Advertisement

ಐದು ವರ್ಷಗಳಿಂದ ಪ್ರೀತಿಸಿ ಮದುವೆಗೆ ಒಲ್ಲೆ ಎಂದ ಯುವಕನಿಗೆ ಠಾಣೆ ಮುಂದೆ ಯುವತಿಯಿಂದ ಧರ್ಮದೇಟು

06:40 PM Sep 19, 2021 | Team Udayavani |

ಕಲಬುರಗಿ: ಕಳೆದ ಐದಾರು ವರ್ಷಗಳಿಂದ ಪರಸ್ಪರ ಪ್ರೀತಿಸಿ, ಈಗ ಮದುವೆಯಾಗಲು ಯುವಕ ಹಿಂದೇಟು ಹಾಕುತ್ತಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಆತನಿಗೆ ಪೊಲೀಸ್ ಠಾಣೆಯ ಮುಂದೆಯೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದಲ್ಲಿ ರವಿವಾರ ನಡೆದಿದೆ.

Advertisement

ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ನಿವಾಸಿ ಇರ್ಫಾನ್ ಶೇಖ್ ಎಂಬಾತನೇ ಥಳಿತಕ್ಕೊಳಾಗದ ಯುವಕ. ಬೆಂಗಳೂರು ಮೂಲದ ರಹೀನಾ ಎಂಬಾಕೆ ಯುವಕನಿಗೆ ಹಲ್ಲೆಗೈದ ಯುವತಿ.

ಬೆಂಗಳೂರಿನಲ್ಲಿ ಪರಿಚಯವಾಗಿದ್ದ ಇರ್ಫಾನ್ ಪ್ರೀತಿಸಿ ನನಗೆ ಮೋಸ ಮಾಡಿದ್ದೇನೆ. ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಅಲ್ಲದೇ, ಇಲ್ಲದ ಕಥೆ ಕಟ್ಟುತ್ತಿದ್ದಾನೆ ಎಂದು ಆಕ್ರೋಶಗೊಂಡ ಯುವತಿ ಮನಬಂದಂತೆ ಥಳಿಸಿದ್ದಾಳೆ. ಪ್ರಿಯಕನಿಗೆ ಕಪಾಳಕ್ಕೆ ಬಾರಿಸುತ್ತಾ, ಕಾಲಿನಿಂದ ಒದ್ದು ತನ್ನ ಸಿಟ್ಟು ಹೊರಹಾಕಿದ್ದಾಳೆ.

ಏನಿದರ ಹಿನ್ನೆಲೆ?: ಬೆಂಗಳೂರಿನಲ್ಲಿ ಶೋರೂಮ್ ವೊಂದರಲ್ಲಿ ಕೆಲಸ ಮಾಡಿಕೊಂಡಿರುವ ರಹೀನಾ ಮತ್ತು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇರ್ಫಾನ್ ನಡುವೆ ಸ್ನೇಹಿತನ ಮೂಲಕ ಪರಿಚಯವಾಗಿತ್ತು. ನಂತರ ಇರ್ಫಾನ್ ಮತ್ತು ರಹೀನಾ ಇಬ್ಬರ ನಡುವೆ ಸಲುಗೆ ಬೆಳೆದು ಅದು ಪ್ರೀತಿಗೆ ತಿರುಗಿತ್ತು. ಅಲ್ಲಿ, ಇಲ್ಲಿ ಅಂತ ಸುತ್ತಾಟ ಕೂಡ ನಡೆದಿತ್ತು. ಅಲ್ಲದೇ,‌ ಮದುವೆಗೆ ಆಗುವುದಾಗಿ ಹೇಳಿ ರಹೀನಾ ಜತೆ ಇರ್ಫಾನ್ ದೈಹಿಕ ಸಂಬಂಧ ಸಹ ಬೆಳೆಸಿದ್ದ ಎನ್ನಲಾಗಿದೆ.

