ಕಲಬುರಗಿ: ವಸತಿ ಯೋಜನೆ ಅಡಿಯಲ್ಲಿ ಮಂಜೂರು ಆಗಿರುವ ಮನೆಯನ್ನು ಕೊಡಿಸುವಂತೆ ಕೇಳಿದ್ದಕ್ಕೆ ಕೋಪಗೊಂಡ ಗ್ರಾ. ಪಂ. ಉಪಾಧ್ಯಕ್ಷೆ ಪತಿ ಹಾಗೂ ಮಗ ಸೇರಿ ವ್ಯಕ್ತಿ ಮೇಲೆ ಗಂಭೀರ ಹಲ್ಲೆ ಮಾಡಿದ್ದು. ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಜೇವರ್ಗಿ ತಾಲೂಕಿನ ಆಂದೋಲದಲ್ಲಿ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿಯನ್ನು ಬಸವರಾಜ್ (35) ಎಂದು ಗುರುತಿಸಲಾಗಿದೆ.
ಬಸವರಾಜನಿಗೆ ಆಂದೋಲ ಪಂಚಾಯತಿ ನಲ್ಲಿ ಸರ್ಕಾರಿ ಮನೆ ಮಂಜೂರು ಮಾಡಲು ಪಂಚಾಯತಿ ಉಪಾಧ್ಯಕ್ಷೆ ಗಂಡ ಸಿದ್ದಪ್ಪ ಹಾಗೂ ಮಗ ಗುರುರಾಜ್ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿ ನಮ್ಮ ಬಳಿ ಅಷ್ಟೊಂದು ಹಣ ಇಲ್ಲ ಬಿಲ್ ಬಂದ ಮೇಲೆ ಅದರಲ್ಲಿ ತೆಗೆದಕೊಳ್ಳಲು ಕೊಲೆಯಾದ ಬಸವರಾಜ್ ಮನವಿ ಮಾಡಿಕೊಂಡಿದ್ದ. ಆದರೆ ಅದಕ್ಕೆ ಅವರು ಒಪ್ಪದೇ ಇದ್ದಾಗ, ಮನೆ ನೀಡಲು ಪಂಚಾಯತಿ ಉಪಾಧ್ಯಕ್ಷೆ ಪತಿ ಲಂಚ ಕೇಳುತ್ತಿದ್ದಾರೆ ಎಂದು ಬಸವರಾಜ ಊರವರ ಬಳಿ ಹೇಳಿಕೊಂಡಿದ್ದ. ಇದರಿಂದ ಕೋಪಗೊಂಡ ಉಪಾಧ್ಯಕ್ಷೆ ಪತಿ ಹಾಗೂ ಮಗ ಲಂಚ ಕೇಳಿರುವ ವಿಚಾರವನ್ನು ಊರವರ ಬಳಿ ಯಾಕೆ ಹೇಳಿದ್ದು ಎಂದು ಎದೆ ಹಾಗೂ ಗುಪ್ತಾಂಗಕ್ಕೆ ಕಾಲಿಂದ ಒದ್ದು ಗಂಭೀರ ಹಲ್ಲೆ ಮಾಡಿದ್ದರು.
ಸಿದ್ದಪ್ಪ ಹಾಗೂ ಆತನ ಮಗ ಗುರುರಾಜ್ ನಿಂದ ಹಲ್ಲೆ
ನಾಲ್ಕು ದಿನಗಳ ಹಿಂದೆ ಘಟನೆ ನಡೆದಿತ್ತು. ಗಾಯಾಳು ಬಸವರಾಜ್ ನನ್ನು ಕಲ್ಬುರ್ಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಈ ಸಾವಿಗೆ ಸಿದ್ದಪ್ಪ ಹಾಗೂ ಗುರುರಾಜ್ ಹಲ್ಲೆ ಮಾಡಿರುವುದೇ ಕಾರಣವೆಂದು ಅವರ ವಿರುದ್ಧ ಕೊಲೆ ಆರೋಪ ಹೊರಸಿ ಬಸವರಾಜ್ ಮನೆಯವರು ದೂರು ನೀಡಿದ್ದಾರೆ.
Related Articles
ಘಟನೆ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶೂಟಿಂಗ್ ಹಂತದಲ್ಲೇ ಲೀಕ್ ಆಯ್ತು ʻಜವಾನ್ʼ ಸಿನೆಮಾ ದೃಶ್ಯ… ಫೋಟೋ ವೈರಲ್