Advertisement

ಮಹಿಳೆಗೆ ಸಮಾಜದ ಚಿಂತೆಯೂ ಅವಶ್ಯ

12:38 PM Apr 12, 2019 | |

ಕಲಬುರಗಿ: ಮಹಿಳೆಗೆ ಮನೆ ಬಗ್ಗೆ ಹೆಚ್ಚು ಯೋಚನೆ, ಚಿಂತೆ ಇರುತ್ತದೆ. ಮನೆ ಜತೆಗೆ ಸಮಾಜದ ಚಿಂತೆಯೂ ಇರಬೇಕೆಂದು ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ, ಬಿಜೆಪಿ ನಾಯಕಿ ಕೆ.ರತ್ನಪ್ರಭಾ ಹೇಳಿದರು.

Advertisement

ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಹೈ.ಕ ಭಾಗದ  ಭಿವೃದ್ಧಿಯಲ್ಲಿ
ಮಹಿಳೆಯರ ಪಾತ್ರ’ ಎನ್ನುವ ಮಹಿಳಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳೆಯಿಂದಲೇ ಮನೆ ಕೆಲಸ, ಕಾರ್ಯಗಳು ಸುಸೂತ್ರವಾಗಿ ನಡೆಯಲು ಸಾಧ್ಯ. ಮಹಿಳೆ ಇಲ್ಲದೆ ಇದ್ದರೆ ಇಡೀ ಮನೆ ಅಸ್ತವ್ಯಸ್ತವಾಗುತ್ತದೆ ಎಂದರು.

ಮಹಿಳೆ ಮನೆಗೆ ಮಾತ್ರವೇ ಸೀಮಿತಗೊಳ್ಳದೇ ಸಮಾಜದ ಆಗು-ಹೋಗುಗಳ ಬಗ್ಗೆ ಯೋಚಿಸಬೇಕು. ಶಾಲೆಯಲ್ಲಿ ಶಿಕ್ಷಕರಿಲ್ಲ, ನೀರು ಪೂರೈಕೆ ಆಗುತ್ತಿಲ್ಲ. ರಸ್ತೆ ಸರಿ ಇಲ್ಲವೆಂದು ಮನೆಯಲ್ಲಿ ಕುಳಿತು ಮಾತನಾಡಿಕೊಳ್ಳುತ್ತೇವೆ. ಆದರೆ, ಇದಕ್ಕೆ ಕಾರಣಿಕರ್ತರು ಯಾರೆಂದು ಆಲೋಚಿಸಬೇಕು. ನಮ್ಮ ಲೀಡರ್‌ ಯಾರು ಎಂದು ತಿಳಿದುಕೊಳ್ಳಬೇಕು ಎಂದರು.

ಮನೆಯೇ ನಮ್ಮ ಜೀವನ ಬದಲಾವಣೆ ಮೊದಲ ಮೆಟ್ಟಿಲು. ಹೆಣ್ಣು ಮತ್ತು ಗಂಡು ಇಬ್ಬರನ್ನೂ ಸಮವಾಗಿ ನೋಡುವ ಕೆಲಸ ಮನೆಯಿಂದ ಆರಂಭವಾಗಬೇಕು. ಮಹಿಳೆಯೊಂದಿಗೆ ಪುರುಷನ ವರ್ತನೆಯೂ ಬದಲಾಗಬೇಕು. ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಸಿಕ್ಕಾಗ ಯಾವ ಮಹಿಳೆ ಕೂಡ ಸ್ಪರ್ಧೆಗೆ ಮುಂದೆ ಬರಲಿಲ್ಲ. ಆಗ ರಾಜಕಾರಣಿಗಳು ತಮ್ಮ
ಪತ್ನಿಯರನ್ನು ಚುನಾವಣೆಗೆ ನಿಲ್ಲಿಸಿದರು. ಗೆದ್ದ ನಂತರ ಪತ್ನಿಯರು ಪತಿಯೊಂದಿಗೆ ಕಚೇರಿಗೆ ಬರುತ್ತಿದ್ದರು. ದಿನ ಕಳೆದಂತೆ ಸ್ವತಂತ್ರ್ಯವಾಗಿ
ಮಹಿಳೆ ಬರತೊಡಗಿದಳು. ಹೀಗೆ ಮಹಿಳೆಗೆ ಪ್ರೋತ್ಸಾಹ ಸಿಕ್ಕರೆ ಮತ್ತಷ್ಟು ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.