ಇದನ್ನೂ ಓದಿ :ಪರ್ಕಳ ರಾ.ಹೆ.169 ರಸ್ತೆ ಅವ್ಯವಸ್ಥೆ : ಭೂ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಲು ಆಗ್ರಹ

Advertisement

ಇದರಿಂದ ಆಕೆ ಮೂರು ತಿಂಗಳ ಗರ್ಭಿಣಿಯಾದ ವಿಷಯವನ್ನು ಪ್ರಿಯಕನಿಗೆ ತಿಳಿಸಿದ್ದಳು. ಆದರೆ. ಇರ್ಫಾನ್ ಗರ್ಭಪಾತ ಮಾಡಿಸಿದ ಬಳಿಕ ಮದುವೆಯಾಗುವ ಯೋಚನೆ ಮಾಡೋಣ ಎಂದು ಹೇಳಿದ್ದ. ಆದರೆ, ಈ ನಡುವೆ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕಲಬುರಗಿಗೆ ಇರ್ಫಾನ್ ಬಂದು ಇಲ್ಲೇ ಉಳಿದಿದ್ದಾನೆ ಎಂಬುವುದು ಯುವತಿಯ ಆರೋಪ.

ಇಷ್ಟೇ ಅಲ್ಲ, ಕಲಬುರಗಿಗೆ ಬಂದ ಸೇರಿದ ಬಳಿಕ ಲಾಕ್ ಡೌನ್ ಮುಗಿದ ಬಳಿಕ ಮದುವೆಯಾಗುವುದಾಗಿ ಹೇಳಿದ್ದ. ಆದರೆ, ಈಗ ಬೇರೆಯರವನ್ನು ಮದುವೆಯಾಗು, ನನ್ನ ತಂದೆ-ತಾಯಿ ನನಗೆ ಬೇರೆ ಹುಡುಗಿಯನ್ನು ನೋಡುತ್ತಿದ್ದಾರೆ ಎಂದು ಹೇಳಿದ್ದನಂತೆ. ಹೀಗಾಗಿ ಈ ಹಿಂದೆಯೇ ಒಮ್ಮೆ ಪ್ರಿಯಕರನನ್ನು ಹುಡುಕಿಕೊಂಡು ಆಕೆ ಬಂದಿದ್ದಳು. ಆಗ ಇರ್ಫಾನ್ ಕುಟುಂಬದವರು ಸೇರಿಕೊಂಡು
ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಗೆಂದು ಅರ್ಜಿ ಮೇಲೆ ಸಹಿ ಮಾಡಿಸಿಕೊಂಡರು.‌ ಆದರೆ, ಬಳಿಕ ಮತ್ತೆ ಇರ್ಫಾನ್ ಮದುವೆ ಆಗುವುದಿಲ್ಲ ಎಂದು ನಿರಾಕರಿಸುತ್ತಿದ್ದಾನೆ ಎಂದು ಅಕೆ ದೂರಿದ್ದಾಳೆ.

ಇತ್ತ ನಾನು ರಹೀನಾಳನ್ನು ಪ್ರೀತಿಸುತ್ತಿರಲಿಲ್ಲ. ಕೇವಲ ಸ್ನೇಹಿತರಾಗಿದ್ದೇವು ಎಂದು ಇರ್ಫಾನ್ ಹೇಳಿದ್ದಾನೆ. ಅಲ್ಲದೇ, ನನ್ನ ಸ್ನೇಹಿತನಾಗಿರುವ ಅಜರ್ ಎಂಬಾತ ಆಕೆಯನ್ನು ಪ್ರೀತಿಸುತ್ತಿದ್ದ. ನಾನು ಯಾವುದೇ ಹೊಂದಿಲ್ಲ. ಈಕೆ ಕೆಲ ಫೋಟೋಗಳನ್ನೇ ಹಿಡಿದುಕೊಂಡು ನನಗೆ ಮದುವೆಯಾಗುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಇರ್ಫಾನ್ ಆರೋಪಿಸಿದ್ದಾನೆ.

ಇನ್ನು, ಪೊಲೀಸ್ ಠಾಣೆ ಮುಂದೆ ಗಲಾಟೆ ನಂತರ ಅಲ್ಲಿನ ಪೊಲೀಸರು, ಇದು ಮಹಿಳಾ ಠಾಣೆಗೆ ಸಂಬಂಧಪಟ್ಟ ವಿಷಯ. ಹೀಗಾಗಿ ಅಲ್ಲಿಗೆ ಹೋಗಿ ಎಂದು ತಿಳಿಸಿದ್ದರು. ಆದರೆ, ಯುವತಿಯಾಗಲಿ, ಯುವಕನಾಗಲಿ ಎಲ್ಲಿಯೂ ಯಾವುದೇ ದೂರು ನೀಡಿಲ್ಲ ಎಂದು ಪೊಲೀಸ್ ಅಧಿಕಾರಿಗಳ ಮಾಹಿತಿ.‌

Advertisement

Udayavani is now on Telegram. Click here to join our channel and stay updated with the latest news.

Next