Advertisement

ಮತ್ತೆ 39 ಜನರಿಗೆ ಸೋಂಕು

12:05 PM Jun 22, 2020 | Naveen |

ಕಲಬುರಗಿ: ಜಿಲ್ಲೆಯಲ್ಲಿ ರವಿವಾರ 39 ಜನರಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಮರಳಿದ 39 ಮಂದಿ, ಪಾಸಿಟಿವ್‌ ಸೋಂಕಿತರ ಸಂಪರ್ಕಕ್ಕೆ ಬಂದ ಏಳು ಮಂದಿ, ತೆಲಂಗಾಣ ಪ್ರವಾಸ ಹಿನ್ನೆಲೆಯಲ್ಲಿ ಇಬ್ಬರು ಮತ್ತು ಅಂತರ ಜಿಲ್ಲಾ ಪ್ರವಾಸ ಹಿನ್ನೆಲೆಯಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟಿದೆ.

Advertisement

ಇದೇ ವೇಳೆ ಒಂಭತ್ತು ಜನ ಕೋವಿಡ್ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಚಿಂಚೋಳಿ ತಾಲೂಕಿನ ಏಳು, ಚಿತ್ತಾಪುರ ಮತ್ತು ಸೇಡಂ ತಾಲೂಕಿನ ತಲಾ ಒಬ್ಬರು ಬಿಡುಗಡೆ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ 1,199 ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇದರಲ್ಲಿ 697 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

491 ಸೋಂಕಿತರಿಗೆ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 39 ಸೋಂಕಿತರಲ್ಲಿ ಅತಿಹೆಚ್ಚು ಪ್ರಕರಣಗಳು ಚಿತ್ತಾಪುರ (16) ತಾಲೂಕಿನಲ್ಲಿ ದೃಢಪಟ್ಟಿವೆ. ಅಫಜಲಪುರದಲ್ಲಿ 9, ಚಿಂಚೋಳಿಯಲ್ಲಿ 5, ಕಲಬುರಗಿಯಲ್ಲಿ ನಾಲ್ಕು, ಆಳಂದ, ಸೇಡಂನಲ್ಲಿ ಇಬ್ಬರಿಗೆ ಕೋವಿಡ್ ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next