಗೂ ಟೂರಿಜ್‌ಂ ಮತ್ತು ಟ್ರಾವೆಲ್ ಮ್ಯಾನೆಜ್‌ಮೆಂಟ್‌ನಲ್ಲಿ ಶಿಕ್ಷಣ ನೀಡಲು ಕೋರ್ಸ್‌ಗೆ ಅನುಮತಿ ನೀಡಿದೆ ಎಂದಿದ್ದಾರೆ.

ಶರಣಬಸವ ವಿಶ್ವವಿದ್ಯಾಲಯವು ತನ್ನ ಎಲ್ಲ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಕೋರ್ಸ್‌ಗಳಿಗೆ ಮಾನ್ಯತೆ ಪಡೆದಿರುವ ರಾಜ್ಯದ ಕೆಲವೇ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಮಾನ್ಯತೆ ಪಡೆಯುವುದಕ್ಕಾಗಿ ವಿವಿಯು ಸಲ್ಲಿಸಿದ ಪ್ರಸ್ತಾವನೆಯಲ್ಲಿ ಒಂದೇ ಒಂದು ಸೀಟನ್ನು ಎಐಸಿಟಿಇಯು ಕಡಿಮೆ ಮಾಡಿಲ್ಲ ಇದು ಪ್ರಮುಖ ಅಂಶವಾಗಿದೆ.
•ಡಾ| ಶರಣಬಸವಪ್ಪ ಅಪ್ಪ
ಕುಲಾಧಿಪತಿ, ಶರಣಬಸವ ವಿವಿ

Advertisement

Udayavani is now on Telegram. Click here to join our channel and stay updated with the latest news.

Next