ಕಲಬುರಗಿ : ತನ್ನ ಹೆಂಡತಿ ಪರಸಂಗ ಮಾಡಿ ಮನೆ ಬಿಟ್ಟು ಹೋದಳು ಎನ್ನುವ ಸಿಟ್ಟಿನಲ್ಲೋ, ಆವಮಾನದಲ್ಲೋ ತಂದೆಯೊಬ್ಬ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕೈಯಿಂದ ಕತ್ತು ಹಿಸುಕಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಗರದ ಭೋವಿ ಗಲ್ಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಆವ್ವ ಯಾರೊಂದಿಗೋ ಓಡಿ ಹೋದ ತಪ್ಪಿಗೆ ಆಪ್ಪನಿಂದ ಕೊಲೆಯಾದ ನತದೃಷ್ಟ ಬಾಲಕಿಯರನ್ನು ಸೋನಿ(11) ಮಯೂರಿ(10) ಎಂದು ಗುರುತಿಸಲಾಗಿದೆ. ಕತ್ತು ಹಿಚುಕಿ ಕೊಲೆ ಮಾಡಿದ ನಿರ್ದಯಿ ತಂದೆಯನ್ನು ಆಟೋ ಚಾಲಕ ಲಕ್ಷ್ಮಿಕಾಂತ ಎಂದು ಗುರುತಿಸಲಾಗಿದೆ.
ಆಟೋದಲ್ಲಿ ಶವ ಇಟ್ಟು ತಿರುಗಿದ!
ಲಕ್ಷ್ಮಿಕಾಂತ್ ಪತ್ನಿ ಪರ ಪುರುಷನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ಇದರಿಂದಾಗಿ ತನ್ನ ನಾಲ್ಕು ಮಕ್ಕಳ್ನನು ಅಜ್ಜಿಯ ಮನೆಗೆ ಕಳಿಸಿದ್ದ. ವಾರದ ಬಳಿಕ ಮೊನ್ನೆಯಷ್ಟೇ ಸೋನಿ ಮತ್ತು ಮಯೂರಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಭಾನುವಾರ, ಸೋಮವಾರ ಎರಡೂ ದಿನ ಮಕ್ಕಳನ್ನು ದಿನವಿಡೀ ಅಟೋದಲ್ಲಿ ಊರು ಸುತ್ತಿಸಿ ಬೇಡಿದ್ದೆಲ್ಲ ಕೊಡಿಸಿದ್ದ ಅಪ್ಪ. ಮಂಗಳವಾರ ಸಂಜೆ ಇಬ್ಬರು ಮಕ್ಕಳನ್ನು ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ. ಬಳಿಕ ಶವನ್ನು ಬುಧವಾರ ಬೆಳಗ್ಗೆಯಿಂದ ಆಟೋದಲ್ಲಿ ತೆಗೆದುಕೊಂಡು ತಿರುಗಿದ್ದಾನೆ. ಸಂಜೆ ಹೊತ್ತಿಗೆ ಇನ್ನಿಬರು ಮಕ್ಕಳ ಸಮೇತ ಮೃತದೇಹದೊಂದಿಗೆ ಎಂ.ಬಿ.ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಇದನ್ನೂ ಓದಿ : ಆಸ್ಕರ್ ಸಿನಿಮಾ ಸಮಿತಿಗೆ ತಮಿಳು ನಟ ಸೂರ್ಯ, ಬಾಲಿವುಡ್ ನಟಿ ಕಾಜೋಲ್