Advertisement

ಕೆಡಿಪಿ ಸಭೆ ದಿಢೀರ್‌ ಮುಂದೂಡಿಕೆ

11:16 AM Oct 17, 2019 | Naveen |

„ಹಣಮಂತ ರಾವ್‌ ಭೈರಾಮಡಗಿ
ಕಲಬುರಗಿ:
ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬದಲಾದ ನಂತರ ಆಡಳಿತ ಕಾರ್ಯವೈಖರಿಯಲ್ಲಿ ಸ್ವಲ್ಪಾದರೂ ಬದಲಾವಣೆಯಾಗಬಹುದು ಎಂಬ ಜನರ ನಿರೀಕ್ಷೆ ಸುಳ್ಳಾಗುತ್ತಿದೆಯೇ ಎಂಬುದಕ್ಕೆ ಕೆಡಿಪಿ ಸಭೆ ನಡೆಸಲು ಮುಂದಾಗದಿರುವುದು, ಹಿಂದೆ ಮುಂದೆ ನೋಡದೇ ತಮಗೆ ಅನುಕೂಲವಾಗಬಲ್ಲ ಅಧಿಕಾರಿಗಳಿಗೆ ಮಣೆ ಹಾಕುತ್ತಿರುವುದು ಜತೆಗೆ ಆಡಳಿತ ಚುರುಕುಗೊಳ್ಳದಿರುವುದೇ ಇದಕ್ಕೆ ಪ್ರಮುಖ ಸಾಕ್ಷಿ ಎನ್ನಬಹುದಾಗಿದೆ.

Advertisement

ಈ ಹಿಂದೆ ಪ್ರಿಯಾಂಕ್‌ ಖರ್ಗೆ ಅವರು ಒಂದು ವರ್ಷದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವಾವಧಿಯಲ್ಲಿ ಕೇವಲ ಒಂದೇ ಕೆಡಿಪಿ ಸಭೆ ನಡೆಸಿದ್ದರು. ಈಗ ಬಿಜೆಪಿ ಸರ್ಕಾರ ಬಂದು ಎರಡೂವರೆ ತಿಂಗಳು ತಿಂಗಳಾದರೂ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿ ತಿಂಗಳಾದರೂ ಕೆಡಿಪಿ ಸಭೆ ನಡೆಸುವ ಘಳಿಗೆ ಇನ್ನೂ ಕೂಡಿ ಬರುತ್ತಿಲ್ಲ.

ಉಮುಖ್ಯಮಂತ್ರಿಗಳಾಗಿರುವ ಸಮಾಜ ಕಲ್ಯಾಣ ಹಾಗೂ ಲೋಕೋಪಯೋಗಿ ಖಾತೆ ಜತೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಗೋವಿಂದ ಕಾರಳಜೋಳ ಅವರ ಅಧ್ಯಕ್ಷತೆಯಲ್ಲಿ ಅ. 17ರಂದು ನಿಗದಿಯಾಗಿದ್ದ ಕೆಡಿಪಿ ಸಭೆಯನ್ನು ದಿಢೀರ್‌ ಮುಂದೂಡಲಾಗಿದೆ. ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಕೆಡಿಪಿ ಸಭೆ ಬದಲು ಅಧಿಕಾರಿಗಳ ಸಭೆ ಮಾತ್ರ ನಡೆಸಲಾಗುತ್ತಿದೆ.

ವಿಭಾಗೀಯ ಕೇಂದ್ರ ಹೊಂದಿರುವ ಕಲಬುರಗಿ ಜಿಲ್ಲೆಯಲ್ಲಿ ಬರೋಬ್ಬರಿ ಒಂದು ವರ್ಷ ಒಂದು ತಿಂಗಳು ಐದು ದಿನಗಳ ನಂತರ ಕೆಡಿಪಿ ಸಭೆಗೆಮುಹೂರ್ತ ನಿಗದಿ ಮಾಡಲಾಗಿತ್ತು. ಈಗ ಈ
ಸಭೆಯೂ ಮುಂದೂಡಿಕೆಯಾಗಿದೆ. ಮತ್ತೆ ಯಾವಾಗ ಸಭೆ ನಡೆಯುತ್ತದೆ ಎಂಬ ಪ್ರಶ್ನೆ ಎದುರಾಗಿದೆ.

ಬೆಂಗಳೂರಲ್ಲಿ ಸಭೆ: ಡಿಸಿಎಂ ಗೋವಿಂದ ಕಾರಜೋಳ ಅವರು ಸೆಪ್ಟೆಂಬರ್‌ ಸೆ. 27ರಂದು ಬೆಂಗಳೂರಿನ ವಿಕಾಸಸೌಧನ ರೂಂ. ಸಂಖ್ಯೆ 123ರಲ್ಲಿ ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ಇತರ ಪ್ರಮುಖರೊಂದಿಗೆ ಸಭೆ ನಡೆಸಿದ್ದರು. ಕಲಬುರಗಿಗೆ ಬಂದು ಸಭೆ ನಡೆಸುವ ಬದಲು ಬೆಂಗಳೂರಲ್ಲೇ ಸಭೆ ನಡೆಸಿರುವುದಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಜಿಲ್ಲಾ ಉಸ್ತುವಾರಿ ಅಧ್ಯಕ್ಷತೆಯಲ್ಲಿ ನಡೆಯಬೇಕಿರುವ ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆ ಕಳೆದ ಒಂದು ವರ್ಷ, ಒಂದು ತಿಂಗಳಿನಿಂದ ನಡೆದಿಲ್ಲ.

Advertisement

ರಾಜ್ಯದಲ್ಲಿ ಇದೊಂದು ಇತಿಹಾಸವೇ ಎನ್ನಬಹುದು. ಹಿಂದಿನ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ 2018ರ ಸೆಪ್ಟೆಂಬರ್‌ 12ರಂದು ನಡೆಸಿದ್ದೇ ಕೊನೆ ಕೆಡಿಪಿ ಸಭೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next