Advertisement

ಸಿಯುಕೆ ಕುಲಪತಿಯಾಗಿ ಡಾ.ಬಿ. ಸತ್ಯನಾರಾಯಣ ‌ನೇಮಕ

04:05 PM Jul 23, 2021 | Team Udayavani |

ಕಲಬುರ್ಗಿ :  ರಾಜ್ಯದ ಏಕೈಕ ಇಲ್ಲಿ‌ನ  ಕರ್ನಾಟಕ ‌ಕೇಂದ್ರೀಯ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಹೈದರಾಬಾದ್ ನ ಉಸ್ಮಾನಿಯಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬುಟ್ಟಾ ಸತ್ಯನಾರಾಯಣ ಅವರನ್ನು ನೇಮಕ ಮಾಡಲಾಗಿದೆ.

Advertisement

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೇಮಕ ಮಾಡಿದ್ದು, ಈ ಕುರಿತು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯದ ಅಧೀನ ಕಾರ್ಯದರ್ಶಿ ಸಿ.ಪಿ ರತ್ನಾಕರನ್ ಅಧಿಸೂಚನೆ ಹೊರಡಿಸಿದ್ದಾರೆ.

ಗುರುವಾರ ನೇಮಕ ಆದೇಶ ಹೊರಬಿದ್ದಿದ್ದು, ಸೋಮವಾರ ಕುಲಪತಿಗಳಾಗಿ ಪ್ರೊ. ಬಿ. ಸತ್ಯನಾರಾಯಣ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ಹೀಗೆ ಮಾಡಿದರೂ ಕೂಡ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಬದಲಾಯಿಸುವುದಕ್ಕೆ ಸಾಧ್ಯ.!

ವಿವಿ ಕುಲಪತಿಗಳಾಗಿದ್ದ ಪ್ರೊ. ಎಚ್. ಎಂ. ಮಹೇಶ್ವರಯ್ಯ ಕಳೆದ 2020ರ ಏಪ್ರಿಲ್ ತಿಂಗಳಲ್ಲೇ ನಿವೃತ್ತಿ ಯಾಗಿದ್ದರು. ಕೊವಿಡ್ ಹಿನ್ನೆಲೆಯಲ್ಲಿ ಆರು ತಿಂಗಳು ಅವಧಿ ಆರು ತಿಂಗಳ ಕಾಲ ಅವಧಿ ವಿಸ್ತರಿಸಲಾಗಿತ್ತು. ತದನಂತರ ಇಲ್ಲಿಯವರೆಗೆ ಖಾಲಿ ಇರುವ ಕುಲಪತಿ ಸ್ಥಾನಕ್ಕೆ ಈ ಬಿ.‌ಸತ್ಯನಾರಾಯಣ ನೇಮಕವಾಗಿದ್ದಾರೆ. ಒಟ್ಟಾರೆ 14 ತಿಂಗಳ ನಂತರ  ಪೂರ್ಣ ಪ್ರಮಾಣದ ಕುಲಪತಿ ನೇಮಕವಾದಂತಾಗಿದೆ.

Advertisement

ಕಳೆದ ಜುಲೈ 16 ರ ಉದಯವಾಣಿ ಯಲ್ಲಿ ವಾರದೊಳಗೆ ಸಿಯುಕೆಗೆ ಪ್ರೊ ಬಿ. ಸತ್ಯನಾರಾಯಣ ಕುಲಪತಿಗಳಾಗಿ ನೇಮಕವಾಗಲಿದ್ದಾರೆ ಎಂದು ವಿಶೇಷ ವರದಿ ಮಾಡಲಾಗಿತ್ತು.‌ ವರದಿಯಂತೆ ವಾರದೊಳಗೆ ನೇಮಕವಾಗಿದೆ.

ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪರಿಸರ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಪ್ರೊ.ಸತ್ಯನಾರಾಯಣ ಅವರು, 31 ಸಂಶೋಧನಾ ವರದಿಗಳನ್ನು ರಾಷ್ಟ್ರೀಯ, ಅಂತರರಾಷ್ಟ್ರೀಯ ‌ಮಟ್ಟದ ನಿಯತಕಾಲಿಕದಲ್ಲಿ ಪ್ರಕಟಿಸಿದ್ದಾರೆ.

ಐವರು ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಮಾರ್ಗದರ್ಶನ ಪೂರ್ಣಗೊಳಿಸಿದ್ದು, ಇನ್ನೂ ಎಂಟು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಸಿಯುಕೆಯಲ್ಲಿ ಇವರ ಅವಧಿ ಗರಿಷ್ಠ 5 ವರ್ಷ ಅಥವಾ 70 ವರ್ಷ ವಯೋಮಿತಿಯವರೆಗೆ  ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

2009-10 ಆರಂಭಗೊಂಡಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಪ್ರಥಮವಾಗಿ ಪ್ರೊ. ಎಂ. ಎ ಪಠಾಣ್ ಕುಲಪತಿಯಾದರೆ ನಂತರ ಎಸ್.ಎಸ್. ಮೂರ್ತಿ ಎರಡನೇ ಹಾಗೂ ಪ್ರೊ.‌ಎಚ್. ಎಂ ಮಹೇಶ್ವರಯ್ಯ ಮೂರನೇ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಸತ್ಯನಾರಾಯಣ ಸಿಯುಕೆಗೆ ನಾಲ್ಕನೇ ಕುಲಪತಿಯಾಗಿದ್ದಾರೆ.

ಇದನ್ನೂ ಓದಿ : ಹಳಿ ಮೇಲೆ ನಿಂತ ಮಳೆ ನೀರು : ಸಾಗರದಿಂದ ಹೊರಡಲಿದೆ ತಾಳಗುಪ್ಪ-ಮೈಸೂರು ರೈಲು

Advertisement

Udayavani is now on Telegram. Click here to join our channel and stay updated with the latest news.

Next