ಹೈದ್ರಾಬಾದ ಕರ್ನಾಟಕ ಭಾಗದ ಬೀದರ್‌, ರಾಯಚೂರು ಜಿಲ್ಲಾಧಿಕಾರಿಯಾಗಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆಯಾಗಿ ನಾನು ಕಾರ್ಯ ನಿರ್ವಹಿಸಿದ್ದೇನೆ. ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ
ಮಹಿಳೆಯರಿಗೆ ಆಟೋ ಚಾಲನೆ ಹೇಳಿಕೊಟ್ಟು ಅವರಿಗೆ ಆಟೋ ವಿತರಿಸಲಾಯಿತು. ಇಂದಿಗೂ ಅಲ್ಲಿನ ಮಹಿಳೆಯರು ಆಟೋ ಚಾಲನೆಯಿಂದ
ಸ್ವಾವಲಂಬನೆ ಜೀವನ ಸಾಗಿಸುತ್ತಿದ್ದಾರೆ ಎಂದು ಸ್ಮರಿಸಿದರು.

Advertisement

ಹುದ್ದೆ ಕೊಡಲು ಚರ್ಚೆ: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆ ನನಗೆ ಕೊಡಲು ತುಂಬಾ ಚರ್ಚೆ ನಡೆದಿತ್ತು. ಇದುವರೆಗೂ ಈ ಹುದ್ದೆಯನ್ನು ಮಹಿಳೆ ನಿರ್ವಹಿಸಿಲ್ಲ ಎನ್ನುವ ಮಾತುಗಳು
ಕೇಳಿಬಂದವು. ಆದರೆ, ಹಠ ಮಾಡಿ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆ ವಹಿಸಿಕೊಂಡೆ. ಭಾರತದಲ್ಲಿ ಮೊದಲ ಬಾರಿಗೆ ಕಲಬುರಗಿಯಲ್ಲಿ ಮಹಿಳಾ ಕೈಗಾರಿಕಾ ಪಾರ್ಕ್‌ ಸ್ಥಾಪಿಸಲಾಯಿತು. ಆಗಲೇ ಮಹಿಳೆಯರಿಗೂ ಕೈಗಾರಿಕೆಯಲ್ಲಿ ಆಸಕ್ತಿ ಇರೋದು ಗೊತ್ತಾಯಿತು ಎಂದರು.

ಬಸಂತಿ ಘಂಟಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಬಿಜೆಪಿ ಮಹಿಳಾ ಅಧ್ಯಕ್ಷೆ ವಿದ್ಯಾ ಹಾಗರಗಿ ಸೇರಿದಂತೆ ಹಲವು ಮಹಿಳೆಯರು ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಪ್ರಗತಿಯ ದೂರದೃಷ್ಟಿ ಇದೆ.
ದೇಶ ಸಾಕಷ್ಟು ಅಭಿವೃದ್ಧಿ ಹೊಂದಬೇಕು. ಜಗತ್ತಿನಲ್ಲಿ ದೇಶವನ್ನು ಮುಂದೆ ತರಬೇಕೆಂಬ ಅಭಿಲಾಷೆ ಹೊಂದಿದ್ದಾರೆ. ಮಹಿಳೆಯರ ಸಬಲೀಕರಣ ಕನಸನ್ನು ಮೋದಿ ಕಂಡಿದ್ದಾರೆ.
.ಕೆ.ರತ್ನಪ್ರಭಾ, ಬಿಜೆಪಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next