ಕಲಬುರಗಿ: ಮಹಾಮಾರಿ ಕೊರೊನಾ ಸೋಂಕು ಭೀತಿ ನಡುವೆಯೂ ಮಹಾನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಕಾಳಜಿಗಾಗಿ ಸುರಂಗ ನಿರ್ಮಾಣವಾಗಿದೆ. ಹೌದು, ಜಗತ್ತಿನಾದ್ಯಂತ ಕೊರೊನಾ ಸೃಷ್ಟಿಸಿರುವ ತಲ್ಲಣದಿಂದ ಜನತೆ ಮನೆಗಳಿಂದ ಹೊರ ಬರಲು ಭಯ ಪಡುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಪೌರ ಕಾರ್ಮಿಕರು ನಗರ ಸ್ವಚ್ಛತೆಗಾಗಿ ಸಿಪಾಯಿಗಳಂತೆ ಶ್ರಮಿಸುತ್ತಿದ್ದಾರೆ.
ಮಾರಕ ಕೊರೊನಾವನ್ನು ಲೆಕ್ಕಿಸದೆ ನಿತ್ಯ ಬೆಳಗಾಗುತ್ತಲೇ ಮನೆ-ಮನೆಗೆ ತೆರಳಿ ಕಸ ಸಂಗ್ರಹ, ಚರಂಡಿ ಸ್ವತ್ಛತೆ, ತ್ಯಾಜ್ಯ ವಿಲೇವಾರಿ, ಬೀದಿಗಳನ್ನು ಸ್ವತ್ಛಗೊಳಿಸಿ ಪೌರ ಕಾರ್ಮಿಕರು ನಗರದ ಸೌಂದರ್ಯ ಕಾಪಾಡುತ್ತಿದ್ದಾರೆ. ಅವರ ಹಿತಕ್ಕಾಗಿ, ರಕ್ಷಣೆಗಾಗಿ ಮಹಾನಗರ ಪಾಲಿಕೆ ಸೋಂಕು ಕಳೆಯುವ ಡಿಸ್ ಇನ್‌ಫೆಕ್ಷನ್ ಸುರಂಗ ನಿರ್ಮಿಸಿದೆ.
ಹೇಗೆ ಕೆಲಸ ಮಾಡುತ್ತದೆ?: ಪೌರ ಕಾರ್ಮಿಕರಿಗೆ ಕೊರೊನಾ ಸೋಂಕು ಹರಡಬಾರದು, ಅವರಲ್ಲಿ ಸ್ಥೈರ್ಯ ತುಂಬುವ ಹಾಗೂ ಸುರಕ್ಷತಾ ಕ್ರಮವಾಗಿ ನಗರದ ಇಂದಿರಾ ಸ್ಮಾರಕ ಭವನ (ಟೌನ್‌ಹಾಲ್)ದ ಆವರಣದಲ್ಲಿ ಈ ಸುರಂಗ ಸ್ಥಾಪಿಸಲಾಗಿದೆ. ಸುರಂಗದ ಮೂಲಕ ಪೌರ ಕಾರ್ಮಿಕರಿಗೆ ಸೋಂಕು ಕಳೆಯುವ ಸೋಡಿಯಂ ಹೈಪೋಕೋÉರೈಟ್ ಮಿಶ್ರಣದ ನೀರು ಸಿಂಪಡಿಸಲಾಗುತ್ತದೆ. ಸುರಂಗದ ಮಾರ್ಗದಲ್ಲಿ ಹನಿ ನೀರಾವರಿ ಮಾದರಿ ಪೈಪ್‌ಗ್ಳನ್ನು ಅಳವಡಿಸಲಾಗಿದ್ದು, ರಂಧ್ರಗಳ ಮೂಲಕ ಪೌರ ಕಾರ್ಮಿಕರ ಮೇಲೆ ವೈರಾಣು ನಾಶದ ದ್ರಾವಣ ಚಿಮ್ಮುತ್ತದೆ. ನಿತ್ಯವೂ ಕೆಲಸಕ್ಕೆ ಹಾಜರಾಗುವ ಮುನ್ನ ಮತ್ತು ಮನೆಗೆ ಹೋಗುವ ವೇಳೆಗೆ ಕಾರ್ಮಿಕರು ಸುರಂಗದಲ್ಲಿ ಒಮ್ಮೆ ಹಾಯ್ದುಹೋಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲಿದ್ದಾರೆ.
