Advertisement
ಕಲಬುರಗಿ ಉತ್ತರ ಮತ ಕ್ಷೇತ್ರದಲ್ಲಿ 273549 ಮತದಾರರಿದ್ದಾರೆ.ಕಳೆದ 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅತಿ
ಹೆಚ್ಚಿನ 27503 ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರಿಂದ
ಜತೆಗೆ ಅದರ ಹಿಂದಿನ 2009ರ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ
8792 ಮತಗಳು ಬಂದಿದ್ದರಿಂದ ಈ ಸಲ ಕಾಂಗ್ರೆಸ್‌ಗೆ ಎಷ್ಟು
ಹೆಚ್ಚು ಮತಗಳು ಬರುತ್ತದೆಯೋ ಎನ್ನುವುದನ್ನು ಕಾಂಗ್ರೆಸ್ ಪಕ್ಷವಲ್ಲದೇ ಬಿಜೆಪಿಯಲ್ಲೂ ಚರ್ಚೆ ನಡೆಯುತ್ತಿರುವುದನ್ನು ನೋಡಿದರೆ ಕಲಬುರಗಿ ಉತ್ತರಕ್ಕೆ ಎಲ್ಲರ ಕಾತರ ಎನ್ನುವಂತಾಗಿದೆ.
ಅವರ ಪತ್ನಿ ಖನೀಜಾ ಫಾತೀಮಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಖಮರುಲ್ ರಂತೆ ಹೆಚ್ಚಿನ ಸಂಘಟನಾತ್ಮಕ ಹಿಡಿತ ಹೊಂದದಿರುವುದು ಹಾಗೂ ಕ್ಷೇತ್ರದಲ್ಲಿನ ಮುಖಂಡರ ಅಸಮಾನತೆ ಯಾವ ರೀತಿ ಪರಿಣಾಮ
ಬೀರುತ್ತದೆ ಎನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ. ಖಮರುಲ್ ಇಸ್ಲಾಂ ಅವರನ್ನು ಸಚಿವ ಸ್ಥಾನದಿಂದ ಇಳಿಸಿದ್ದರ
ಕುರಿತಾಗಿ ಕ್ಷೇತ್ರದಲ್ಲಿ ಸ್ವಲ್ಪ ಅಸಮಾಧಾನವಿತ್ತು. ಇದೇ ಕಾರಣಕ್ಕೆ ಹಾಗೂ ಪಕ್ಷದ ಮುಖಂಡರೆಲ್ಲರನ್ನು ವಿಶ್ವಾಸದಿಂದ ತೆಗೆದುಕೊಂಡು ಹೋಗುತ್ತಿಲ್ಲ ಎನ್ನುವ ಅಸಮಾಧಾನ ಕ್ಷೇತ್ರದಲ್ಲಿ
ಒಂದು ಸುತ್ತು ಹಾಕಿದಾಗ ಕಂಡು ಬಂತು. ಈ ಅಸಮಾಧಾನ ಚುನಾವಣೆಯಲ್ಲಿ ಯಾವ ನಿಟ್ಟಿನಲ್ಲಿ ಪರಿಣಾಮ ಬೀರಬಹುದು ಎನ್ನುವುದನ್ನು ಕಾಯ್ದು ನೋಡಬೇಕಿದೆ.
Related Articles
Advertisement
ಕಲಬುರಗಿ ಕ್ಷೇತ್ರದಲ್ಲಿ ಮಹಾನಗರದಲ್ಲಿನ ಇತರ ಬಡಾವಣೆಗಳಲ್ಲಿರುವಂತೆ ಕುಡಿಯುವ ನೀರಿನ ಸಮಸ್ಯೆ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಕೆಲ ಬಡಾವಣೆಗಳಲ್ಲಿ ಸಮಸ್ಯೆಯಿದೆ. ಒಳಚರಂಡಿ ಸಮಸ್ಯೆವಿಪರೀತವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ| ಉಮೇಶ ಜಾಧವ ಇಬ್ಬರೂ ಕ್ಷೇತ್ರದಲ್ಲಿ
ಸಂಚರಿಸಿ ಮತಯಾಚಿಸಿದ್ದಾರೆ. ಅಲ್ಪಸಂಖ್ಯಾತರ ಮುಖಂಡರೂ
ಕ್ಷೇತ್ರಕ್ಕೆ ಬಂದು ಮತಯಾಚಿಸಿದ್ದಾರೆ. ಒಟ್ಟಾರೆ ಕಲಬುರಗಿ ಉತ್ತರ
ಮತಕ್ಷೇತ್ರದತ್ತ ಎಲ್ಲರ ಚಿತ್ತ ಹರಿದಿದೆ. 2014ರ ಲೋಕಸಭೆ ಚುನಾವಣೆಯಲ್ಲಿ 27503 ಮತಗಳು ಕಾಂಗ್ರೆಸ್‌ಗೆ ಲೀಡ್ ಬಂದಿದ್ದವು. ಈ ಸಲ ಮತದಾರರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಜತೆಗೆ ಮತಗಳ ವಿಭಜನೆ ಸಾಧ್ಯತೆ ಕಡಿಮೆ ಇರುವುದರಿಂದ ಈ ಸಲವೂ 25 ಸಾವಿರದಿಂದ 30 ಸಾವಿರ ಮತ ಲೀಡ್ ಕಾಂಗ್ರೆಸ್‌ಗೆ ದೊರಕುವ ಸಾಧ್ಯತೆಗಳಿವೆ ಹೆಚ್ಚಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಖನೀಜಾ ಫಾತೀಮಾ ಅವರು 5940 ಹೆಚ್ಚುವರಿ ಮತಗಳಿಂದ ಚುನಾಯಿತರಾಗಿದ್ದರೆ, ಜೆಡಿಎಸ್‌ನ 14422 ಮತಗಳು ಹಾಗೂ ಇತರ ಮತಗಳನ್ನು ಕ್ರೋಢಿಕರಿಸಿದರೆ ಕಳೆದ ಸಲದಷ್ಟೇ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರುವಲ್ಲಿ ಯಾವುದೇ ಅನುಮಾನಗಳಿಲ್ಲ.
ಭೀಮರೆಡ್ಡಿ ಪಾಟೀಲ ಕುರಕುಂದಾ,
ಮಾಜಿ ಮೇಯರ್ ಕಳೆದ ಸಲ ಹಿಂದೂಗಳ ಮತಗಳು ವಿಭಜನೆಯಾಗಿದ್ದರಿಂದ ಕಾಂಗ್ರೆಸ್‌ಗೆ ಹೆಚ್ಚಿನ ಲೀಡ್ ದೊರಕಿತ್ತು. ಆದರೆ ಈ ಸಲ ಮತ ವಿಭಜನೆಯಾಗುವುದು ಕಡಿಮೆ. ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಹವಾ ಇರುವುದರಿಂದ ಪಕ್ಷಕ್ಕೆ ಲಾಭವಾಗುವುದು. ಹೀಗಾಗಿ ಅಚ್ಚರಿ ಎನ್ನುವಂತೆ ಬಿಜೆಪಿಗೆ ಲೀಡ್ ಬರಲಿದೆ. ಕಾಂಗ್ರೆಸ್ ಪಕ್ಷದ ಮತಬ್ಯಾಂಕ್‌ಗೆ ಈ ಸಲ ಹೊಡೆತ ಬೀಳುವುದು ನಿಶ್ಚಿತ.
ಶಿವಾನಂದ ಪಾಟೀಲ ಅಷ್ಟಗಿ,
ಪಾಲಿಕೆ ಸದಸ್ಯ