Advertisement

2000 ಮೀಟರ್‌ ಉದ್ಧದ ತಿರಂಗ ನಡಿಗೆ

03:06 PM Jan 12, 2020 | Naveen |

ಕಲಬುರಗಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಅಪ್ಪ ನೇತೃತ್ವದ ಕಲಬುರಗಿ ನಾಗರಿಕ ಸಮಿತಿಯಿಂದ ನಗರದಲ್ಲಿ ಶನಿವಾರ ಎರಡು ಸಾವಿರ ಮೀಟರ್‌ ಉದ್ದ, ಐದು ಅಡಿ ಅಗಲದ ಬೃಹತ್‌ ತಿರಂಗ ಧ್ವಜದ ಮೆರವಣಿಗೆ ನಡೆಯಿತು.

Advertisement

ಪೌರತ್ವ ಕಾಯ್ದೆ ಮತ್ತು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಪರ ಜಯ ಘೋಷಗಳೊಂದಿಗೆ ನಗರೇಶ್ವರ ಶಾಲೆಯಿಂದ ಆರಂಭವಾದ ಮೆರವಣಿಗೆ ಪ್ರಮುಖ ಮಾರ್ಗಗಳ ಮೂಲಕ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದವರೆಗೆ ಏಳು ಕಿ.ಮೀ ದೂರ ಸಾಗಿತು.

ಮೆರವಣಿಗೆಯುದ್ದಕ್ಕೂ “ಮೋದಿ ತುಮ್‌ ಆಗೆ ಬಡೋ, ಹಮ್‌ ಪೀಚೆ ಹೈ’ ಎನ್ನುತ್ತಾ ಸಹಸ್ರಾರು ಜನರು ಕೂಡ ಕೈಯಲ್ಲಿ ತಿರಂಗ ಧ್ವಜಗಳನ್ನು ಹಿಡಿದು ಹೆಜ್ಜೆ ಹಾಕಿದರು. ಜಿಲ್ಲೆಯ ವಿವಿಧ ಮಠಾಧೀ ಶರು, ಬಿಜೆಪಿ ನಾಯಕರು, ಶಾಸಕರು, ಹಲವು ಸಂಘಟನೆಗಳ ಪ್ರಮುಖರು, ಯುವಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಭದ್ರತೆಗೆಂದು ಐದು ಸಾವಿರ ಜನ ಪೊಲೀಸರನ್ನು ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next