ಸುರಂಗಕ್ಕಾಗಿ 500 ಲೀಟರ್ ಸಾಮರ್ಥಯದ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ. ನೀರು ಚಿಮ್ಮುವ ವ್ಯವಸ್ಥೆಗಾಗಿ 10 ಎಚ್‌ಪಿ ಮೋಟರ್ ಅಳವಡಿಸಲಾಗಿದೆ. ಅಡ್ಡ ಪರಿಣಾಮಗಳು ಬೀರದಂತೆ ಜಾಗೃತಿ ವಹಿಸಲು ಒಂದು ಸಾವಿರ ಲೀಟರ್ ನೀರಿಗೆ ಕೇವಲ 100 ಎಂಎಲ್ ಹೈಪೋಕ್ಲೋರೈಟ್ ಮಿಶ್ರಣ ಮಾಡಲಾಗುತ್ತದೆ. ದ್ರಾವಣ ಸಿಂಪರಣೆಯಿಂದ ಪೌರ ಕಾರ್ಮಿಕರ ಸುರಕ್ಷತೆ, ಅವರಲ್ಲಿನ ಭೀತಿ ದೂರವಾಗಿಸುವ ಕೆಲಸವನ್ನು ಪಾಲಿಕೆ ಮಾಡುತ್ತಿದೆ ಎನ್ನುತ್ತಾರೆ ಆಯುಕ್ತ ರಾಹುಲ್ ಪಾಂಡ್ವೆ.
1300 ಸಿಬ್ಬಂದಿ ಶ್ರಮ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಯಂ ಹಾಗೂ ಗುತ್ತಿಗೆ ಆಧಾರದ ಒಟ್ಟಾರೆ 1300 ಸಿಬ್ಬಂದಿ ದುಡಿಯುತ್ತಿದ್ದಾರೆ. ಸ್ವಚ್ಛತಾ ಸಿಬ್ಬಂದಿ, ಪೌರ ಕಾರ್ಮಿಕರು, ಕಸ ವಿಲೇವಾರಿ ಚಾಲಕರು ನಗರದ ಸ್ವತ್ಛತೆಗಾಗಿ ಶ್ರಮಿಸುತ್ತಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈಗಾಗಲೆ ಎಲ್ಲರ ಕೈಗಳಿಗೆ ಗ್ಲೌಸ್, ಶೂಗಳು ಮತ್ತು ಮಾಸ್ಕ್ ವಿತರಿಸಲಾಗಿದೆ. ಕಾರ್ಮಿಕರಿಗೆ ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳುತ್ತಾರೆ ಪರಿಸರ ಅಭಿಯಂತರ ಮುನಾಫ್ ಪಟೇಲ್. ಪೌರ ಕಾರ್ಮಿಕರ ಕಾಳಜಿ ವಹಿಸಲು ಪಾಲಿಕೆ ವತಿಯಿಂದ ಈಗ ಸೋಂಕು ಕಳೆಯುವ ಡಿಸ್ ಇನ್‌ಫೆಕ್ಷನ್ ಸುರಂಗ ನಿರ್ಮಿಸಲಾಗಿದೆ. 20
ಸೆಕೆಂಡ್‌ನಿಂದ ಒಂದು ನಿಮಿಷ ಕಾಲ ಸುರಂಗದಲ್ಲಿ ಹಾಯ್ದುಹೋಗುವ ಮೂಲಕ ಪೌರ ಕಾರ್ಮಿಕರ ಮೇಲಿನ ಯಾವುದೇ ರೀತಿಯ ಸೋಂಕು ಇದ್ದರೂ ನಿವಾರಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಪೌರ ಕಾರ್ಮಿಕರಿಗೆ ಮೀಸ ಲು ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರು, ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಲ್ಲಿ ಡಿಸ್‌ಇನ್‌ಫೆಕ್ಷನ್ ಸುರಂಗಗಳನ್ನು ಸ್ಥಾಪಿಸಲಾಗಿದೆ. ಹೈದ್ರಾಬಾದ ಕರ್ನಾಟಕ ಭಾಗದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಇಂತಹ ಸುರಂಗ ನಿರ್ಮಿಸಲಾಗಿದೆ. ಈ ಸುರಂಗದ ವಿಶೇಷವೆಂದರೆ ಪೌರ ಕಾರ್ಮಿಕರಿಗೆಂದೇ ಸದ್ಯಕ್ಕೆ ಮೀಸಲಿರಿಸಲಾಗಿದೆ. ಉಳಿದ ನಗರಗಳಲ್ಲಿ ಸುರಂಗಗಳು ಸಾರ್ವಜನಿಕರ ಬಳಕೆಗೆ ಮುಕ್ತವಾಗಿವೆ.
ಕಲಬುರಗಿ ಮಹಾನಗರ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಯಾವುದೇ ರೀತಿಯ ವೈರಾಣು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಡಿಸ್‌ಇನ್‌ಫೆಕ್ಷನ್
ಸುರಂಗ ನಿರ್ಮಿಸಲಾಗಿದೆ. ಇದರಿಂದ ಪೌರ ಕಾರ್ಮಿಕರಿಗೆ ಸ್ಥೈರ್ಯ ತುಂಬಿದಂತೆ ಆಗುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ಸಾರ್ವಜನಿಕರ ಉಪಯೋಗಕ್ಕೂ
ಕಲ್ಪಿಸಲಾಗುವುದು.
ರಾಹುಲ್ ಪಾಂಡ್ವೆ, ಆಯುಕ್ತರು,
ಮಹಾನಗರ ಪಾಲಿಕೆ
ರಂಗಪ್ಪ ಗಧಾರ